ವಾಣಿಜ್ಯ ಜಾಹಿರಾತು

ಆಲೂಗೆಡ್ಡೆಯಲ್ಲಿ ವಿಟಮಿನ್ ಸಿ, ವಿಟಮಿನ್ ಬಿ, ಕಬ್ಬಿಣ ಕ್ಯಾಲ್ಸಿಯಂ, ಮ್ಯಾಂಗನೀಸ್, ರಂಜಕ ಅಂಶಗಳು ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇರಿಸುತ್ತದೆ. ಈ ಎಲ್ಲಾ‌ ಪ್ರೊಟೀನ್ ಗಳು ಆಲೂಗೆಡ್ಡೆಯಲ್ಲಿ ಅಡಕವಾಗಿರುವುದರಿಂದ‌ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ.

ಆದರೆ ಆಲೂಗೆಡ್ಡೆ ಕೇವಲ ಊಟಕ್ಕೆ ಮಾತ್ರವಲ್ಲ ಸೌಂದರ್ಯ ವರ್ಧಕವಾಗಿಯೂ ಉಪಯೋಗಿಸುತ್ತಾರೆ. ಕೂದಲ ಸಂರಕ್ಷಣೆ, ಮುಖದ ಕಾಂತಿಗೆ ಆಲೂಗೆಡ್ಡೆ ಬಹಳ ಪ್ರಯೋಜನಕಾರಿಯಾಗಿದೆ.

ಬಿಳಿ ಕೂದಲ ಸಮಸ್ಯೆಗೆ ಪರಿಹಾರ

ಪ್ರಸ್ತುತ ಕಾಲಘಟ್ಟದಲ್ಲಿ ವಯೋವೃದ್ಧರಲ್ಲಿ ವಯಸ್ಸಾದಂತೆ ಬೆಳೆಯುವ ಬಿಳಿ‌ ಕೂದಲು ಯುವಕರಲ್ಲೂ ಕಾಣಿಸಿಕೊಳ್ಳುತ್ತಿದೆ. ಇಂತಹ ಬಿಳಿ ಕೂದಲಿನ ಸಮಸ್ಯೆಗೆ ಆಲೂಗೆಡ್ಡೆ ಸಿಪ್ಪೆ ಒಳ್ಳೆಯದು. ಇದರಲ್ಲಿರುವ ನೈಸರ್ಗಿಕ ಬಣ್ಣ ಕೂದಲಿನ ಆರೋಗ್ಯವನ್ನು ಬಲಪಡಿಸುತ್ತದೆ. ಆಲೂಗೆಡ್ಡೆ ಸಿಪ್ಪೆಯನ್ನು ನೀರಿನಲ್ಲಿ ಕುದಿಸಿ. ಸಿಪ್ಪೆ ಸರಿಯಾಗಿ ಬೆಂದಾದ ಮೇಲೆ ಅದನ್ನು ತಣ್ಣಗಾಗಲು ಬಿಡಿ. ನಂತರ‌ ಆಲೂಗಡ್ಡೆ ಮಿಶ್ರಿತ ನೀರನ್ನು ಹಾಕಿ ಕೂದಲಿಗೆ ಮಸಾಜ್ ಮಾಡಿ. ಅರ್ಧ ತಾಸಿನ ಬಳಿಕ ಬೆಚ್ಚಗಿನ ನೀರಿನಲ್ಲಿ ಕೂದಲನ್ನು ತೊಳೆದರೆ‌ ಬಿಳಿ ಕೂದಲಿಗೆ ಪರಿಹಾರ ಸಿಗುತ್ತದೆ.

ಮುಖದ ಕಾಂತಿ ಹೆಚ್ಚಿಸುತ್ತದೆ

ಆಲೂಗೆಡ್ಡೆ ಮುಖದ ಕಾಂತಿಯನ್ನೂ ಹೆಚ್ಚಿಸುತ್ತದೆ. ಮುಖದ ಮೇಲಿರುವ‌ ಕಪ್ಪು ಚುಕ್ಕೆ ಮಾಯವಾಗಿಸುವುದರ ಜತೆಗೆ ತುರಿಕೆಯನ್ನು ದೂರಗೊಳಿಸುತ್ತದೆ. ನಿಂಬೂ ರಸದೊಂದಿಗೆ ಆಲೂಗೆಡ್ಡೆ ಮಿಶ್ರಣವನ್ನು ಮುಖಕ್ಕೆ‌ ಲೇಪಿಸಿ, 30 ನಿಮಿಷಗಳ ಕಾಲ ಬಿಡಿ. ನಂತರ ಮುಖವನ್ನು ತೊಳೆದರೆ ಮುಖದ‌ ಹೊಳಪು ಹೆಚ್ಚಾಗುವುದು. ಅಲ್ಲದೇ ಚರ್ಮವನ್ನು ಮೆದುಗೊಳಿಸುವ‌ ಮತ್ತು ಸುಕ್ಕು ತಡೆಯುವ‌ ಅಂಶವನ್ನು ಆಲೂಗಡ್ಡೆ ಹೊಂದಿದೆ. ಇದರೊಂದಿಗೆ‌ ಕಣ್ಣಿನ ಸುತ್ತಲೂ ಬೀಳುವ ಕಪ್ಪು ಕಲೆಗಳನ್ನು ಹೋಗಲಾಡಿಸಲು ಆಲೂಗೆಡ್ಡೆ ಉತ್ತಮ ಔಷಧಿ. ಅದಕ್ಕಾಗಿ ಆಲೂಗಡ್ಡೆ ರಸವನ್ನು ಕಣ್ಣಿನ ಸುತ್ತ ಹಚ್ಚಿ, ಸ್ವಲ್ಪ ಸಮಯದ‌ ನಂತರ‌ ಬಿಟ್ಟು ತೊಳೆದರೆ ನಿಮ್ಮ ಕಣ್ಣಿನ ಸುತ್ತ ಉಂಟಾಗಿರುವ ಕಪ್ಪು ಕಲೆ ಮಾಯವಾಗುವುದು.

ಆಲೂಗೆಡ್ಡೆ ಫೇಸ್ ಪ್ಯಾಕ್

ಸೂರ್ಯನ ಕಿರಣಗಳು ಮುಖಕ್ಕೆ‌ ಸೋಕಿದ ಕೂಡಲೇ ಮುಖ ಕಪ್ಪಾಗಿ ಬಿಡುತ್ತದೆ. ಇದಕ್ಕಾಗಿ ಆಲೂಗೆಡ್ಡೆ ರಸವನ್ನು ಮೊಸರಿನೊಂದಿಗೆ ಕಲಸಿ, ಮುಖಕ್ಕೆ ಪ್ಯಾಕ್‌ ಮಾಡಿ. ಸುಮಾರು 20 ನಿಮಿಷದ‌ ನಂತರ ಮುಖವನ್ನು ತಣ್ಣೀರಿನಿಂದ ಚೆನ್ನಾಗಿ ತೊಳೆಯಿರಿ.

ಅರಿಶಿಣ ಪುಡಿಯೊಂದಿಗೆ ಆಲೂಗೆಡ್ಡೆಯ ಚಿಕ್ಕ ತುಂಡುಗಳನ್ನು ಬೆರೆಸಿ ಮುಖಕ್ಕೆ ಹಚ್ಚಬೇಕು. ದಿನಕ್ಕೆ ಒಂದು ಬಾರಿಯಂತೆ ಹಚ್ಚಿ ಅರ್ಧ ಗಂಟೆ ಬಿಟ್ಟು ತನ್ನೀರಿಂದ ಮುಖ ತೊಳೆದರೆ ಮುಖದಲ್ಲಿ ಬದಲಾವಣೆ ಕಾಣಬಹುದು. ಈ ರೀತಿ ಚರ್ಮಕ್ಕೆ ಆಲೂಗಡ್ಡೆ ಬಳಸುವುದರಿಂದ ಮುಖವು ಮೃದುವಾಗಿ ಮತ್ತು ನಯವಾಗಿಸುತ್ತದೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here