ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದಲ್ಲಿ ರ್ಯಾಲಿಯ ವೇಳೆ ದುಷ್ಕರ್ಮಿಯೋರ್ವ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಇಮ್ರಾನ್ ಕಾಲಿಗೆ ಗಾಯವಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ.
ಕಳೆದ ಎರಡು ಮೂರು ದಿನಗಳಿಂದ ಇಮ್ರಾನ್ ನೇತೃತ್ವದಲ್ಲಿ ರ್ಯಾಲಿ ನಡೆಯುತ್ತಿದೆ. ಅಂತೆ ನಿನ್ನೆ ಕೂಡ ರ್ಯಾಲಿಯಲ್ಲಿ ಸಾಕಷ್ಟು ಮಂದಿ ಭಾಗಿಯಾಗಿದ್ದು ಈ ವೇಳೆ ದುಷ್ಕರ್ಮಿಯೋರ್ವ ಇಮ್ರಾನ್ ಖಾನ್ ಮೇಲೆ ಸುಮಾರು 3ರಿಂದ 4 ಭಾರಿ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ಇಮ್ರಾನ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದರೆ ಇಮ್ರಾನ್ ಖಾನ್ ಅವರ ಸಹಾಯಕ ಸೇರಿದಂತೆ ಒಟ್ಟು 15 ಮಂದಿ ಗಾಯಗೊಂಡಿದ್ದು ಓರ್ವ ಮೃತಪಟ್ಟಿದ್ದಾನೆ ಎನ್ನಲಾಗುತ್ತಿದೆ. ಗುಂಡಿನ ದಾಳಿ ನಡೆದ ಬಳಿಕ ಇಮ್ರಾನ್ ಖಾನ್ ಅವರನ್ನು ಬುಲೆಟ್ ಫ್ರೂವ್ ವಾಹನದಲ್ಲಿ ಬೇರೆಡೆಗೆ ಸ್ಥಳಾಂತರಿಸಲಾಯಿತು. ಇನ್ನೂ ಆರೋಪಿಯನ್ನು ಬಂಧಿಸಿರೋ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ವಿಚಾರಣೆ ವೇಳೆ ಆರೋಪಿಯು ನಾನು ಇಮ್ರಾನ್ ಖಾನ್‍ರನ್ನು ಕೊಲ್ಲಲೆಂದು ಬಂದಿದ್ದೆ. ಇಮ್ರಾನ್ ಖಾನ್ ಪಾಕಿಸ್ತಾನದ ಜನರರನ್ನು ದಾರಿ ತಪ್ಪಿಸುತ್ತಿದ್ದಾರೆ. ಹಾಗಾಗಿ ಇಮ್ರಾನ್ ಖಾನ್‍ರನ್ನು ಗುಂಡು ಹಾರಿಸಿ ಕೊಲ್ಲಲು ಯತ್ನಿಸಿದ್ದೇನೆ. ನಾನು ಒಬ್ಬನೇ ಬಂದಿದ್ದೇನೆ. ನನ್ನ ಹಿಂದೆ ಯಾರು ಇಲ್ಲ ಎಂದಿದ್ದಾನೆ.
ಇಮ್ರಾನ್ ಖಾನ್ ತೆರೆದ ಕಂಟೇನರ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಗುಂಡಿನ ದಾಳಿ ಮಾಡಲಾಗಿದೆ. ಘಟನೆಯಲ್ಲಿ ಒಟ್ಟು 15 ಮಂದಿ ಗಾಯಗೊಂಡಿದ್ದು ಓರ್ವ ಮೃತಪಟ್ಟಿರುವುದಾಗಿ ವರದಿಯಾಗಿದೆ. ಇಮ್ರಾನ್ ಖಾನ್‍ನ ಬೆಂಬಲಿಗರೊಬ್ಬರು ಆತನನ್ನು ದಾಳಿ ನಡೆಸದಂತೆ ತಡೆದಿದ್ದಾರೆ. ಆತ ಎಕೆ-47 ನಿಂದ ಗುಂಡು ಹಾರಿಸಿದ್ದು, ಇದು ಉದ್ದೇಶ ಪೂರಕ ದಾಳಿ ಎಂದು ಪಿಟಿಐ ಮುಖಂಡ ಫವಾದ್ ಚೌಧರಿ ಹೇಳಿದ್ದಾರೆ.