ವಾಣಿಜ್ಯ ಜಾಹಿರಾತು

ಸ್ಯಾಂಡಲ್ ವುಡ್ ನ ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಭಗವಾನ್ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಕನ್ನಡ ಸಿನಿಮಾ ರಂಗದಲ್ಲಿ ದೊರೈ ಹಾಗೂ ಭಗವಾನ್ ಜೋಡಿ ಸಾಕಷ್ಟು ಖ್ಯಾತಿಯಾಗಿತ್ತು. ಈಗಾಗಲೇ ದೊರೆ ನಿಧನರಾಗಿದ್ದು, ಇದೀಗ ಭಗವಾನ್ ಕೂಡ ನಿಧನರಾಗಿದ್ದಾರೆ.

1933ರಲ್ಲಿ ಮೈಸೂರಿನ ತಮಿಳು ಅಯ್ಯಂಗಾರ್ ಕುಟುಂಬದಲ್ಲಿ ಜನಿಸಿದ್ದ ಭಗವಾನ್ ಅವರ ಪೂರ್ಣ ಹೆಸರು ಶ್ರೀನಿವಾಸ್ ಕೃಷ್ಣ ಅಯ್ಯಂಗಾರ್ ಭಗವಾನ್.  ರಂಗಭೂಮಿ ಹಿನ್ನೆಲೆಯುಳ್ಳ ಇವರು, ಕಾಲೇಜು ದಿನಗಳಲ್ಲಿ ರಂಗಭೂಮಿಯ ಸಾಕಷ್ಟು ಚಟುವಟಿಕೆಗಳಲ್ಲಿ ತೊಡಗಿಕೊಂಡವರು. 1956ರಲ್ಲಿ ಕಣಗಾಲ್ ಪ್ರಭಾಕರ ಶಾಸ್ತ್ರಿಗಳಿಗೆ ಸಹಾಯಕ ನಿರ್ದೇಶಕರಾಗಿ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟರು.

1966ರಲ್ಲಿ ತೆರೆಕಂಡ ಸಂಧ್ಯಾರಾಗ ಚಿತ್ರದ ಮೂಲಕ ಸಹಾಯಕ ನಿರ್ದೇಶಕರಾಗಿ ಭಡ್ತಿ ಪಡೆದು, ನಂತರ ನಿರ್ದೇಶಕ ದೊರೈರಾಜ್ ಜೊತೆಗೂಡಿ ಸ್ವತಂತ್ರ ನಿರ್ದೇಶಕರಾದವರು. 1993ರಲ್ಲಿ ದೊರೈರಾಜ್ ನಿಧನದ ನಂತರ ಒಂಟಿಯಾದರು ಭಗವಾನ್. ಬರೋಬ್ಬರಿ 49 ಸಿನಿಮಾಗಳನ್ನು ಈ ಜೋಡಿ ನಿರ್ದೇಶನ ಮಾಡಿದ್ದು ವಿಶೇಷ. ಈ ಜೋಡಿಯ ಮತ್ತೊಂದು ದಾಖಲೆಯೆಂದರೆ 24 ಕಾದಂಬರಿ ಆಧರಿಸಿದ ಸಿನಿಮಾಗಳನ್ನು ಈ ಜೋಡಿ  ನಿರ್ದೇಶನ ಮಾಡಿದ್ದಾರೆ.

ಕನ್ನಡದ ಅಷ್ಟೂ ಸೂಪರ್ ಸ್ಟಾರ್ ಸಿನಿಮಾಗಳಿಗೆ ನಿರ್ದೇಶನ ಮಾಡಿದ ಹೆಗ್ಗಳಿಕೆ ಈ ಜೋಡಿಯದ್ದು. ಜೇಡರ ಬಲೆ, ಕಸ್ತೂರಿ ನಿವಾಸ, ಎರಡು ಕನಸು, ಬಯಲು ದಾರಿ, ಗಿರಿಕನ್ಯೆ, ಚಂದನದ ಗೊಂಬೆ, ಜೀವನ ಚೈತ್ರ, ಒಡಹುಟ್ಟಿದವರು, ಯಾರಿವನು, ಮುನಿಯನ ಮಾದರಿ ಸೇರಿದಂತೆ ಇನ್ನೂ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.