ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ ವರ್ಚುವಲ್ ಸಭೆಯನ್ನುದ್ದೇಶಿಸಿ ಭಾಷಣ ಮಾಡುತ್ತಿದ್ದ ವೇಳೆ ಕೆಲಕಾಲ ಮಾತನಾಡಲು ತಡವರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಧಾನಿ ಮೋದಿ ವ್ಯಾಪಕ
ಗೇಲಿಗೊಳಗಾಗಿದ್ದಾರೆ. ಪ್ರಾಮ್ಟರ್ ಸಮಸ್ಯೆಯುಂಟಾಗಿ ಪ್ರಧಾನಿ ಮೋದಿ ಭಾಷಣ ಮುಂದುವರಿಸಲಾಗದೇ ತಡವರಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ,`ಇಷ್ಟೊಂದು ಸುಳ್ಳನ್ನು ಟೆಲಿಪ್ರಾಮ್ಟರ್ ಗೂ ಸಹಿಸಲಾಗಲಿಲ್ಲ ಟೆಲಿಪ್ರಾಮ್ಟರ್ ಗೂ ಸಹಿಸಲಾಗಲಿಲ್ಲ’ ಎಂದು ವ್ಯಂಗ್ಯವಾಡಿದ್ದಾರೆ.
इतना झूठ Teleprompter भी नहीं झेल पाया।
— Rahul Gandhi (@RahulGandhi) January 18, 2022
भारत की 140 करोड़ जनता को आज पता चल गया कि प्रधानमंत्री नरेंद्र मोदी 8 साल से प्रेस कॉन्फ़्रेंस क्यों नहीं कर रहे हैं ?? pic.twitter.com/uqzwe0nKZz
— Vinod Kapri (@vinodkapri) January 17, 2022
Nothing wrong in using a teleprompter, but pretending that all his speeches are impromptu is bad. Remember how the media went head over heels after PM’s address in US Congress?
Fact is PM can’t speak on subjects if it isn’t scripted. #TeleprompterPM pic.twitter.com/vGLNnd4Cy5— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) January 18, 2022
ಸೋಮವಾರದಂದು ವರ್ಲ್ಡ್ ಇಕನಾಮಿಕ್ ಫೋರಂನ ಸ್ಥಾಪಕ ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷ ಕ್ಲಾಸ್ ಶ್ವಾಬ್ ಅವರೊಂದಿಗೆ ವರ್ಚುವಲ್ ಸಭೆಯನ್ನುದ್ದೇಶಿಸಿ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಟೆಲಿಪ್ರಾಮ್ಟರ್ ನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ ಎನ್ನಲಾಗಿದೆ. ಈ ಸಂದರ್ಭ ಭಾಷಣ ಮುಂದುವರಿಸಲಾಗದೇ ಕೆಲಕಾಲ ಪ್ರಧಾನಿ ತಡವರಿಸುತ್ತಿರುವುದು ವಿಡಿಯೋದಲ್ಲಿದೆ. ಬಳಿಕ ಕ್ಲಾಸ್ ಶ್ವಾಬ್ ಅವರಲ್ಲಿ ಧ್ವನಿ ಕೇಳಿಸುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ. ಬಳಿಕ ಕ್ಲಾಸ್ ಶ್ವಾಬ್ ಕೆಲಕಾಲ ವರ್ಚುವಲ್ ಸಭೆಯನ್ನುದ್ದೇಶಿಸಿ ಮಾತು ಮುಂದುವರಿಸಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಪ್ರಧಾನಿ ಮೋದಿ ಮತ್ತೆ ಮೊದಲಿನಿಂದಲೇ ಭಾಷಣ ಮುಂದುವರಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಪ್ರಧಾನಿಯವರನ್ನು ಗೇಲಿ ಮಾಡಿದ್ದಾರೆ. ಸದ್ಯ ಟ್ವಿಟ್ಟರ್ ನಲ್ಲಿ #TeleprompterPM ಟ್ರೆಂಡಿಂಗ್ ಆಗಿದೆ.
ಆದರೆ ಇದನ್ನು ಬಿಜೆಪಿಗರು ಇದನ್ನು ಅಲ್ಲಗೆಳೆದಿದ್ದಾರೆ. ಪ್ರಧಾನಿಯವರ ಭಾಷಣ ಅರ್ಧದಿಂದ ಆರಂಭವಾಗಿತ್ತು ಜೊತೆಗೆ ಇಂಗ್ಲಿಷ್ ಟ್ರಾನ್ಸ್ಲೇಷನ್ ಇರಲಿಲ್ಲ. ಬಳಿಕ ಸಂಯೋಜಕರು ಭಾಷಣದ ನಡುವೆ ಅಡ್ಡಿಪಡಿಸಿದರು ಬಳಿಕ ಆರಂಭದಿಂದ ಭಾಷಣ ಮಾಡಲಾಯಿತು ಎಂದು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.
टेलीप्राम्प्टर का झूठ रचने वाले,डायपर नेता की पार्टी के लोग यह सही विडीओ देख लें @narendramodi @PMOIndia pic.twitter.com/SVH8fvSNn2
— Rahul Kothari Bjp (@RahulKothariBJP) January 18, 2022