ಬೆಂಗಳೂರು : ರಾಜ್ಯೇತರ ಸಿವಿಲ್ ಸರ್ವೀಸ್ ಹುದ್ದೆಯ ಅಧಿಕಾರಿಗಳನ್ನು ಭಾರತೀಯ ನಾಗರಿಕ ಸೇವಾ ವೃಂದಕ್ಕೆ ಭಾರತೀಯ ನಾಗರೀಕ ಸೇವಾ ನಿಯಮಾವಳಿ 1997ರ ಅನ್ವಯ ಆಯ್ಕೆ ಪ್ರಕ್ರಿಯೆಯನ್ನು ಕೈಗೊಳ್ಳಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸಂಜಯ್ ಬಿ.ಎಸ್ ಮಾನದಂಡಗಳನ್ನು ನಿಗದಿಪಡಿಸಿರುವ ಬಗ್ಗೆ ಆದೇಶ ಹೊರಡಿಸಿದ್ದಾರೆ.
ನಿಯಮಾವಳಿ 1997ರ ಸಂಬಂಧ ಕಾಲಕಾಲಕ್ಕೆ ಹೊರಡಿಸುವ ನಿರ್ದೇಶನದಂತೆ ಅರ್ಹರಿರುವ ಅಭ್ಯರ್ಥಿಗಳು ಕರ್ನಾಟಕ ಲೋಕ ಸೇವಾ ಆಯೋಗವು ಅಧಿಸೂಚಿಸುವ ಲಿಖಿತ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಪರೀಕ್ಷೆಯಲ್ಲಿ ಅಧಿಕಾರಿಗಳು ಪಡೆದ ಅಂಕಗಳೊಂದಿಗೆ ಶ್ರೇಣಿ ಪಟ್ಟಿಯನ್ನು ಕರ್ನಾಟಕ ಲೋಕಸೇವಾ ಆಯೋಗವು ರಾಜ್ಯ ಸರ್ಕಾರಕ್ಕೆ ಸಲ್ಲಿಸಬೇಕು. ಪಟ್ಟಿ ಸ್ವೀಕೃತಗೊಂಡ ಬಳಿಕ ಸಕಾಧರವು ಅಧಿಕಾರಿಗಳು ಅರ್ಹರೇ ಎಂಬುದನ್ನು ಪರಿಶೀಲಿಸಲು ಸಿಆರ್ ದಸ್ತಾವೇಜಿನ ಜತೆಗೆ ನಿಗದಿತ ಪ್ರೊ-ಫಾರ್ಮ್ನಲ್ಲಿ ಆಯಾ ಇಲಾಖೆಗಳಿಂದ ಅಭ್ಯರ್ಥಿಗಳ ಎಸಿಆರ್ ಗಳ ಸಾರಾಂಶವನ್ನು ಪಡೆಯಲಾಗುತ್ತದೆ.
1997ರ ನಿಬಂಧನೆಗಳ ಪ್ರಕಾರ ಕೇಂದ್ರ ಸರ್ಕಾರ ಮತ್ತು ಕೇಂದ್ರ ಲೋಕಸೇವಾ ಆಯೋಗಕ್ಕೆ ಅರ್ಹತೆಯ ಕ್ರಮದಲ್ಲಿ ಹೆಸರುಗಳನ್ನು ಶಿಫಾರಸು ಮಾಡಲಾಗುತ್ತದೆ ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.