ವಾಣಿಜ್ಯ ಜಾಹಿರಾತು

ಉಡುಪಿ: ಜಿಲ್ಲೆಯಲ್ಲಿ ವಿದೇಶಿಯರು ತಂಗಿರುವ ಕುರಿತಾದ ಮಾಹಿತಿಯನ್ನು ಸಂಬಂಧಪಟ್ಟ ಮಾಲಕರು 24 ಗಂಟೆಯೊಳಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕಡ್ಡಾಯವಾಗಿ ನೀಡಬೇಕು ಎಂದು ಆದೇಶಿಸಲಾಗಿದೆ.

ವಿದೇಶೀಯರ ಕಾಯ್ದೆ 1911ರ ಕಲಂ, 7 ರಂತೆ ಯಾವುದೇ ವಿದೇಶಿಯರು ತಂಗುವ ಸ್ಥಳಗಳಾದ ಹೊಟೇಲ್‌,  ಗೆಸ್ಟ್ ಹೌಸ್, ಧರ್ಮಶಾಲಾ, ಪತ್ಯೇಕ ಮನೆ, ಯುನಿವರ್ಸಿಟಿ, ವಿದ್ಯಾ ಸಂಸ್ಥೆ, ಸಹಿತ ಇತರೆ ಸ್ಥಳಗಳಲ್ಲಿ ವಿದೇಶಿಯರು ತಂಗಿದ ಬಗ್ಗೆ ಮಾಹಿತಿ ಫಾರ್ಮ್ ‘ಸಿ’ಯನ್ನು ಸಂಬಂಧಪಟ್ಟ ಮಾಲೀಕರು ನೋಂದಣಿ ಅಧಿಕಾರಿಗಳಿಗೆ (ಸಂಬಂಧಪಟ್ಟ ಜಿಲ್ಲೆಯ ಪೊಲೀಸ್ ಆಧೀಕ್ಷಕರು) 24 ಗಂಟೆಯೊಳಗೆ ನೀಡುವಂತೆ ಆದೇಶ ನೀಡಲಾಗಿದೆ.

ಈ ನಿಯಮವನ್ನು ಉಲ್ಲಂಘಿಸಿದರೆ ಸಂಬಂಧಪಟ್ಟವರ ವಿರುದ್ಧ ಕಲಂ 14 ವಿದೇಶಿಯರ ಕಾಯ್ದೆ 1946ರ ಅಡಿಯಲ್ಲಿ ಕ್ರಮ ಜರುಗಿಸಬಹುದಾಗಿದೆ. ಈ ಪ್ರಕರಣದಲ್ಲಿ 5 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ.

https://indianfrro.gov.in/frrg/Form C ಲಿಂಕ್ ಮೂಲಕ ನೊಂದಣಿ ಮಾಡಬಹುದಾಗಿದೆ. ವಿದೇಶಿರಿಗೆ ಫಾರ್ಮ್ ಸಿ ಭರ್ತಿ ಮಾಡುವ ಅವಕಾಶವಿಲ್ಲ. ಪ್ರತ್ಯೇಕ ಮನೆಯ ಮಾಲೀಕರಿಗೆ ಒಟಿಪಿ ಮೂಲಕ ಸ್ವಯಂ ನೊಂದಣಿಗೆ ಅವಕಾಶವಿದೆ. ಫಾರ್ಮ್ ಸಿ ಆನ್ ಲೈನ್ ನಲ್ಲಿ ಭರ್ತಿಗೊಳಿಸುವ ಸಂಬಂಧ ತಾಂತ್ರಿಕ ಕಾರಣಗಳಿಗೆ ಮೋಜಿಲಲಾ ಪೈರ್ ಫಾಕ್ಸ್ ಉಪಯೋಗಿಸಲು ತಿಳಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ವಿದೇಶದಲ್ಲಿ ಕಲಸ ಕೊಡಿಸುವುದಾಗಿ ನಂಬಿಸಿ, ಮುಂಗಡವಾಗಿ ಹಣ ಪಡೆದು ವಿದೇಶಕ್ಕೆ ತೆರಳಿದ ನಂತರ ಸರಿಯಾದ ಕೆಲಸವಿಲ್ಲದೆ, ಹಣ ಹಾಗೂ ಕೆಲಸವನ್ನು ಕಳೆದುಕೊಂಡು ವಂಚನೆಗೊಳಗಾದ ಉದಾಹರಣೆಗಳು ಕಂಡುಬಂದಿರುತ್ತದೆ. ಆದುದರಿಂದ ನಾಗರೀಕರು ಜಾಗರುಕತೆಯಿಂದ ಅನಧಿಕೃತ ಎಜೆಂಟರನ್ನು ಸಂಪರ್ಕಿಸದೆ ಮಿನಿಸ್ಟ್ರೀ ಆಫ್ ಎಕ್ಸ್ಟರ್ ನಲ್ ಎಫೇರ್ಸ್ ನೊಂದಿಗೆ ನೋಂದಾಯಿತ ಎಜೆಂಟರುಗಳನ್ನು ಸಂಪರ್ಕಿಸಿ ಮಾಹಿತಿ ಪಡೆದು ಮುಂದಿನ ಕ್ರಮ ಜಿಲ್ಲೆಯಲ್ಲಿ ಅಧಿಕೃತವಾಗಿ ನೊಂದಾಯಿತರ ಮಾಹಿತಿಯನ್ನು https://www.emigrants.gov.in ನಿಂದ ಪಡೆದುಕೊಳ್ಳಬಹುದಾಗಿದೆ.

ಹೊಸ ಅಥವಾ ನವೀಕೃತ ಪಾಸ್ ಪೋರ್ಟ್ ಅರ್ಜಿ ಸಲ್ಲಿಸುವ ಬಗ್ಗೆ ಸ್ಥಳೀಯ ಅಧೀಕೃತ ಪಾಸ್ ಪೋರ್ಟ್ ಸೇವಾ ಕೇಂದ್ರಗಳನ್ನು (ಬೃಹ್ಮಾವರ ಮಂಗಳೂರು) ಸಂಪರ್ಕಿಸಿ ಸರಿಯಾದ ಮಾಹಿತಿಯನ್ನು ಪಡೆಯಬಹುದಾಗಿದೆ. ಪ್ರಾದೇಶಿಕ ಪಾಸ್ ಪೋರ್ಟ್ ಕಚೇರಿಯ ಪ್ರಕಟಣೆಯಂತ ಯಾವುದೇ ಅಧಿಕೃತ ನೋಂದಾಯಿತ ಎಜೆಂಟ್ ಗಳು ಇರುವುದಿಲ್ಲ.

ಹೆಚ್ಚಿನ ಮಾಹಿತಿಯನ್ನು https://www.passportindia.gov.in ನಲ್ಲಿ ಪಡೆದುಕೊಳ್ಳುಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ನಕಲಿ ಪಾಸ್ ಪೋರ್ಟ್ ಪಡೆದ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇನ್ನು ಮುಂದೆ ನಕಲಿ ಪಾಸ್ ಪೋರ್ಟ್ ಪಡೆಯಲು ಸಹಕರಿಸುವ ಎಜೆಂಟ್ ಹಾಗೂ ಅರ್ಜಿದಾರರು ಪತ್ತೆಯಾದಲ್ಲಿ ಅವರ ವಿರುದ್ದ ಕಾನೂನು ಕ್ರಮ ಜರಗಿಸಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕಟಣೆ ತಿಳಿಸಿದ್ದಾರೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.