ನವದೆಹಲಿ : ದೆಹಲಿಯ ಪ್ರಗತಿ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು 5G ಇಂಟರ್ನೆಟ್ ಸೇವೆಗೆ ಚಾಲನೆ ನೀಡಿದ್ದು , ಭಾರತದಲ್ಲಿ ಅಲ್ಟ್ರಾ ಹೈ-ಸ್ಪೀಡ್ ಇಂಟರ್ನೆಟ್ ಯುಗಕ್ಕೆ ನಾಂದಿ ಹಾಡಿದ್ದಾರೆ.
5G ಇಂಟರ್ನೆಟ್ ಸೇವೆಯೂ ಆಯ್ದ ನಗರಗಳಲ್ಲಿಆರಂಭಗೊಳ್ಳಲಿದ್ದು, ಮುಂದಿನ ಒಂದೆರಡು ವರ್ಷಗಳಲ್ಲಿ ಇಡೀ ದೇಶದಲ್ಲಿ 5G ಇಂಟರ್ನೆಟ್ ಸೇವೆಯನ್ನು ಹಂತಹಂತವಾಗಿ ವಿಸ್ತರಿಸಲಾಗುತ್ತದೆ. ಜಿಯೋ, ಏರ್ಟೆಲ್ ಮುಂದಿನ ದಿನಗಳಲ್ಲಿ 5ಜಿ ಸೇವೆಯನ್ನು ತನ್ನ ಗ್ರಾಹಕರಿಗೆ ಒದಗಿಸಲಿದೆ.
5G ಸೇವೆಗಳನ್ನು ಆರಂಭಿಕ ಹಂತವಾಗಿ ಮುಂಬೈ ಮತ್ತು ಪುಣೆ ನಗರಗಳಲ್ಲಿ ಪ್ರಾರಂಭಿಸಲಾಗುತ್ತದೆ. ಇದರೊಂದಿಗೆ ದೆಹಲಿ, ಕೋಲ್ಕತ್ತಾ, ಚೆನ್ನೈ, ಅಹಮದಾಬಾದ್, ಬೆಂಗಳೂರು, ಚಂಡೀಗಢ, ಗಾಂಧಿನಗರ, ಹೈದರಾಬಾದ್, ಜಾಮ್‌ನಗರ, ಲಕ್ನೋದಲ್ಲಿಯೂ 5ಜಿ ಸೇವೆಯನ್ನು ಆರಂಭಿಸಲಾಗುತ್ತದೆ. ಪ್ರಾಯೋಗಿಕವಾಗಿ ಒಟ್ಟು 13 ನಗರಗಳಲ್ಲಿ 5ಜಿ ಸೇವೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ.
ಭಾರತದ ಮೇಲೆ 5G ಯ ಸಂಚಿತ ಆರ್ಥಿಕ ಪರಿಣಾಮವು 2035 ರ ವೇಳೆಗೆ USD 450 ಶತಕೋಟಿ ತಲುಪುತ್ತದೆ ಎಂದು ಅಂದಾಜಿಸಲಾಗಿದೆ.
Delhi | Prime Minister Narendra Modi inspects an exhibition at Pragati Maidan.
He will inaugurate the sixth edition of the Indian Mobile Congress (IMC) and launch 5G services shortly. pic.twitter.com/5WKmlPIu5K
— ANI (@ANI) October 1, 2022