ವಾಣಿಜ್ಯ ಜಾಹಿರಾತು

ಮೂಡುಬಿದಿರೆ: ಕೀರ್ತಿನಗರದಲ್ಲಿ  ಗೋವಿನ ರುಂಡ ಎಸೆದು ಶಾಂತಿ ಕದಡಲು ಯತ್ನಿಸಿದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ  ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಮೂಡುಬಿದಿರೆ ಪೊಲೀಸ್ ಠಾಣೆ ಎದುರು ಶುಕ್ರವಾರ ರಾತ್ರಿ ಭಜನೆ ಮಾಡುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಪ್ರತಿಭಟನಾನಿರತರೊಂದಿಗೆ ಮಾತುಕತೆ ನಡೆಸಿದ ಮೂಡುಬಿದಿರೆ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಸುದೀಪ್, ಆರೋಪಿಗಳನ್ನು ಪತ್ತೆ ಹಚ್ಚುವುದು ನಮ್ಮ ಕರ್ತವ್ಯ. ಸರಿಯಾದ ಕುರುಹುಗಳು ಸಿಕ್ಕಿದ ತಕ್ಷಣ ಪತ್ತೆ ಹಚ್ಚುತ್ತೇವೆ. ಒಂದು ವಾರದೊಳಗಡೆ ತಪ್ಪಿತಸ್ಥರನ್ನು ಬಂಧಿಸುವುದಾಗಿ ಭರವಸೆ ನೀಡಿದರು.


ಮೂಡುಬಿದಿರೆ ಪ್ರಭಾರ ಠಾಣಾಧಿಕಾರಿ ಸಂದೇಶ್ ಸಂಘಟನೆಯ ಪ್ರಮುಖರೊಂದಿಗೆ ಸಮಾಲೋಚಿಸಿ, ಸಿ.ಸಿ ಟಿ.ವಿಗಳನ್ನು ಪರಿಶೀಲಿಸುತ್ತಿದ್ದೇವೆ. ಆರೋಪಿಗಳ ಪತ್ತೆ ಮಾಡಲು ಪೊಲೀಸ್ ಇಲಾಖೆಯು ಶ್ರಮಿಸುತ್ತಿದೆ ಎಂದರು.

ಸಂಘಟನೆಯ ಪ್ರಾಂತ ಉಪಾಧ್ಯಕ್ಷ ಕಿಶೋರ್, ಪ್ರಧಾನ ಕಾರ್ಯದರ್ಶಿ ಅಮಿತ್ ಗುಂಡಳಿಕೆ, ಕಾರ್ಯದರ್ಶಿಗಳಾದ ಹರೀಶ್ ಮಟ್ಟಿ, ಸಂದೀಪ್ ಆಮ್ಲಮೊಗರು, ಜಿಲ್ಲಾ ಪ್ರಮುಖರಾದ ಸತೀಶ್ ಮುಂಚೂರು, ಬಾಲಕೃಷ್ಣ ಮುಂಚೂರು ಉಡುಪಿ ಜಿಲ್ಲಾಧ್ಯಕ್ಷ ಪ್ರಶಾಂತ್ ನಾಯಕ್, ಸಂಘಟನೆಯ ಮೂಡುಬಿದಿರೆ ತಾಲೂಕು ಅಧ್ಯಕ್ಷ ಸಮಿತ್ ರಾಜ್ ದರೆಗುಡ್ಡೆ, ಪ್ರಧಾನ ಕಾರ್ಯದರ್ಶಿ ಸಂದೀಪ್ ಸುವರ್ಣ ಕೆಲ್ಲಪುತ್ತಿಗೆ, ಯುವವಾಹಿನಿ ಸಂಯೋಜಕ ಮೋಕ್ಷಿತ್ ಶೆಟ್ಟಿ, ನಿಧಿ ಪ್ರಮುಖ್ ನರೇಶ್ ಶೆಟ್ಟಿ ಸಹಿತ ಮತ್ತಿತರ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಗೋವಿನ ರುಂಡ ಎಸೆದವರ ವಿರುದ್ಧ ಕಠಿಣ ಕ್ರಮಕ್ಕೆ ವಿಹಿಂಪ ಬಜರಂಗದಳ ಮೂಡುಬಿದಿರೆ ಆಗ್ರಹ

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here