ವಾಣಿಜ್ಯ ಜಾಹಿರಾತು

ಮಂಗಳೂರು : ಯುಎನ್ ಸಿನೆಮಾಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬಂದಿರುವ ”ಶಕಲಕ‌ ಬೂಮ್ ಬೂಮ್” ತುಳು ಚಿತ್ರ ಜ. 20 ರಂದು ತುಳುನಾಡಿನಾದ್ಯಂತ ತೆರೆ ಕಾಣಲಿದೆ.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಿತ್ರದ ನಿರ್ಮಾಪಕರಲ್ಲೊಬ್ಬರಾದ ನಿತ್ಯಾನಂದ ನಾಯಕ್ ನರಸಿಂಗೆ, ಈ ಚಿತ್ರವನ್ನು‌ಶ್ರೀಶ ಎಳ್ಳಾರೆ ನಿರ್ದೇಶಿಸಿದ್ದು, ನಿತ್ಯಾನಂದ ನಾಯಕ್ ನರಸಿಂಗೆ, ಉಮೇಶ್ ಪ್ರಭು ಮಾಣಿಬೆಟ್ಟು ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಡಾಲ್ವಿನ್ ಕೊಳಲಗಿರಿ ಸಂಗೀತ ಇದ್ದು, ತುಳುನಾಡಿನ ಖ್ಯಾತ ಛಾಯಾಗ್ರಾಹಕರಾದ ಪ್ರಜ್ವಲ್ ಸುವರ್ಣ ಹಾಗೂ ಅರುಣ್ ರೈ ಪುತ್ತೂರು ಕ್ಯಾಮರಾ ಕೈಚಳಕವಿದೆ ಎಂದರು.

ಚಿತ್ರದ ತಾರಾಂಗಣದ ಪ್ರಮುಖ ಭೂಮಿಕೆಯಲ್ಲಿ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್, ಉಮೇಶ್ ಮಿಜಾರ್, ಪ್ರವೀಣ್ ಮಾರ್ಕಮೆ, ಮಿಮಿಕ್ರಿ ಶರಣ, ಕಥಾನಾಯಕನಾಗಿ ಗಾಡ್ವಿನ್ ಸ್ಪಾರ್ಕಲ್ ಹಾಗೂ ಕಥಾನಾಯಕಿಯಾಗಿ ಲಕ್ಷಾ ಶೆಟ್ಟಿ, ರೂಪಶ್ರೀ ವರ್ಕಾಡಿ, ಮನೋಹರ್ ಶೆಟ್ಟಿ ನಂದಳಿಕೆ, ವಸಂತ್ ಮುನಿಯಾಲ್, ಹರೀಶ್ ಗಾಳಿಪಟ , ಸುನಿಲ್ ಕಡ್ತಲ, ಯತೀಶ್ ಪೂಜಾರಿ, ಯಶವಂತ್, ಪ್ರವೀಣ್ ಆಚಾರ್ಯ,ಕಾಮಿಡಿ ಕಿಲಾಡಿ ಖ್ಯಾತಿಯ ರಾಧೇಶ್, ಕಾಮಿಡಿ ಗ್ಯಾಂಗ್ ಖ್ಯಾತಿಯ ರಾಜೇಶ್ ದಾನಶಾಲೆ, ಲಂಚುಲಾಲ್, ರಾಜೇಶ್ವರಿ ಕುಲಾಲ್, ಧೀರಾಜ್, ಶಿವಾನಂದ, ಯಜ್ಞೆಶ್ ಶೆಟ್ಟಿ ಅಭಿನಯಿಸಿದ್ದಾರೆ ಎಂದು ತಿಳಿಸಿದರು.

ಚಿತ್ರದುದ್ದಕ್ಕೂ ನಗುವಿನ ಟಾನಿಕ್ ಇದ್ದು, ಹೊಟ್ಟೆ ಹುಣ್ಣಾಗಿಸಲು ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್, ಉಮೇಶ್ ಮಿಜಾರ್, ಪ್ರವೀಣ್ ಮಾರ್ಕಮೆ, ಮಿಮಿಕ್ರಿ ಶರಣ್ ಜೊತೆಯಾಗುವ ಸನ್ನಿವೇಶಗಳು ನೈಜ್ಯವಾದ ಹಾಸ್ಯದ ಹೊನಲಾಗಿಸಲಿವೆ. ಶುದ್ಧವಾದ ಭಾಷೆ ಬಳಕೆ, ಉತ್ತಮವಾದ ಸಂಭಾಷಣೆ ಮನಮುಟ್ಟುವಂತಹ ನಟನೆಯನ್ನು ಹೊಂದಿರುವ ಚಿತ್ರ ಇದಾಗಿದೆ. ತುಳು ಸಿನೆಮಾದಲ್ಲಿ ವೈವಿಧ್ಯತೆ ಇರಬೇಕು ಎಂಬ ನೆಲೆಯಲ್ಲಿ ಕಾಮಿಡಿ, ಹಾರರ್, ಥ್ರಿಲ್ಲರ್, ಸಸ್ಪೆನ್ಸ್ ಹೊಂದಿರುವ ಹೊಸತನದ ಚಿತ್ರ ಶಕಲಕ ಬೂಮ್ ಬೂಮ್ ಆಗಿದೆ ಎಂದು ನಿತ್ಯಾನಂದ ನಾಯಕ್ ತಿಳಿಸಿದರು.

ಕಥೆಯ ಸಾರ
ಶಕಲಕ ಬೂಮ್ ಬೂಮ್ ಚಿತ್ರವನ್ನು ಸುಮಾರು 150 ವರ್ಷದ ಹಳೆಯ ಮನೆಯಲ್ಲಿ ಚಿತ್ರೀಕರಣ ನಡೆಸಲಾಗಿದೆ. ಜನರನ್ನು ಮೋಸ ಮಾಡುತ್ತ ಬದುಕುವವರು, ಸಂಪತ್ತಿನ ಆಸೆಯಿಂದ ಬಂದು, ಒಂದು ಪಾಳು ಬಿದ್ದ ಮನೆಯಲ್ಲಿ ಬಂಧಿಯಾಗುತ್ತಾರೆ..ಆ ಮನೆಯ ರಹಸ್ಯ ಏನು? ಈ ಹಿಂದೆ ಆ ಮನೆಯಲ್ಲಿ ಏನಾಗಿತ್ತು? ನ್ಯಾಯ ಗೆಲ್ಲುತ್ತದಾ? ಸತ್ಯಕ್ಕೆ ಜಯವಿದೆಯಾ? ಎನ್ನುವ ವಿಶಿಷ್ಟವಾದ ಕಥಾಹಂದರ ಹೊಂದಿರುವ ವಿಭಿನ್ನವಾದ ಚಿತ್ರ ಶಕಲಕ ಬೂಮ್ ಬೂಮ್  ಆಗಿದೆ, ಅಂಗ ದಾನ ಮಾಡಲು www.jeevasarthakathe.karnataka.gov.in ಲಾಗಿನ್ ಆಗಿ ಇತರರ ಬಾಳಿಗೆ ಬೆಳಕಾಗಿ ಎನ್ನುವ ಸಂದೇಶವನ್ನು ನಮ್ಮ ಚಿತ್ರತಂಡದಿಂದ ಸಾರ್ವಜನಿಕರಿಗೆ ತಿಳಿಯಪಡಿಸುತ್ತಿದ್ದೇವೆ ಎಂದು ನಿತ್ಯಾನಂದ ನಾಯಕ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ‌ ಚಿತ್ರದ ಪ್ರಮುಖರಾದ ಗಾಡ್ವಿನ್ ಸ್ಪಾರ್ಕಲ್, ಸುನಿಲ್ ಕಡ್ತಲ, ಲಂಚುಲಾಲ್, ಡಾಲ್ವಿನ್ ಕೊಳಲಗಿರಿ, ವಿಘ್ನೇಶ್ ಹಾಜರಿದ್ದರು.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.