ವಾಣಿಜ್ಯ ಜಾಹಿರಾತು

ಮಂಗಳೂರು: ಪುಟ್ಟಗೌರಿ ಖ್ಯಾತಿಯ ನಟಿ ಸಾನ್ಯಾ ಐಯ್ಯರ್ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದ ಕಂಬಳ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಯುವಕನೋರ್ವ ಸಾನ್ಯಾ ಜೊತೆ ಕಿರಿಕ್ ಮಾಡಿಕೊಂಡಿದ್ದು ಈ ವೇಳೆ ಸಾನ್ಯಾ ಯುವಕನ ಕೆನ್ನೆಗೆ ಹೊಡೆದಿದ್ದಾರೆ. ಇದರಿಂದ ಕೋಪಗೊಂಡ ಯುವಕ ತಿರುಗಿಸಿ ಸಾನ್ಯಾ ಕೆನ್ನೆಗೆ ಭಾರಿಸಿದ್ದಾನೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಶನಿವಾರ ಘಟನೆ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕೋಟಿ- ಚನ್ನಯ್ಯ ಜೋಡುಕೆರೆ ಕಂಬಳಕ್ಕೆ ಸಾನ್ಯ ಅತಿಥಿಯಾಗಿ ಬಂದಿದ್ದ ಸಾನ್ಯಾ, ಅದೇ ದಿನ ಮದ್ಯರಾತ್ರಿ ಸ್ನೇಹಿತರೊಡನೆ ಕಂಬಳ ವೀಕ್ಷಣೆಗೆ ಆಗಮಿಸಿದ್ದರು.

ಸಾನ್ಯಾ ಕಂಬಳ ವೀಕ್ಷಿಸುತ್ತಿದ್ದ ವೇಳೆ ಯುವಕನೊಬ್ಬ ಸೆಲ್ಫಿ ತೆಗೆಯುವ ಸಂದರ್ಭದಲ್ಲಿ ಸಾನ್ಯ ಹಾಗೂ ಆಕೆಯ ಸ್ನೇಹಿತೆಯರ ಕೈ ಹಿಡಿದು ಎಳೆದಿರುವ ಆರೋಪ ಮಾಡಲಾಗಿದೆ. ಯುವಕ ಕೈ ಹಿಡಿದು ಎಳೆದಿದ್ದರಿಂದ ಆಕ್ರೋಶಗೊಂಡ ಸಾನ್ಯ ಅಲ್ಲಿಯೇ ಯುವಕನಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಯುವಕನು ಕೂಡ ಸಾನ್ಯ ಕೆನ್ನೆಗೆ ಬಾರಿಸಿದ್ದು, ಇದರಿಂದ ಕೆರಳಿದ ಸ್ಥಳೀಯ ಆಟೋ ಚಾಲಕರು ಯುವಕನಿಗೆ ಧರ್ಮದೇಟು ನೀಡಿದ್ದಾರೆ.

ಈ ಘಟನೆಯಿಂದ ಬೇಸರಗೊಂಡ ಸಾನ್ಯ ಮತ್ತು ಆಕೆಯ ಸ್ನೇಹಿತರು ಕಂಬಳ ಆಯೋಜಕರನ್ನು ತರಾಟೆ ತೆಗೆದುಕೊಂಡಿದ್ದಾರೆ. ಒಬ್ಬ ಹೆಣ್ಣಮಗಳ ಜೊತೆ ಈ ರೀತಿ ನಡೆದುಕೊಳ್ಳುತ್ತಾರಾ? ಆತ ಆಕೆಯ ಜುಟ್ಟು ಹಿಡಿದು ಎಳೆದಾಡಿದ್ದಾನೆ ಎಂದು ವೇದಿಕೆಯ ಮೇಲೆಯೇ ಸಾನ್ಯ, ಸ್ನೇಹಿತೆ ಆಯೋಜಕರನ್ನು ತರಾಟೆಗೆ ತೆಗೆದುಕೊಂಡರು. ಸಾನ್ಯ ಕೂಡ ಏರು ಧ್ವನಿಯಲ್ಲಿ ಘಟನೆಯನ್ನು ಖಂಡಿಸಿದ್ದು, ಕೆಲ ಕಾಲ ವೇದಿಕೆಯಲ್ಲಿ ಭಾರಿ ಗದ್ದಲದ ವಾತಾವರಣ ಉಂಟಾಗಿದೆ.  ಬಳಿಕ ಸ್ಥಳೀಯರು ಮಧ್ಯಪ್ರವೇಶಿಸಿ, ಸಾನ್ಯ ಮತ್ತು ಆಕೆಯ ಸ್ನೇಹಿತರನ್ನು ಸಮಾಧಾನಪಡಿಸಿದ್ದಾರೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.