ನವದೆಹಲಿ: ಟ್ವಿಟರ್ ಕಂಪೆನಿಯ ನೂತನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಆಗಿ ಭಾರತೀಯ ಮೂಲದ ಪರಾಗ್ ಅಗರ್ ವಾಲ್ ನೇಮಕಗೊಂಡಿದ್ದಾರೆ. ಟ್ವಿಟರ್ ಸಂಸ್ಥೆಯ ಸಹ ಸಂಸ್ಥಾಪಕರಾಗಿದ್ದ ಜ್ಯಾಕ್ ಡಾರ್ಸೆ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಜ್ಯಾಕ್ ಡಾರ್ಸೆ, ಟ್ವಿಟರ್ ಸಂಸ್ಥೆಯಲ್ಲಿ ಸಹ ಸಂಸ್ಥಾಪಕರಾಗಿ 16 ವರ್ಷಗಳ ಕಾರ್ಯ ನಿರ್ವಹಿಸಿದ್ದಾರೆ. ಜ್ಯಾಕ್ ಡಾರ್ಸೆ ರಾಜೀನಾಮೆ ಸಲ್ಲಿಸಿದ ಬಳಿಕ ಭಾರತೀಯ ಪರಾಗ್ ಅಗರವಾಲ್, ಅತ್ಯಂತ ಕಿರಿಯ ಸಿಇಒ ಆಗಿ ಹೊರಹೊಮ್ಮಿದ್ದಾರೆ. ಪರಾಗ್ ಅಗರವಾಲ್, ಮುಂಬೈನ ಐಐಟಿಯಲ್ಲಿ ವ್ಯಾಸಂಗ ಮಾಡಿದ್ದು, ಪ್ರಸ್ತುತ ಟ್ವಿಟರ್‌ನ ಮುಖ್ಯ ತಂತ್ರಜ್ಞಾನ ಅಧಿಕಾರಿ ಆಗಿದ್ದಾರೆ.
ಜ್ಯಾಕ್ ಡೋರ್ಸೆ ಸ್ಕ್ವೇರ್ ಐಎನ್ಸಿ ಕಡೆಗೆ ಅಧಿಕ ಗಮನ ನೀಡುತ್ತಿದ್ದಾರೆ, ಟ್ವಿಟರ್ ಕಡೆಗೆ ಗಮನಹರಿಸುತ್ತಿಲ್ಲ ಎಂದು ಟ್ವಿಟರ್‌ನ ಪಾಲುದಾರ ಸಂಸ್ಥೆ ಎಲಿಯಟ್ ಮ್ಯಾನೇಜ್ಮೆಂಟ್ ಕಾರ್ಪ್ ಈ ಮೊದಲು ಆರೋಪ ಮಾಡಿತ್ತು. ಅಷ್ಟೇ ಅಲ್ಲದೆ, ಡೋರ್ಸೆ ಟ್ವಿಟರ್ ಸಿಇಒ ಸ್ಥಾನದಿಂದ ಕೆಳಗೆ ಇಳಿಯಬೇಕು ಎಂದು 2020ರ ಆರಂಭದಲ್ಲಿ ಒತ್ತಾಯಿಸಿತ್ತು.
not sure anyone has heard but,
I resigned from Twitter pic.twitter.com/G5tUkSSxkl
— jack⚡️ (@jack) November 29, 2021
ಟ್ವಿಟರ್ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಗ್ಗೆ ಜ್ಯಾಕ್ ಡಾರ್ಸೆ ಅವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.. ‘ಪರಾಗ್ ಅವರು ಮುಂದಿನ ಸಿಇಒ ಆಗಿರಲಿದ್ದಾರೆ. ನಾನು ಟ್ವಿಟರ್ ಅನ್ನು ತೊರೆಯಲು ನಿರ್ಧರಿಸಿದ್ದೇನೆ. ಏಕೆಂದರೆ ಕಂಪನಿಯು ಅದರ ಸಂಸ್ಥಾಪಕರಿಂದ ಮುಂದುವರಿಯಲು ಸಿದ್ಧವಾಗಿದೆ ಎಂದು ನಾನು ನಂಬುತ್ತೇನೆ. ಟ್ವಿಟರ್‌ನ ಸಿಇಒ ಆಗಿ ಪರಾಗ್‌ನಲ್ಲಿ ನನ್ನ ನಂಬಿಕೆ ಆಳವಾಗಿದೆ. ಕಳೆದ 10 ವರ್ಷಗಳಲ್ಲಿ ಅವರ ಕೆಲಸದಿಂದ ಹಲವು ಪರಿವರ್ತನೆಯಾಗಿದೆ. ನಾನು ಅವರಿಗೆ ತುಂಬಾ ಕೃತಜ್ಞನಾಗಿದ್ದೇನೆ’ ಎಂದು ಡಾರ್ಸೆ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಟ್ವಿಟರ್ ಸಂಸ್ಥೆಯ ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಆಯ್ಕೆಯಾಗಿರುವ ಪರಾಗ್ ಅಗರ್ ವಾಲ್ ಅವರು, ‘ನನ್ನ ನಾಯಕತ್ವದ ಮೇಲಿನ ವಿಶ್ವಾಸಕ್ಕಾಗಿ ಮತ್ತು ಜಾಕ್ ಅವರ ಮುಂದುವರಿದ ಮಾರ್ಗದರ್ಶನ, ಬೆಂಬಲ ಮತ್ತು ಪಾಲುದಾರಿಕೆಗಾಗಿ ಮಂಡಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.