ಭೂಮಿಯಲ್ಲಿ ಇದುವರೆಗೆ ಸಂಚರಿಸಿದ ಅತಿದೊಡ್ಡ ಡೈನೋಸಾರ್ ಪ್ರಭೇದ ಆಸ್ಟ್ರೇಲಿಯಾದಲ್ಲಿ ಪತ್ತೆಯಾಗಿದೆ. ಆಸ್ಟ್ರೇಲಿಯಾದ ಬ್ರಿಸ್ಬೇನ್‍ನಲ್ಲಿ 2007ರಲ್ಲಿ ಈ ಅಪರೂಪದ ಡೈನೋಸಾರ್ ಅಸ್ಥಿಪಂಜರ ದೊರಕಿತ್ತು. ಅಧ್ಯಯನಗಳ ಬಳಿಕ, ಇದು ಪ್ರಪಂಚದಲ್ಲಿ ದೊರಕಿರುವ ದೈತ್ಯ ಗಾತ್ರದ ಡೈನೋಸಾರ್ ನ ಹೊಸ ಪ್ರಭೇದವೆಂದು ಗುರುತಿಸಲಾಗಿದೆ. ಇದನ್ನು ಭೂಮಿಯಲ್ಲಿ ಇದುವರೆಗೆ ಸಂಚರಿಸಿದ ಅತಿದೊಡ್ಡ ಡೈನೋಸಾರ್ ಎಂದು ಹೇಳಲಾಗುತ್ತಿದೆ.
ಸುಮಾರು 100 ದಶಲಕ್ಷ ವರ್ಷಗಳ ಹಿಂದೆ ವಾಸಿಸುತ್ತಿದ್ದ ಟೈಟಾನೊಸಾರ್ ಕುಟುಂಬದ ಭಾಗವಾದ ಆಸ್ಟ್ರೇಲಿಯಾ ಕೋಪೆರೆನ್ಸಿಸ್ ಇದಾಗಿದೆ. ಮತ್ತು ಇದರ ಅಸ್ಥಿಪಂಜರ 15 ವರ್ಷಗಳ ಮೊದಲೇ ಪತ್ತೆಯಾಗಿತ್ತು.
ಆಸ್ಟ್ರೇಲಿಟಿಯನ್ ಕೋಪೆರೆನ್ಸಿಸ್ ಎಂದು ಇದನ್ನು ಹೆಸರಿಸಲಾಗಿದೆ. ಅಧ್ಯಯನಗಳ ಪ್ರಕಾರ, ಈ ಆಸ್ಟ್ರೇಲಿಟಿಯನ್ ಕೋಪೆರೆನ್ಸಿಸ್ ಜಗತ್ತಿನ ಅತಿದೊಡ್ಡ 15 ಡೈನೋಸಾರ್ ಗಳ ಪೈಕಿ ಒಂದಾಗಿದೆ. ಒಂದು ಸಂಪೂರ್ಣ ಬಾಸ್ಕೆಟ್ ಬಾಲ್ ಕೋರ್ಟ್ ನಷ್ಟು ಈ ಡೈನೋಸಾರ್ ಉದ್ದವಿತ್ತು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಉದ್ದನೆಯ ಕತ್ತನ್ನು ಹೊಂದಿದ್ದ ಈ ಡೈನೋಸಾರ್ ಸುಮಾರು 21 ಅಡಿ ಎತ್ತರ, 100 ಅಡಿ ಉದ್ದವನ್ನು ಹೊಂದಿದ್ದು, ಸುಮಾರು 70 ಟನ್ ತೂಕವಿತ್ತು ಎಂದು ಅಂದಾಜಿಸಲಾಗಿದೆ. ಇದು ಆಸ್ಟ್ರೇಲಿಯಾದಲ್ಲಿ ಈವರೆಗೆ ಕಂಡು ಬಂದ ಡೈನೋಸಾರ್ ಪ್ರಬೇಧಗಳಲ್ಲಿ ಅತಿದೊಡ್ಡ ಡೈನೋಸಾರ್ ಆಗಿದೆ.
‘ದಿ ಸದರ್ನ್ ಟೈಟಾನ್’ ಮತ್ತು ‘ಕ್ವೀನ್ಸ್‌ಲ್ಯಾಂಡ್ ಮ್ಯೂಸಿಯಂ’ ಮತ್ತು ‘ಇರೋಮಂಗಾ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ’ನ ಅಧಿಕಾರಿಗಳು ಸುಮಾರು 100 ದಶಲಕ್ಷ ವರ್ಷಗಳ ಹಿಂದೆ ಇಂಥಹಾ ದೈತ್ಯ ಗಾತ್ರದ ಡೈನೋಸಾರ್ ಇತ್ತು ಅನ್ನೋದನ್ನು ದೃಢಪಡಿಸಿದ್ದಾರೆ. ಮತ್ತು ಇದು ಪ್ರಪಂಚದ ಅತಿ ದೊಡ್ಡ ಡೈನೋಸಾರ್ ಪ್ರಬೇಧಗಳ ಪೈಕಿ ಒಂದಾಗಿತ್ತು ಅನ್ನೋದನ್ನು ಇಲ್ಲಿನ ತಜ್ಞರು ಹೇಳಿದ್ದಾರೆ.