ವಾಣಿಜ್ಯ ಜಾಹಿರಾತು

ಹೊಸದಿಲ್ಲಿ: ಟೂರಿಸ್ಟ್ ಪ್ಯಾಸೆಂಜರ್ ವಾಹನಗಳಿಗೆ ದೇಶಾದ್ಯಂತ ಸುಗಮ ಸಂಚಾರಕ್ಕೆ ಅನುವು ಕಲ್ಪಿಸಲು ಹೊಸ ಪರ್ಮಿಟ್ ಯೋಜನೆ ಜಾರಿಗೆ ಸರಕಾರ ನಿರ್ಧರಿಸಿದೆ. ಈ ಯೋಜನೆಯ ಅಡಿಯಲ್ಲಿ ಯಾವುದೇ ಟೂರಿಸ್ಟ್ ವಾಹನ ಮಾಲೀಕರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ರಾಷ್ಟ್ರೀಯ ಪರ್ಮಿಟ್ ಗಳಿಸಲು ಸಾಧ್ಯವಾಗಲಿದೆ. ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಈ ಕ್ರಮ ಕೈಗೊಳ್ಳುತ್ತಿದೆ ಎಂದು ಸರಕಾರ ತಿಳಿಸಿದೆ. ಈ ನಿಟ್ಟಿನಲ್ಲಿ ೧೯೮೯ರ ಕೇಂದ್ರೀಯ ಮೋಟಾರು ವಾಹನ ಕಾಯಿದೆ ಅಡಿಯಲ್ಲಿ ರಾಷ್ಟ್ರೀಯ ಪರ್ಮಿಟ್ ನೀತಿಗೆ ತಿದ್ದುಪಡಿಯಾಗಲಿದೆ. ಈಗಾಗಲೇ ಗೂಡ್ಸ್ ವಾಹನಗಳಿಗೆ ರಾಷ್ಟ್ರೀಯ ಪರ್ಮಿಟ್ ಜಾರಿಯಾಗಿದ್ದು, ಅದರ ಯಶಸ್ಸಿನಿಂದ ಸ್ಪೂರ್ತಿ ಪಡೆದಿರುವ ಸರಕಾರ ಟೂರಿಸ್ಟ್ ವಾಹನಗಳಿಗೆ ಈ ಸೌಲಭ್ಯ ವಿಸ್ತರಿಸಲು ಮುಂದಾಗಿದೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.