ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಸಿನಿಮಾದ ಶೂಟಿಂಗ್ ಮಂಗಳೂರಿನಲ್ಲಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ರಜನಿಕಾಂತ್ ಮಂಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಈಗಾಗಲೇ ಖ್ಯಾತ ನಟ ಶಿವರಾಜ್ ಕುಮಾರ್ ಜೈಲರ್ ಸಿನಿಮಾ ತಂಡ ಸೇರಿಕೊಂಡಿದ್ದು ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಜೈಲರ್ ಸಿನಿಮಾದಲ್ಲಿ ನಟ ಸಾಧು ಕೋಕಿಲಾ ಕೂಡ ನಟಿಸುತ್ತಿರುವುದು ವಿಶೇಷವಾಗಿದೆ.
ಜೈಲರ್ ಸಿನಿಮಾದ ಶೂಟಿಂಗ್ ಮಂಗಳೂರಿನ ಪಿಲಿಕುಳದ ಗುತ್ತಿನ ಮನೆಯಲ್ಲಿ ನಡೆಯುತ್ತಿದೆ. ಇದಕ್ಕಾಗಿ ವಿಶೇಷ ಸೆಟ್ ಹಾಕಿದ್ದು, ರಜನಿಕಾಂತ್, ಶಿವರಾಜ್ ಕುಮಾರ್ ಜೊತೆ ನಟ ಸಾಧು ಕೋಕಿಲಾ ಕೂಡ ಭಾಗಿಯಾಗಿದ್ದಾರೆ. ಪಿಲಿಕುಳದಲ್ಲಿ ಕರಾವಳಿಯನ್ನು ಬಿಂಬಿಸುವಂತಹ ದೃಶ್ಯಗಳನ್ನು ಸೆರೆ ಹಿಡಿಯಲಾಗುತ್ತಿದೆ.
ಮೂಲಗಳ ಪ್ರಕಾರ ಚಿತ್ರದಲ್ಲಿ ಶಿವರಾಜ್ ಕುಮಾರ್ ನೆಗೆಟಿವ್ ಶೇಡ್ ಇರುವಂತಹ ಪಾತ್ರವನ್ನು ನಿರ್ವಹಿಸುತ್ತಿದ್ದಾರಂತೆ. ಪಿಳಿಕುಳದ ಗುತ್ತಿನ ಮನೆಯಲ್ಲಿಯೇ ಕಳೆದ ಎರಡು ಮೂರು ದಿನಗಳಿಂದ ಜೈಲರ್ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಸದ್ಯ ರಜನಿ ಜೊತೆಗೆ ಶಿವರಾಜ್ ಕುಮಾರ್ ಮಾತನಾಡುತ್ತಿರುವ ಫೋಟೋ ಸಖತ್ ಭಾರೀ ವೈರಲ್ ಆಗಿದೆ. ಇದೀಗ ಚಿತ್ರತಂಡಕ್ಕೆ ಸಾಧು ಕೋಕಿಲ ಕೂಡ ಸೇರಿಕೊಂಡಿರುವ ಕನ್ನಡಿಗರಿಗೆ ಮತ್ತಷ್ಟು ಖುಷಿಯ ವಿಷಯವಾಗಿದೆ.