ವಾಣಿಜ್ಯ ಜಾಹಿರಾತು
ಮೂಡುಬಿದಿರೆ: ಶಿವಾಯ ಫೌಂಡೇಶನ್ ಇದರ ವತಿಯಿಂದ ಮೂಡುಬಿದಿರೆಯ “ಸ್ಪೂರ್ತಿ ವಿಶೇಷ ಶಾಲೆ”ಗೆ 1 ಲಕ್ಷ ದೇಣಿಗೆಯನ್ನು ಹಸ್ತಾಂತರಿಸಲಾಯಿತು.
ಶಾಲೆಯ ಮುಖ್ಯಸ್ಥ ಪ್ರಕಾಶ್ ಜೆ. ಶೆಟ್ಟಿಗಾರ್ ದೇಣಿಗೆಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಶಿವಾಯ ಫೌಂಡೇಶನ್ ಮುಂಬೈ ಇದರ ಗೌರವಾಧ್ಯಕ್ಷ ಡಾ. ಎನ್.ವಿ. ಪ್ರಸಾದ್ ಶೆಟ್ಟಿ, ಪಡುಬಿದ್ರಿ ಬಂಟರ ಸಂಘ ಯುವ ವಿಭಾಗದ ಅಧ್ಯಕ್ಷ ನವೀನ್ ಎನ್.ಶೆಟ್ಟಿ, ಪಲಿಮಾರು ಚಾವಡಿ ರೈತ ಸಂಘದ ಅಧ್ಯಕ್ಷ ದೀಪಕ್ ಪೈ, ಯುವ ಉದ್ಯಮಿ ಪ್ರಸಾದ್ ರೈ, ಪಲಿಮಾರು ಶಿವಾಯ ಫೌಂಡೇಶನ್ ನ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಮತ್ತು ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವಾಣಿಜ್ಯ ಜಾಹಿರಾತು