ವಾಣಿಜ್ಯ ಜಾಹಿರಾತು

ಮಂಗಳೂರು: ಸ್ಯಾಂಡಲ್​ವುಡ್ ನ ನಟಿ ಶುಭಾ ಪೂಂಜಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ದೀರ್ಘಕಾಲದ ಗೆಳೆಯ ಸುಮಂತ್ ಅವರ ಜೊತೆ ಸಿಂಪಲ್ ಆಗಿ ಮದುವೆಯಾಗಿದ್ದಾರೆ. ಮಂಗಳೂರಿನ ಮಜಲಬೆಟ್ಟುಬೀಡುವಿನಲ್ಲಿ ಕುಟುಂಬದವರು ಹಾಗು ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಸರಳವಾಗಿ ಮದುವೆ ಕಾರ್ಯಕ್ರಮ ನಡೆಯಿತು.

ಈ ಕುರಿತು ಶುಭಾ ಪೂಂಜಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದು, ಚಿತ್ರವನ್ನು ಹಂಚಿಕೊಂಡಿದ್ದಾರೆ. ಪ್ರೀತಿಯ ಎಲ್ಲರಿಗೂ ನಮಸ್ಕಾರಗಳು. ಇಂದು ನಾನು ಮತ್ತು ಸುಮಂತ್ ಮಹಾಬಲ ಗುರು-ಹಿರಿಯರು ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ನಮ್ಮ ಊರು ಮಜಲಬೆಟ್ಟುಬೀಡುವಿನಲ್ಲಿ ಸರಳ ವಿವಾಹವಾದೆವು. ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆಗಳು ನಮ್ಮ ಮೇಲಿರಲಿ” ಎಂದು ಶುಭಾ ಬರೆದುಕೊಂಡಿದ್ದಾರೆ.

ಶುಭ ಪೂಂಜಾ ಪತಿ ಸುಮಂತ್ ಬಿಲ್ಲವ, ಬೆಂಗಳೂರಿನಲ್ಲಿ ಗ್ಯಾಸ್ ಏಜೆನ್ಸ್ ನಡೆಸುತ್ತಿದ್ದು, ಜಯ ಕರ್ನಾಟಕ ಸಂಘಟನೆಯಲ್ಲಿ ಕೂಡಾ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಶುಭ ಪೂಂಜಾ ಕೆಲವು ವರ್ಷಗಳ ಹಿಂದೆ ಸುಮಂತ್ ಅವರನ್ನು ಕಾರ್ಯಕ್ರಮವೊಂದರಲ್ಲಿ ಭೇಟಿ ಮಾಡಿದ್ದರು. ಕ್ರಮೇಣ ಇಬ್ಬರಿಗೂ ಪರಿಚಯವಾಗಿ ಈ ಪರಿಚಯ ಪ್ರೀತಿಗೆ ತಿರುಗಿತು. ಮನೆಯವರ ಮುಂದೆ ತಮ್ಮ ಪ್ರೀತಿಯನ್ನು ಹೇಳಿ ಗುರು ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here