ವಾಣಿಜ್ಯ ಜಾಹಿರಾತು
ಮಂಗಳೂರು: ಈ ವರ್ಷದ ಕಂಬಳಕೂಟ ಮುಗಿಯುವ ಹಂತಕ್ಕೆ ಬರುತ್ತಿದ್ದು, ಇದೀಗ ಬಂಟ್ವಾಳದ ನಾವೂರು ಗ್ರಾಮದಲ್ಲಿ ಮತ್ತೊಂದು ಐತಿಹಾಸಿಕ ಕಂಬಳ ಆರಂಭಕ್ಕೆ ಸಿದ್ಧತೆ ನಡೆಯುತ್ತಿದೆ.
ಮಾಜಿ ಸಚಿವ ರಮಾನಾಥ ರೈ ನೇತೃತ್ವದಲ್ಲಿ ನಡೆಯುವ ಕಂಬಳಕ್ಕೆ ನಾವೂರು ಗ್ರಾಮದಲ್ಲಿ ಎಲ್ಲಾ ರೀತಿಯ ಪೂರ್ಣ ಸಿದ್ದತೆಗಳು ಭರದಿಂದ ಸಾಗಿದೆ. ಕಳೆದ 12 ದಿನಗಳಿಂದ ನಿರಂತರವಾಗಿ ಕಂಬಳ ಕರೆಯ ಕೆಲಸಗಳು ಸಾಗುತ್ತಿದೆ. ಕಾವಳಕಟ್ಟೆಯ ಮೂಡೂರು-ಪಡೂರು ಕಂಬಳ ನಿಂತ ಬಳಿಕ ಇದೀಗ ಮತ್ತೆ ರೈ ಅವರ ನೇತೃತ್ವದಲ್ಲಿ ಕಂಬಳ ಆಯೋಜನೆಯ ಸಿದ್ಧತೆ ನಡೆದಿದೆ. ಈ ವರ್ಷದ ಕೊನೆಯ ಕಂಬಳ ಇದಾಗಿದ್ದು ಮತ್ತೊಮ್ಮೆ ಬಂಟ್ವಾಳ ತಾಲೂಕಿನಲ್ಲಿ ನಡೆಯುವ ಈ ಕಂಬಳ ಕೂಟ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ.
ಕಂಬಳದ ಆಮಂತ್ರಣ ಪತ್ರಿಕೆಯು ವೇಣೂರು ಕಂಬಳದಲ್ಲಿ ಬಿಡುಗಡೆಗೊಳ್ಳಲಿದೆ.
ಈ ಕಂಬಳಕ್ಕೆ ಹಲವು ಮಂದಿ ಗಣ್ಯರು ಸೇರಿದಂತೆ ಕನ್ನಡ, ಹಿಂದಿ, ಚಿತ್ರರಂಗದ ತಾರೆಗಳು ಭಾಗವಹಿಸಲಿದ್ದಾರೆ ಎಂದು ಕಂಬಳ ಆಯೋಜಕರು ತಿಳಿಸಿದ್ದಾರೆ.
ವಾಣಿಜ್ಯ ಜಾಹಿರಾತು