ವಾಣಿಜ್ಯ ಜಾಹಿರಾತು

ಸೆಪ್ಟೆಂಬರ್ 6ರಂದು ಯಾವ ದಿನವನ್ನು ಆಚರಿಸಲಾಗುತ್ತದೆ. ಇದರ ಹಿನ್ನೆಲೆ ಏನು? ಈ ದಿನದ ವಿಶೇಷತೆಗಳ ಬಗ್ಗೆ ತಿಳಿದುಕೊಳ್ಳೋಣ.

1990, ಸೆಪ್ಟೆಂಬರ್ 6ರಂದು ಸಂಸತ್ತು ಪ್ರಸಾರ ಭಾರತಿ ಮಸೂದೆಯನ್ನು ಅಂಗೀಕರಿಸಿತು. ಸೆಪ್ಟೆಂಬರ್ 12ರಂದು ಪ್ರಸಾರ ಭಾರತಿ ಕಾಯಿದೆಗೆ ಭಾರತದ ರಾಷ್ಟ್ರಪತಿಯ ಒಪ್ಪಿಗೆ ಸಿಕ್ಕಿತು.

1889, ಸೆಪ್ಟೆಂಬರ್ 6ರಂದು ಸ್ವಾತಂತ್ರ್ಯ ಹೋರಾಟಗಾರ, ಶರತ್ ಚಂದ್ರ ಬೋಸ್ ಜನಿಸಿದರು.

1774, ಸೆಪ್ಟೆಂಬರ್ 6ರಂದು ಬ್ರಿಟಿಷ್ ಸರ್ಕಾರ ಪುಣೆಯನ್ನು ಪುನಃ ವಶಪಡಿಸಿಕೊಳ್ಳಲು ಪೇಶ್ವ ರಘುನಾಥ ರಾವ್ ಅವರನ್ನು ಬೆಂಬಲಿಸಿತು.

1947, ಸೆಪ್ಟೆಂಬರ್ 6ರಂದು ಭಾರತ ಸರ್ಕಾರವು ನಿರಾಶ್ರಿತರ ಪರಿಹಾರ ಮತ್ತು ಪುನರ್ವಸತಿ ಸಚಿವಾಲಯವನ್ನು ರಚಿಸಿತು.

1879, ಸೆಪ್ಟೆಂಬರ್ 6ರಂದು ಲಂಡನ್‌ನ ಲೊಂಬಾರ್ಡ್ ಸ್ಟ್ರೀಟ್‌ನಲ್ಲಿ ಮೊದಲ ಬ್ರಿಟಿಷ್ ಟೆಲಿಫೋನ್ ಎಕ್ಸ್‌ಚೇಂಜ್ ಪ್ರಾರಂಭವಾಯಿತು.

1965, ಸೆಪ್ಟೆಂಬರ್ 6ರಂದು ಭಾರತ ಪಾಕಿಸ್ತಾನ ಯುದ್ಧ ಆರಂಭವಾಯಿತು.

2018, ಸೆಪ್ಟೆಂಬರ್ 6ರಂದು ಭಾರತದ ಸುಪ್ರೀಂ ಕೋರ್ಟ್ ಸಲಿಂಗಕಾಮವನ್ನು ಕಾನೂನುಬದ್ಧಗೊಳಿಸಿತು

1963, ಸೆಪ್ಟೆಂಬರ್ 6ರಂದು ಕನ್ನಡದ ಪ್ರಥಮ ರಾಷ್ಟ್ರಕವಿ ಮಂಜೇಶ್ವರ ಎಂ.ಗೋವಿಂದ ಪೈ ನಿಧನರಾದರು.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.