ಸೋಂಪು ಕಾಳನ್ನು ಸಾಮಾನ್ಯವಾಗಿ ಅಡುಗೆಯ ಮಸಾಲೆಯಲ್ಲಿ ಅಥವಾ ಊಟ ಆದ ಬಳಿಕ ಬಾಯಿ ವಾಸನೆ ಬಾರದಂತೆ ತಿನ್ನುವುದು ಎಲ್ಲರಿಗೆ ತಿಳಿದಿದೆ. ಆದರೆ ಈ ಸೋಂಪು ಕಾಳು ದೇಹದ ಅನೇಕ ರೋಗಗಳಿಗೆ ರಾಮಬಾಣವಾಗಿದೆ. ‘ಸೋಂಪು ಕಾಳು’ ಸೇವನೆಯಿಂದ ಏನೆಲ್ಲಾ ಉಪಯೋಗವಿದೆ ಅನ್ನೋದ್ರ ಕುರಿತು ಕೆಲವು ಮಾಹಿತಿಗಳು ನಿಮಗಾಗಿ ಇಲ್ಲಿವೆ.
ಊಟವಾದ ಬಳಿಕ ಸೋಂಪು ತಿನ್ನುವುದರಿಂದ ಆಹಾರ ಜೀರ್ಣಕ್ರಿಯೆಯಲ್ಲಿ ಸಹಾಯವನ್ನು ಮಾಡಿ ಹೊಟ್ಟೆಯನ್ನು ಸಡಿಲಗೊಳಿಸುತ್ತದೆ. ಜೊತೆಗೆ ಇದನ್ನು ಬಾಯಿಯಿಂದ ಕೆಟ್ಟ ವಾಸನೆ ಬರದಂತೆ ತಡೆಯಲು ಮೌತ್ ಫ್ರೆಶ್ನರ್ ರೂಪದಲ್ಲಿಯೂ ಕೂಡ ಬಳಸಬಹುದಾಗಿದೆ.
ಸೋಂಪು ತಿನ್ನುವುದರಿಂದ ಚರ್ಮದ ಬಣ್ಣವನ್ನು ಬೆಳ್ಳಗಾಗಿಸಿ, ಹೊಳೆಯುವಂತೆ ಮಾಡುತ್ತದೆ.
ಸೋಂಪು ತಿನ್ನುವುದರಿಂದ ದೃಷ್ಟಿ ಹೆಚ್ಚಿಸಲು ಮತ್ತು ಕಣ್ಣಿಗೆ ಸಂಬಂಧಿಸಿದ ಕಾಯಿಲೆಗಳನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.
ಹೆಣ್ಣು ಮಕ್ಕಳಲ್ಲಿ ಕಂಡುಬರುವ ಮುಟ್ಟಿನ ಸಮಸ್ಯೆಯಲ್ಲಿ ಸೋಂಪನ್ನು ಬೆಲ್ಲದೊಂದಿಗೆ ಸೇವಿಸುವುದರಿಂದ ರಕ್ತದ ಹರಿವಿನಲ್ಲಿ ಬರುವ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
ಸೋಂಪು ಟೀ ಯನ್ನು ಕುಡಿಯುವುದರಿಂದ ಕೆಮ್ಮು ಮತ್ತು ಅಜೀರ್ಣದ ಸಮಸ್ಯೆಗಳನ್ನು ನಿವಾರಿಸುತ್ತದೆ.
ನಿದ್ರೆಯ ಸಮಸ್ಯೆಯಿಂದ ಬಳಲುತ್ತಿದ್ದವರು ಪ್ರತೀ ದಿನ ಒಂದು ಚಮಚ ಸೋಂಪನ್ನು ಶೇವನೆ ಮಾಡುವುದರಿಂದ ಉತ್ತಮ ನಿದ್ದೆ ಬರುವಲ್ಲಿ ಸಹಾಯ ಮಾಡುತ್ತದೆ.
ಸೋಂಪಿನ ಸೇವನೆ ದೇಹಕ್ಕೆ ತಂಪು. ಸೋಂಪಿನ ಸೇವನೆಯಿಂದ ಕಣ್ಣಿನ ಕೆಳಭಾಗದಲ್ಲಿ ಕಂಡುಬರುವ ಊತವನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ.
4-5 ಚಮಚ ಸೋಂಪು ಕಾಳನ್ನು ಒಂದು ಲೋಟ ನೀರಿನಲ್ಲಿ ಚೆನ್ನಾಗಿ ಕುದಿಸಬೇಕು. ಆ ನೀರನ್ನು ಕೂದಲಿನ ಬುಡಕ್ಕೆ ಹಚ್ಚುತ್ತಿದ್ದರೆ ಕೂದಲು ಉದುರುವಿಕೆ ಕಡಿಮೆ ಮಾಡಿ ಆರೋಗ್ಯವಂತ ಕೂದಲು ಹೊಂದಲು ಸಹಕಾರಿಯಾಗಿದೆ.
ಸೋಂಪು ಕಾಳನ್ನು ಜಗಿದು ತಿನ್ನುವುದರಿಂದ ತೂಕ ತಗ್ಗಿಸುವಲ್ಲಿ ಸಹಾಯ ಮಾಡುತ್ತದೆ.
ಸೋಂಪಿನ ಪುಡಿಯನ್ನು ಜೇನು ಮತ್ತು ಮೊಸರಿನೊಂದಿಗೆ ಮಿಶ್ರಣ ಮಾಡಿ ಮುಖಕ್ಕೆ ಹಚ್ಚುವುದರಿಂದ ಮೊಡವೆ ಸಮಸ್ಯೆಗಳನ್ನು ನಿವಾರಿಸುತ್ತದೆ.