ವಾಣಿಜ್ಯ ಜಾಹಿರಾತು

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರು ನಿಗಮ ಅಭಿವೃದ್ಧಿ ಮಾಡಬೇಕು, ಬಿಲ್ಲವ ಸಮುದಾಯಕ್ಕೆ ಹೆಚ್ಚಿನ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಸೇರಿದಂತೆ ಇನ್ನೂ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಾದಯಾತ್ರೆ ಮಾಡುವುದಾಗಿ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ತಿಳಿಸಿದರು.

ನಗರದಲ್ಲಿ ಮಾತನಾಡಿದ ಅವರು ಮಂಗಳೂರಿನಿಂದ ಬೆಂಗಳೂರಿಗೆ ಜ.6ರಿಂದ 658 ಕಿ.ಮೀ ಪಾದಯಾತ್ರೆ ನಡೆಸಲಾಗುವುದು. ಜ‌6 ರಂದು ಬೆಳಗ್ಗೆ 10ಗಂಟೆಗೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಧಾರ್ಮಿಕ ಸಭೆಯೊಂದಿಗೆ ಕಾರ್ಯಕ್ರಮ ನಡೆಯಲಿದೆ. ಈ ಸಭೆಯಲ್ಲಿ ಲಂಬಾಣಿ, ಮಡಿವಾಳ ಸೇರಿದಂತೆ 25 ಹಿಂದುಳಿದ ಸಮುದಾಯದ ಮಠಾಧಿಪತಿಗಳು ಭಾಗವಹಿಸಲಿದ್ದು, ಕಾರ್ಯಕ್ರಮಕ್ಕೆ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮ ಮುಗಿದ ಬಳಿಕ ಮಧ್ಯಾಹ್ನ ಪಾದಯಾತ್ರೆ ಆರಂಭವಾಗಲಿದ್ದು, ಮೊದಲ ದಿನ ಮೂಲ್ಕಿಯಲ್ಲಿ ವಾಸ್ತವ್ಯ, 2ನೇ ದಿನ ಕಾಪುವಿನಲ್ಲಿ ಹೀಗೆ ರೂಟ್ ಮ್ಯಾಪ್ ತಯಾರಾಗಿದೆ. ಶಿವಗಿರಿ ಮಠದಿಂದ ಇಬ್ಬರು ಸನ್ಯಾಸಿಗಳು ಹಾಗೂ ಸಮುದಾಯದ ಸ್ವಾಮೀಜಿಗಳು ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ‌ ಎಂದರು.

ತೆಲಂಗಾಣ ರಾಜ್ಯದ ಸಚಿವ ಶ್ರೀನಿವಾಸ ಗೌಡ, ಡೆಪ್ಯುಟಿ ಸ್ಪೀಕರ್ ಪದ್ಮರಾವ್, ಮಂತ್ರಿಗಳಾದ ಪ್ರಕಾಶ್ ಗೌಡ ಮತ್ತು ವಿವೇಕಾನಂದ, ಆಂಧ್ರಪ್ರದೇಶದ ಜೋಗಿ ರಮೇಶ್, ಭರತ್, ಕೇರಳದ ಮಂತ್ರಿ ಎ.ಕೆ. ಶಶೀಂದ್ರ, ರಾಜ್ಯದ ಸಮುದಾಯದ ಎಂಎಲ್ಎ, ಎಂಪಿಗಳಿಗೂ ಭಾಗವಹಿಸುವಂತೆ ಆಹ್ವಾನ ನೀಡಲಾಗಿದೆ ಎಂದು ತಿಳಿಸಿದರು.

ಒಟ್ಟು ಹತ್ತು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪಾದಯಾತ್ರೆ ನಡೆಸಲಾಗುತ್ತಿದೆ. ಆದರೆ ಪ್ರಮುಖ ಮೂರು ಬೇಡಿಕೆಗಳಾದ ನಿಗಮ ರಾಜ್ಯಾದ್ಯಂತ ಸಮುದಾಯಕ್ಕೆ ಸೇಂದಿ ಇಳಿಸಿ ಮಾರಾಟ ಮಾಡಲು ಅವಕಾಶ ನೀಡಬೇಕು, ಸಿಗಂಧೂರು ಚೌಡೇಶ್ವರಿ ದೇವಾಲಯದಲ್ಲಿ ಸರ್ಕಾರದ ದೌರ್ಜನ್ಯ ನಿಲ್ಲಿಸಬೇಕು. ಅಲ್ಲದೆ ದೇವಾಲಯವನ್ನು ಮೇಲ್ವರ್ಗಕ್ಕೆ ಒಪ್ಪಿಸುವ ಹುನ್ನಾರ ನಿಲ್ಲಿಸಬೇಕೆಂದು ಆಗ್ರಹಿಸಿದರು.

ದ.ಕ‌.ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಎರಡೂ ಪಕ್ಷಗಳು ಬಿಲ್ಲವ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕು. ಉಡುಪಿಯಲ್ಲಿ 3, ಶಿವಮೊಗ್ಗ 4, ಉತ್ತರ ಕನ್ನಡದಲ್ಲಿ 3 ಸೀಟ್ ಗಳನ್ನು ಕೊಡಬೇಕು. ಬಿಲ್ಲವ ಸಮುದಾಯವನ್ನು ಇಷ್ಟು ವರ್ಷಗಳ ಕಾಲ ಬಳಸಿರುವುದಕ್ಕೆ ಈಗ ಪರ್ಯಾಯ ವ್ಯವಸ್ಥೆ ಆಗಬೇಕಾಗಿದೆ. ಸಮುದಾಯದ 21 ಯುವಕರ ಬಲಿದಾನವಾಗಿದ್ದು, ಇಲ್ಲಿ ಸಾಯುವುದಕ್ಕೆ, ಜಗಳ ಮಾಡುವುದಕ್ಕೆ, ಕೇಸ್ ಹಾಕಿಸಿಕೊಳ್ಳುವುದಕ್ಕೆ ಬಿಲ್ಲವ ಯುವಕರು ಇವರಿಗೆ ಬೇಕು. ಇನ್ನು ಮುಂದೆ ಒಬ್ಬನೂ ಧರ್ಮಾಂಧತೆಯಿಂದ ಸಾಯಬಾರದು ಎಂದು ತಿಳಿಸಿದರು.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.