ವಾಣಿಜ್ಯ ಜಾಹಿರಾತು
ಲಡಾಖ್: ಸೈನಿಕರ ಶೌರ್ಯ, ಭಾರತಮಾತೆಯ ರಕ್ಷಣೆಗಾಗಿ ನಿಮ್ಮ ತ್ಯಾಗ , ಸಾಟಿಯಿಲ್ಲದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಲಡಾಕ್ ನ ಲೇಹ್ ಗೆ ಭೇಟಿ ನೀಡಿದ ವೇಳೆ ಭಾರತೀಯ ವೀರ ಸೈನಿಕರನ್ನುದ್ದೇಶಿಸಿ ಮಾತನಾಡಿದರು. ದುರ್ಬಲರಿಂದ ಶಾಂತಿ ಸ್ಥಾಪನೆ ನಡೆಸಲು ಸಾಧ್ಯವಿಲ್ಲ. ಶಾಂತಿ ಸ್ಥಾಪನೆಗೆ ಧೈರ್ಯ, ಶೌರ್ಯವೇ ಅಗತ್ಯ. ಭಾರತೀಯರು ಕೊಳಲನ್ನು ಹಿಡಿದ ಶ್ರೀಕೃಷ್ಣನ ಆರಾಧಕರೂ ಹೌದು, ಸುದರ್ಶನ ಚಕ್ರ ಹಿಡಿದ ಶ್ರೀಕೃಷ್ಣನನ್ನು ಆದರ್ಶನೀಯ ಎಂದು ಅನುಸರಿಸುವವರೂ ಹೌದು ಎಂದು ಭಾರತದ ಶತ್ರುರಾಷ್ಟ್ರಗಳಿಗೆ ಎಚ್ಚರಿಕೆಯ ಸಂದೇಶ ನೀಡಿದರು.ವಿಸ್ತಾರವಾದ ಯುಗ ಕೊನೆಯಾಗಿದೆ. ಈಗೇನಿದ್ದರೂ ವಿಕಾಸವಾದದ ಯುಗ. ವಿಕಾಸವಾದವೇ ಭವಿಷ್ಯದ ಆಧಾರ ಎಂದು ಅವರು ಹೇಳಿದರು. ಲೇಹ್ ಗೆ ಭೇಟಿ ನೀಡಿದ ಪ್ರಧಾನಿ ಮೋದಿ, ಗಡಿ ಪ್ರದೆಶದ ಸ್ಥಿತಿ ಗತಿಗಳ ಬಗ್ಗೆ ಮಾಹಿತಿ ಪಡೆದರು. ಸೇನಾಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದರು.
ವಾಣಿಜ್ಯ ಜಾಹಿರಾತು