ವಾಣಿಜ್ಯ ಜಾಹಿರಾತು

ನವದೆಹಲಿ: ದೇಶದಲ್ಲಿ ಮತ್ತೆ ಕೊರೋನಾ ಸೋಂಕು ಹೆಚ್ಚಳವಾಗುತ್ತಿದ್ದು, ಆದಷ್ಟು ಬೇಗ ಸೋಂಕು ತಡೆಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ದೇಶಾದ್ಯಂತ ಕೊರೋನಾ ಮಹಾ ಸ್ಫೋಟವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ದೇಶದಲ್ಲಿ ಕೊರೋನಾ ಹೆಚ್ಚಳ ಹಿನ್ನೆಲೆ ವಿಡಿಯೋ ಕಾನ್ಫೆರನ್ಸ್ ಮೂಲಕ ಸಿಎಂಗಳ ಜೊತೆ ಮಾತನಾಡಿದ ಪ್ರಧಾನಿ ಮೋದಿ, ಮಾಸ್ಕ್ ಕಡ್ಡಾಯ, ಅಂತರ ಕಾಯ್ದುಕೊಳ್ಳುವ ವ್ಯವಸ್ಥೆ ಹಾಗೂ ಕ್ಲಿನಿಕಲ್ ಸೌಲಭ್ಯ ಹೆಚ್ಚು ಮಾಡುವಂತೆ ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿದ್ದಾರೆ.

ಮಾಸ್ಕ್ ಧರಿಸುವ ವಿಚಾರದಲ್ಲಿ ಕಠಿಣ ಕ್ರಮ ಅನಿವಾರ್ಯ. ಮಾಸ್ಕ್ ಧರಿಸುವುದನ್ನು ಜನರು ಗಂಭೀರವಾಗಿ ಪರಿಗಣಿಸಿಲ್ಲ. ಇದು ಸ್ಥಳೀಯ ಜಿಲ್ಲಾಡಳಿತದ ವೈಫಲ್ಯವಾಗಿದೆ. ರಾಜ್ಯಗಳಲ್ಲಿ ಮೈಕ್ರೋ ಕಂಟೈನ್ಮೆಂಟ್ ಅಗತ್ಯವಾಗಿದ್ದು ಹಳ್ಳಿಗಳಿಗೆ ಸೋಂಕು ವ್ಯಾಪಿಸಿದರೆ ಕಷ್ಟ. ಹೀಗಾಗಿ ಚಿಕ್ಕ ಚಿಕ್ಕ ಪಟ್ಟಣಗಳಲ್ಲೂ ಪರೀಕ್ಷೆಗಳನ್ನು ಹೆಚ್ಚಿಸಿ ಎಂದು ಸಲಹೆ ನೀಡಿದ್ದಾರೆ.

ದೇಶದಲ್ಲಿ ಕೊರೋನಾ ಎರಡನೇ ಅಲೆ ಕಂಡು ಬರುತ್ತಿದೆ. ಭಾರತದಲ್ಲಿ ಶೇ. 96 ಹೆಚ್ಚು ಪ್ರಕರಣಗಳು ಚೇತರಿಸಿಕೊಂಡಿವೆ. ಸಾವಿನ ಪ್ರಮಾಣ ಅತ್ಯಂತ ಕಡಿಮೆ ಇರುವ ದೇಶಗಳಲ್ಲಿ ಭಾರತವು ಸಹ ಒಂದು . ಸೋಂಕಿತ ವ್ಯಕ್ತಿಯನ್ನು ಶೀಘ್ರ ಪತ್ತೆ ಹಚ್ಚಬೇಕು. ಆರ್ ಟಿಪಿಸಿಆರ್ ಶೇ. 70ರಷ್ಟು ಹೆಚ್ಚಿಸಬೇಕು. ನಗರಗಳಿಗೆ ಸೋಂಕು ಹೆಚ್ಚು ವ್ಯಾಪಿಸುತ್ತಿದೆ. ಹೀಗಾಗಿ ಸಣ್ಣ ಊರುಗಳಲ್ಲಿ ಹೆಚ್ಚು ಮಾಡಬೇಕು. ಟೆಸ್ಟಿಂಗ್ ಹೆಚ್ಚಿಸದಿದ್ದರೆ ಪರಿಸ್ಥಿತಿ ಗಂಭೀರವಾಗಿರುತ್ತದೆ ಎಂದರು.

ದೇಶದಲ್ಲಿ ಲಸಿಕೆಗಳು ಪೂರ್ಣ ಪ್ರಮಾಣದಲ್ಲಿ ಬಳಕೆಯಾಗುತ್ತಿಲ್ಲ. ಲಸಿಕೆ ವೇಸ್ಟ್ ಆಗದಂತೆ ಟಾರ್ಗೆಟ್ ಹಾಕಿಕೊಳ್ಳಬೇಕು. ತೆಲಂಗಾಣ, ಆಂಧ್ರಪ್ರದೇಶ ಮತ್ತು ಉತ್ತರಪ್ರದೇಶಗಳಲ್ಲಿ ವ್ಯಾಕ್ಸಿನ್ ವ್ಯರ್ಥವಾಗುತ್ತಿದೆ ಎಂದು ಇದೇ ವೇಳೆ ತಿಳಿಸಿದರು.

(8) Narendra Modi on Twitter: “Speaking at the interaction with Chief Ministers. https://t.co/s0c7OSK8zK” / Twitter

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.