ವಾಣಿಜ್ಯ ಜಾಹಿರಾತು

ಸಿಂಪಲ್ ಸ್ಟಾರ್ ರಕ್ಷಿತ್‍ಶೆಟ್ಟಿ ಚಿತ್ರರಂಗಕ್ಕೆ ಕಾಲಿಟ್ಟು ಇಂದಿಗೆ 10ವರ್ಷಗಳಾಯಿತು. ಕರಾವಳಿಯ ಸಣ್ಣ ಪಟ್ಟಣ ಉಡುಪಿಯಿಂದ ಕನಸ್ಸನ್ನು ಹೊತ್ತು ಬೆಂಗಳೂರು ಸೇರಿ ಭರವಸೆಯ ನಟನಾಗಿ ಮಿಂಚುತ್ತಿದ್ದಾರೆ. ತುಘಲಕ್‍ನಿಂದ ಶುರವಾದ ಸಿನಿ ಪಯಣ ಸಪ್ತಸಾಗರದಾಚೆ ತಲುಪಿದೆ. ಸಿನಿಮಾ ಬ್ಯಾಕ್‍ಗ್ರೌಂಡ್ ಇಲ್ಲದೇ ಇದ್ರು ಸ್ಯಾಂಡಲ್‍ವುಡ್‍ನಲ್ಲಿ ಹೊಸತನದ ಅಲೆಯನ್ನು ತಂದು ವೀಕ್ಷರ ಮೆಚ್ಚುಗೆ ಗಳಿಸಿದ್ದಾರೆ. ಆರಂಭದಲ್ಲಿ ಸೋಲುಗಳೇ ರಕ್ಷಿತ್‍ನ ಎದುರುಗೊಂಡರು ಕೂಡ `ಸಿಂಪಲ್ಲಾಗ್ ಒಂದು ಲವ್ ಸ್ಟೋರಿ’ ಸಿನಿಮಾ ರಕ್ಷಿತ್‍ನ ಗುರುತಿಸುವಂತೆ ಮಾಡಿತ್ತು. `ಉಳಿದವರು ಕಂಡಂತೆ’ `ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾ ಹಿಟ್ ಆಗಿ ರಕ್ಷಿತ್ ಮೇಲೆ ಜನರ ನಿರೀಕ್ಷೆ ದುಪ್ಪಟ್ಟಾಯಿತು. 2016ರಲ್ಲಿ ತೆರೆಕಂಡ `ಕಿರಿಕ್ ಪಾರ್ಟಿ’ ಸಿನಿಮಾದ ಮೋಡಿ ಇಂದಿಗೂ ಮಾಸಿಲ್ಲ. ಈ 10 ವರ್ಷಗಳಲ್ಲಿ ರಕ್ಷಿತ್ ಶೆಟ್ಟಿ ನಟನೆಯ 9 ಸಿನಿಮಾಗಳು ರಿಲೀಸ್ ಆಗಿವೆ. ಆದರಲ್ಲಿ 9ನೇ ಸಿನಿಮಾ `ಅವನೇ ಶ್ರೀಮನ್ನಾರಾಯಣ’ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಮೂಡಿ ಬಂತು.
ಪ್ರಸ್ತುತ ರಕ್ಷಿತ್ 777ಚಾರ್ಲಿ, ಸಪ್ತಸಾಗರದಾಚೆ ಎಲ್ಲೋ, ಪುಣ್ಯಕೋಟಿ ಸಿನಿಮಾವನ್ನು ಒಪ್ಪಿಕೊಂಡಿದ್ದು, ಈ ಸಿನಿಮಾ ಕೆಲಸದಲ್ಲಿ ಬ್ಯೂಸಿಯಾಗಿದ್ದಾರೆ. ರಕ್ಷಿತ್ ಶೆಟ್ಟಿ ನಟ ಮಾತ್ರವಲ್ಲದೇ ನಿರ್ಮಾಪಕ, ನಿರ್ದೇಶಕನೂ ಹೌದು. ರಕ್ಷಿತ್ ಶೆಟ್ಟಿಗೆ ಗೆಳೆಯ ರಿಷಬ್‍ಶೆಟ್ಟಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಶುಭಾಶಯ ತಿಳಿಸಿದ್ದಾರೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.