ವಾಣಿಜ್ಯ ಜಾಹಿರಾತು
ಉಡುಪಿ: ರಾಜ್ಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿರುವ ‘ಸ್ಯಾಂಟ್ರೋ ರವಿ’ಯ ಪ್ರಕರಣದಲ್ಲಿ ದಿನೇ ದಿನೇ ಹೊಸ ಹೊಸ ವಿಚಾರಗಳು ಬೆಳಕಿಗೆ ಬರುತ್ತಿದೆ. ಇದೀಗ ಸ್ಯಾಂಟ್ರೋ ರವಿ ಉಡುಪಿ ಜಿಲ್ಲೆಗೆ ಭೇಟಿ ನೀಡಿದ್ದರ ಕುರಿತು ಮೈಸೂರು ಪೊಲೀಸರು ಆಗಮಿಸಿ ತನಿಖೆ ನಡೆಸಿದ್ದಾರೆ ಎನ್ನಲಾಗಿದೆ.
ಹೆಬ್ರಿಯಿಂದ ಆಗುಂಬೆಗೆ ತೆರಳುವ ರಸ್ತೆಯಲ್ಲಿರುವ ಗೂಡಂಗಡಿಯೊಂದಕ್ಕೆ ಸ್ಯಾಂಟ್ರೋ ರವಿ ಭೇಟಿ ನೀಡಿದ್ದ. ಈ ವೇಳೆ ಅಂಗಡ ಮಾಲಕ ಹೆಬ್ರಿಯ ರಮೇಶ್ ಕುಲಾಲ್ ಅವರ ಬಳಿ ಮೊಬೈಲ್ ಪಡೆದು ಯಾರಿಗೋ ಕರೆ ಮಾಡಿದ್ದ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಮೂರು ದಿನಗಳ ಹಿಂದೆ ಮೈಸೂರಿನ ಪೊಲೀಸರು ರಮೇಶ್ ಕುಲಾಲ್ ವಿಚಾರಣೆ ನಡೆಸಿದ್ದಲ್ಲದೆ ಆತನ ಮೊಬೈಲ್ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಸ್ಯಾಂಟ್ರೋ ರವಿ ಯಾನೆ ಕೆ.ಯಸ್. ಮಂಜುನಾಥ್ ಮೇಲೆ ವೇಶ್ಯಾವಾಟಿಕೆ ಮತ್ತು ಮಾನವ ಕಳ್ಳಸಾಗಣೆ ದಂಧೆ, ಪೊಲೀಸ್ ಟ್ರಾನ್ಸ್ಫರ್ ಕೆಲಸಗಳಲ್ಲಿ ಹಸ್ತಕ್ಷೇಪದಂತಹ ೨೦ ಕ್ಕೂ ಮಿಕ್ಕಿದ ಪ್ರಕರಣಗಳು ದಾಖಲಾಗಿವೆ
ವಾಣಿಜ್ಯ ಜಾಹಿರಾತು