ನವದೆಹಲಿ: ವಿಜಯದಶಮಿ ಹಬ್ಬದ ಅಂಗವಾಗಿ ಪ್ರಧಾನಿ ಮೋದಿ ಅವರು ಇಂದು 7 ನೂತನ ರಕ್ಷಣಾ ಕಂಪನಿಗಳನ್ನು ದೇಶಕ್ಕೆ ಸಮರ್ಪಿಸಿದರು.
ರಕ್ಷಣಾ ಕಂಪನಿಗಳನ್ನು ಲೋಕಾರ್ಪಣೆ ಮಾಡಿದ ನಂತರ ಕಾರ್ಯಕ್ರಮದಲ್ಲಿ ಪ್ರಸಾರ ಮಾಡಿದ ಧ್ವನಿಮುದ್ರಿತ ವೀಡಿಯೋದಲ್ಲಿ ಮಾತನಾಡಿದ ಅವರು, 7 ಹೊಸ ರಕ್ಷಣಾ ಕಂಪನಿಗಳು ಮಿಲಿಟರಿ ಪಡೆಗೆ ಶಕ್ತಿ ತುಂಬಲಿದೆ ಎಂದು ಹೇಳಿದರು.
ಅಲ್ಲದೆ, ‘ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ದೇಶದ ರಕ್ಷಣಾ ಕ್ಷೇತ್ರದಲ್ಲಿ ಹಲವು ಪ್ರಮುಖ ಸುಧಾರಣೆಗಳನ್ನು ತರಲಾಗಿದ್ದು, ಇವೆಲ್ಲವೂ ಹಿಂದೆಂದಿಗಿಂತಲೂ ಹೆಚ್ಚು ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಹೊಂದಿವೆ’ ಎಂದರು. ‘ಸ್ವಾವಲಂಬಿ ಭಾರತ ಅಭಿಯಾನದ ಅಡಿಯಲ್ಲಿ, ಭಾರತವನ್ನು ವಿಶ್ವದ ಅತಿದೊಡ್ಡ ಸೇನಾ ಶಕ್ತಿಯನ್ನಾಗಿ ರೂಪಿಸುವುದು ಮತ್ತು ಭಾರತದ ಆಧುನಿಕ ಮಿಲಿಟರಿ ಉದ್ಯಮವನ್ನು ಅಭಿವೃದ್ಧಿಪಡಿಸುವುದು ದೇಶದ ಗುರಿಯಾಗಿದೆ’ ಎಂದು ತಿಳಿಸಿದರು.
I urge these 7 companies to prioritise 'research and innovation' in their work culture. You've to take lead in future technology, give opportunities to researchers. I would also urge startups to collaborate with these 7 companies: PM Modi on dedication of 7 new defence companies pic.twitter.com/SaUBhMiipH
— ANI (@ANI) October 15, 2021
‘ಕಳೆದ ಏಳು ವರ್ಷಗಳಲ್ಲಿ, ‘ಮೇಕ್ ಇನ್ ಇಂಡಿಯಾ’ ಘೋಷ ವಾಕ್ಯದೊಂದಿಗೆ ರಕ್ಷಣಾ ಕ್ಷೇತ್ರದಲ್ಲಿನ ಈ ಅಭಿವೃದ್ಧಿ ಸಂಕಲ್ಪದೊಂದಿಗೆ ದೇಶ ಹೆಜ್ಜೆ ಹಾಕುತ್ತಿದೆ’ ಎಂದು ಅವರು ಹೇಳಿದರು.
‘ಸಂಶೋಧನೆ ಮತ್ತು ನಾವೀನ್ಯತೆಗೆ ಹೊಸ 7 ಕಂಪನಿಗಳು ಆದ್ಯತೆ ಮೇರೆಗೆ ಒತ್ತು ನೀಡಬೇಕು. ಆ ಮೂಲಕ ಭವಿಷ್ಯದ ತಂತ್ರಜ್ಞಾನದಲ್ಲಿ ಮುನ್ನಡೆಯನ್ನು ಸಾಧಿಸಬೇಕು. ಈ ಕಂಪನಿಗಳಿಗೆ ಹೆಚ್ಚಿನ ಅವಕಾಶಗಳನ್ನು ನೀಡುವಂತೆ ಹೊಸ ಸ್ಟಾರ್ಟ್‌ಅಪ್‌ಗಳಿಗೆ ಒತ್ತಾಯಿಸುತ್ತೇನೆ ಎಂದು ತಿಳಿಸಿದರು.
ಹೊಸ ಏಳು ಕಂಪನಿಗಳು
ಮುನಿಷನ್ ಇಂಡಿಯಾ ಲಿಮಿಟೆಡ್, ಅರ್ಮರ್ಡ್ ವೆಹಿಕಲ್ ನಿಗಮ್ ಲಿಮಿಟೆಡ್, ಅಡ್ವಾನ್ಸ್ ವೆಪನ್ಸ್ ಅಂಡ್ ಇಷ್ಮೆಂಟ್ ಇಂಡಿಯಾ ಲಿಮಿಟೆಡ್, ಗ್ರೂಪ್ ಕಂಫರ್ಟ್ ಲಿಮಿಟೆಡ್, ಯಂತ್ರ ಇಂಡಿಯಾ ಲಿಮಿಟೆಡ್, ಇಂಡಿಯಾ ಆಫೈಲ್ ಲಿಮಿಟೆಡ್, ಗೈಡರ್ ಇಂಡಿಯಾ ಲಿಮಿಟೆಡ್ ಎಂಬ 7 ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ.