ವಾಣಿಜ್ಯ ಜಾಹಿರಾತು

ಕೊರೊನಾ ಎಂಬ ಅತೀ ಸಣ್ಣ ವೈರಾಣುವೊಂದು ಜಗತ್ತನ್ನೇ ತಲ್ಲಣಗೊಳಿಸಿದೆ. ನಾಗಾಲೋಟದಲ್ಲಿದ್ದ ಜಗತ್ತಿಗೆ ಬ್ರೇಕ್ ಹಾಕಿದೆ. ತಾನು ತನ್ನದು ಎಂಬ ಅಮಲಿನಲ್ಲಿ ಬದುಕುತ್ತಿದ್ದವರು ಒಂದು ಕ್ಷಣ ಸ್ತಬ್ಧರಾಗಿ ಹಿಂತಿರುಗಿ ನೋಡುವಂತೆ ಮಾಡಿದೆ. ಹೌದು ಕೊರೊನಾದಿಂದ ಕೆಡುಕಿನ ಜೊತೆಗೆ ಒಳಿತೂ ಆಗಿದೆ ಅನ್ನೋದು ಒಪ್ಪಿಕೊಳ್ಳಬೇಕಾದ ಸತ್ಯ. ಇದರ ಜೊತೆಗೆ ಯಾವ ರೀತಿ ಅತೀ ಸಣ್ಣ ಜೀವಿಯೊಂದು ನಮ್ಮನ್ನು ನಡುಗಿಸಬಹುದು ಅನ್ನೋದನ್ನು ತಿಳಿಸಿಕೊಡುವುದರೊಂದಿಗೆ ಪ್ರಕೃತಿಯ ಮೇಲೆ ನಾವೆಸಗಿರುವ ಅನ್ಯಾಯಗಳಿಗೆ ಪಶ್ಚಾತ್ತಾಪಪಡುವಂತೆಯೂ ಮಾಡಿದೆ. ಇದೇ ಕಥಾಹಂದರವನ್ನು ಇಟ್ಟುಕೊಂಡು ಪ್ರತಿಭಾನ್ವಿತ ಯುವಕರ ತಂಡವೊಂದು ವಿಭಿನ್ನ ಪರಿಕಲ್ಪನೆಯಲ್ಲಿ ಕಿರುಚಿತ್ರವನ್ನು ನಿರ್ಮಿಸಿದ್ದಾರೆ. ‘ಪ್ರಶ್ನೋತ್ತರ’ ನಾನು ನನ್ನೊಳಗೆ ಎಂಬ ಶೀರ್ಷಿಕೆಯಡಿ ನಿರ್ಮಿಸಲಾಗಿರುವ ಈ ಚಿತ್ರದ ಮೂಲಕ ಹಲವು ಗೊಂದಲ, ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನ ಮಾಡಲಾಗಿದೆ.
ಈ ಕಿರುಚಿತ್ರದ ಪರಿಕಲ್ಪನೆ, ನಿರ್ದೇಶನ, ಚಿತ್ರಕಥೆ, ಪೋಸ್ಟರ್ ಡಿಸೈನ್, ಗ್ರಾಫಿಕ್ ವರ್ಕ್ ಎಲ್ಲವೂ ಬಾತು ಕುಲಾಲ್ ಅವರದ್ದು. ಈ ಚಿತ್ರ ವೀಕ್ಷಿಸಿದರೆ ಅದರ ಹಿಂದಿನ ಶ್ರಮ , ಸೃಜನಾತ್ಮಕತೆ ಅರಿವಾಗುತ್ತದೆ. ಜಗತ್ತನ್ನೇ ಸಲಹುವ ಶ್ರೀ ಹರಿನಾರಾಯಣ ಹಾಗೂ ಲೋಕಸಂಚಾರಿ ನಾರದರ ನಡುವಿನ ಸಂಭಾಷಣೆಯಲ್ಲಿಯೇ ಸಾಗುವ ಈ ಕಿರುಚಿತ್ರವನ್ನು ಕೇವಲ ಗ್ರಾಫಿಕ್ ಬಳಸಿಯೇ ನಿರ್ಮಿಸಿರುವುದು ಇದರ ವಿಶೇಷತೆ. ಇನ್ನು ಸಂಭಾಷಣೆ ಹಾಗೂ ಹಿನ್ನೆಲೆ ಧ್ವನಿ ಅದ್ಭುತವಾಗಿದ್ದು ಕೇಳುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ರಾಜೇಶ್ ಮುಗುಳಿ ಸಂಭಾಷಣೆ ಬರೆದಿದ್ದು, ಸ್ವತಃ ಅವರು ಹಾಗೂ ಪ್ರಕಾಶ್ ಐಲಾ ಹಿನ್ನೆಲೆ ಧ್ವನಿ ನೀಡಿದ್ದಾರೆ. ದೀಪಕ್ ಕುಲಾಲ್ ತುಂಬೆ ಮತ್ತು ರಾಕೇಶ್ ಕುಲಾಲ್ ಚಿತ್ರ ನಿರ್ಮಿಸಿದ್ದಾರೆ.
ಭೂಲೋಕದಲ್ಲಿ ಮಹಾಮಾರಿ ರೋಗದಿಂದ ಮನುಕುಲಕ್ಕೆ ಆಗಿರುವ ಸಮಸ್ಯೆಗಳು, ಪರಿಹಾರಗಳ ವಿಚಾರವಾಗಿ ನಾರದರು, ಶ್ರೀಹರಿನಾರಾಯಣನನ್ನು ಪ್ರಶ್ನಿಸುವುದು ಹಾಗೂ ಅದಕ್ಕೆ ನಾರಾಯಣನು ನೀಡುವ ಉತ್ತರವೇ ‘ಪ್ರಶ್ನೋತ್ತರ’. ಕಿರುಚಿತ್ರವನ್ನು ಈಗಾಗಲೇ 22 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಿತ್ರವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

 https://youtu.be/mN9icuYKWwo 

 

 

 

ವಾಣಿಜ್ಯ ಜಾಹಿರಾತು

2 COMMENTS

  1. THANK YOU SO MUCH NEWS BHANDARA FOR SUPER SUPPORT. PLEASE ALL SUPPORT “PRASHNOTHARA” FILM TEAM & NEWS BHANDARA WEBSITE CHANNEL.

  2. Thank u so much
    ನಮ್ಮ ಈ ಪ್ರತಿಭೆಯನ್ನು ಗುರುತಿಸಿದ ನಿಮಗೆ ಬಿ.ಕೆ ಕ್ರಿಯೇಷನ್ ಚಿರರುಣಿ.
    ಎಲ್ಲರೂ ಒಂದು ಸಲ ಈ ಚಿತ್ರವನ್ನು ನೋಡಿ ಇಷ್ಟ ವಾದ್ರೆ ಎಲ್ಲರಲ್ಲೂ ಹಂಚಿಕೊಳ್ಳಿ.
    PLZ SUPPORT TO B.K CREATION AND NEWS BHANDARA WEBSITE.
    THANK U SO MUCH.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.