ವಾಣಿಜ್ಯ ಜಾಹಿರಾತು

ಪಾಲಕ್ ಸೊಪ್ಪಿನ ಆರೋಗ್ಯಕಾರಿ ಪ್ರಯೋಜನಗಳು ಅಗಣಿತವಾದವು. ಪಾಲಕ್ ಸೊಪ್ಪಿನಲ್ಲಿ ವಿಟಮಿನ್‌ಗಳು, ಖನಿಜಾಂಶಗಳು ಹಾಗೂ ಆಂಟಿ ಆಕ್ಸಿಡೆ೦ಟ್‌ಗಳಿವೆ.  ಒಂದು ವೇಳೆ ನಿಮಗೆ ಪಾಲಕ್ ಸೊಪ್ಪಿನ ಸ್ವಾದವು ಇಷ್ಟವಾಗುವುದಿಲ್ಲವೆಂದಾದರೂ ಕೂಡ, ನೀವು ಪಾಲಕ್ ಸೊಪ್ಪನ್ನು ಬೇರೆ ಯಾವುದಾದರೂ ತರಕಾರಿಯೊಂದಿಗೆ ಬೆರೆಸಿಕೊಂಡು ಸೇವಿಸಬಹುದು.
ಆದರೆ, ನೀವು ಮಾತ್ರ ಯಾವುದೇ ಕಾರಣಕ್ಕಾಗಿಯಾದರೂ ಸಹ, ಪಾಲಕ್ ಸೊಪ್ಪಿನ ಆರೋಗ್ಯಕಾರಿ ಪ್ರಯೋಜನಗಳಿಂದ ವಂಚಿತರಾಗಬಾರದು. ಏಕೆಂದರೆ, ಪಾಲಕ್ ಸೊಪ್ಪು ಆರೋಗ್ಯಕ್ಕೆ ಬಹಳ ಒಳ್ಳೆಯದು.

ವಸಡುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ

ವಸಡುಗಳಿಂದ ರಕ್ತ ಸೋರುವಿಕೆಯನ್ನು ಗುಣಪಡಿಸುವುದಕ್ಕಾಗಿ, ಕ್ಯಾರೆಟ್ ಸಲಾಡ್‌ನೊಂದಿಗೆ ಪಾಲಕ್ ಸೊಪ್ಪಿನ ಜ್ಯೂಸ್‌ನ್ನು ಕುಡಿಯಿರಿ. ಈ ಆಹಾರ ಕ್ರಮದ ಮೂಲಕ ನೀವು ವಿಟಮಿನ್ ‘ಸಿ’ ಯ ಕೊರತೆಯನ್ನು ಸರಿದೂಗಿಸಿಕೊಳ್ಳಬಹುದು.

ಗರ್ಭಿಣಿಯರಿಗೆ ಒಳ್ಳೆಯದು

ಪಾಲಕ್ ಸೊಪ್ಪು ಗರ್ಭದಲ್ಲಿರುವ ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಮುಖ್ಯವಾಗಿ ಇದರಲ್ಲಿ ಸಾಕಷ್ಟು ಫೊಲೇಟ್ ವಿಟಮಿನ್ ಇದೆ. ಇದು ಶಿಶುವಿನ ಸ್ಪೆನಾ ಬೈಫಿಡಾದಂತಹ ನರ ಕೊಳವೆಯ ಜನ್ಮ ದೋಷಗಳನ್ನು ತಡೆಯಲು ಸಹಕಾರಿಯಾಗಿದೆ. ಪಾಲಕ್ ನಲ್ಲಿ ವಿಟಮಿನ್ ‘ಬಿ6’ ಇದ್ದು, ಇದು ಮಗುವಿನ ಮೆದುಳಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಹೃದಯದ ರಕ್ತನಾಳದ ಆರೋಗ್ಯ

ಪಾಲಕ್ ಸೊಪ್ಪು ಅಜೈವಿಕ ನೈಟ್ರೇಟ್‌ನ ಮೂಲವಾಗಿದ್ದು, ಇದು ಹೃದ್ರೋಗವನ್ನು ಪಡೆಯುವ ಸಾಧ್ಯತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಪಾಲಕ್‌ನಿಂದ ಪೊಟ್ಯಾಷಿಯಂ ಕೂಡ ಪಡೆಯಬಹುದು, ಇದು ಹೃದಯವನ್ನು ಸರಿಯಾಗಿ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ. ಅಷ್ಟೇ ಅಲ್ಲ, ಇದು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

ಉರಿಯೂತ ಹಾಗು ಗಾಯಗಳನ್ನು ಗುಣಪಡಿಸುತ್ತದೆ


ಪಾಲಕ್‌ನಲ್ಲಿರುವ ವಿಟಮಿನ್ ಸಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ನಿಮ್ಮ ಗಾಯಗಳನ್ನು ಗುಣಪಡಿಸಲು ಸಹಾಯಕವಾಗಿದೆ. ಗಾಯವಾದ ನಂತರ ಉರಿಯೂತದ ತೊಂದರೆಯನ್ನು ಅನುಭವಿಸಬೇಕಾಗಬಹುದು. ಇದು ದೀರ್ಘಕಾಲದ ಉರಿಯೂತವು ಅನಾರೋಗ್ಯಕರವಾಗಿಸುತ್ತದೆ.
ವಾಸ್ತವವಾಗಿ, ಪಾಲಕ್ ಸೊಪ್ಪು ಉರಿಯೂತ ವಿರೋಧಿಯಾಗಿದೆ. ಹಾಗಾಗಿ ನೀವು ಇಂತಹ ಆಹಾರವನ್ನು ಸೇವಿಸಿದಾಗ ಸಹಜವಾಗಿಯೇ ಉರಿಯೂತವನ್ನು ಕಡಿಮೆ ಮಾಡಿಕೊಳ್ಳಬಹುದು.

ಕಣ್ಣುಗಳನ್ನು ಆರೋಗ್ಯಕರವಾಗಿಸುತ್ತದೆ

ನಿಮಗೆಲ್ಲಾ ಸಾಮಾನ್ಯವಾಗಿ ತಿಳಿದಿದೆ. ಅದೆನೆಂದರೆ, ಪಾಲಕ್ ಸೊಪ್ಪು ಕಣ್ಣುಗಳಿಗೆ ಅತ್ಯುತ್ತಮವಾದುದು ಎಂದು. ಇದು ಲುಟೀನ್ ಮತ್ತು ಝೀಕ್ಸಾಂಥಿನ್ ಪಾಲಕ್ ನಲ್ಲಿರುವ ಕ್ಯಾರೊಟಿನಾಯ್ಡ್‌ಗಳಾಗಿದ್ದು, ಇದು ದೀರ್ಘಾವಧಿಯ ಹಾಗು ಆರೋಗ್ಯಕರವಾದ ಕಣ್ಣುಗಳನ್ನು ಪಡೆಯಲು ಸಹಾಯ ಮಾಡುತ್ತದೆ.ಇದರಿಂದ ಉತ್ತಮವಾದ ದೃಷ್ಟಿಯನ್ನು ಪಡೆಯಬಹುದು.

ರಕ್ತಹೀನತೆಯ ಅಪಾಯವನ್ನು ಕಡಿಮೆ ಮಾಡುತ್ತದೆ

ಮುಖ್ಯವಾಗಿ ರಕ್ತದಲ್ಲಿ ಕೆಂಪು ಹಾಗು ಬಿಳಿ ರಕ್ತಕಣಗಳು ಇರುತ್ತವೆ. ಕೆಂಪು ರಕ್ತ ಕಣಗಳು ನಿಮ್ಮ ದೇಹದ ವಿವಿಧ ಪ್ರದೇಶಗಳಿಗೆ ಆಮ್ಲಜನಕವನ್ನು ಪೂರೈಸಲು ಸಹಾಯ ಮಾಡುತ್ತದೆ. ಪಾಲಕ್ ಸಹಜವಾಗಿಯೇ ತನ್ನಲ್ಲಿ ಕಬ್ಬಿಣದ ಅಂಶವನ್ನು ಹೊಂದಿದೆ. ನೀವು ದೇಹದಲ್ಲಿ ಕಡಿಮೆ ಕಬ್ಬಿಣದ ಕೊರತೆಯನ್ನು ಹೊಂದಿದ್ದರೆ ಅಥವಾ ರಕ್ತ ಹೀನತೆಯನ್ನು ಹೊಂದಿದ್ದರೆ ಪಾಲಕ್ ಸೊಪ್ಪಿನ ರಸವು ನಿಮಗೆ ಸಹಾಯಕವಾಗಬಲ್ಲದು. ಇದು ದುರ್ಬಲ, ತಲೆತಿರುಗುವಿಕೆ ಮತ್ತು ಉಸಿರಾಟದಂತಹ ಸಮಸ್ಯೆಗಳಿಂದ ದೂರ ಮಾಡುತ್ತದೆ.

ಪಾಲಕ್ ಜ್ಯೂಸ್ ಹೇಗೆ ಮಾಡಬೇಕು?

ಆರೋಗ್ಯಕರವಾದ ಪಾಲಕ್ ಜ್ಯೂಸ್ ಅನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಿಕೊಳ್ಳಬಹುದು.

ಬೇಕಾಗುವ ಪದಾರ್ಥಗಳು: 1 ಕಪ್ ಪಾಲಕ್ ಸೊಪ್ಪು, ಅರ್ಥ ಕಪ್ ನೀರು

ಮಾಡುವ ವಿಧಾನ: ಮೊದಲು ಪಾಲಕ್ ಸೊಪ್ಪನ್ನು ಸ್ವಚ್ಛವಾದ ನೀರಿನಲ್ಲಿ ಎರಡು ಬಾರಿ ತೊಳೆಯಿರಿ. ನಂತರ ಬ್ಲೆಂಡರ್ ಜಾರ್ ನಲ್ಲಿ ಪಾಲಕ್ ಸೊಪ್ಪು ಹಾಗು ಬೇಕಾದಷ್ಟು ನೀರು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ತಯಾರಾದ ಜ್ಯೂಸ್‌ನ್ನು ಸ್ಟೈನರ್ ಮೇಲೆ ಸುರಿಯಿರಿ, ನಂತರ ಪ್ರತಿನಿತ್ಯ ಸೇವಿಸಿ. (ನಿಮಗೆ ಬೇಕಾದ ಹಣ್ಣನ್ನು ಕೂಡ ಪಾಲಕ್ ನ ಜೊತೆ ಸೇರಿಸಿ, ಕುಡಿಯಬಹುದು).

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.