ವಾಣಿಜ್ಯ ಜಾಹಿರಾತು

ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರಿದ್ದು, ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಒಲಿದಿದೆ. ಪುರುಷರ ಹೆವಿವೇಯ್ಟ್ ವಿಭಾಗದ ಫೈನಲ್‌ನಲ್ಲಿ ಪ್ಯಾರಾ-ಪವರ್‌ಲಿಫ್ಟರ್ ಸುಧೀರ್ ಚಿನ್ನ ಗೆದ್ದಿದ್ದಾರೆ. ಈ ಮೂಲಕ ಕ್ರೀಡಾಕೂಟದಲ್ಲಿ ಭಾರತ 6 ಚಿನ್ನದ ಪದಕ ತನ್ನದಾಗಿಸಿಕೊಂಡಿದೆ.

ಹರ್ಯಾಣದ ಸೋನಿಪತ್‌ನಲ್ಲಿ ರೈತ ಕುಟುಂಬದಲ್ಲಿ ಜನಿಸಿದ ಅವರು ನಾಲ್ಕನೇ ವಯಸ್ಸಿನಲ್ಲಿ ಪೋಲಿಯೊಗೆ ತುತ್ತಾದರು. ಅವರಿಗೆ ಕ್ರೀಡೆಯಲ್ಲಿ ಚಿಕ್ಕಂದಿನಿಂದಲೇ ಆಸಕ್ತಿ ಇತ್ತು. ಸುಧೀರ್ 2013 ರಲ್ಲಿ ತಮ್ಮ ಕ್ರೀಡಾ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು 2016 ರಲ್ಲಿ ಅವರ ಮೊದಲ ರಾಷ್ಟ್ರೀಯತೆಯಲ್ಲಿ ಚಿನ್ನ ಗೆದ್ದರು. ಸುಧೀರ್ 2018 ರಲ್ಲಿ ಏಷ್ಯನ್ ಪ್ಯಾರಾ ಗೇಮ್ಸ್ 2018 ನಲ್ಲಿ ಅಂತರರಾಷ್ಟ್ರೀಯ ಚೊಚ್ಚಲ ಪ್ರವೇಶ ಮಾಡಿ ಕಂಚಿನ ಪದಕವನ್ನು ಪಡೆದಿದ್ದರು.

ಲಾಂಗ್ ಜಂಪ್ ನಲ್ಲಿ ಬೆಳ್ಳಿ ಗೆದ್ದು ಇತಿಹಾಸ

ಭಾರತದ ಕ್ರೀಡಾಳು ಮುರಳಿ ಶ್ರೀಶಂಕರ್ ಅವರು ಪುರುಷರ ಲಾಂಗ್ ಜಂಪ್‌ನಲ್ಲಿ 8.08 ಮೀ ಜಿಗಿತದೊಂದಿಗೆ ಬೆಳ್ಳಿ ಪದಕವನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.
ಈ ಹಿಂದೆ 1978ರ ಆವೃತ್ತಿಯಲ್ಲಿ ಸುರೇಶ್ ಬಾಬು ಕಂಚು ಗೆದ್ದಿದ್ದರು.
ಕಾಮನ್ ವೆಲ್ತ್ ಕ್ರೀಡಾಕೂಟದ ಲಾಮ್ಗ್ ಜಂಪ್ ವಿಭಾಗದಲ್ಲಿ ಬಹಾಮಾಸ್‌ನ ಲಕ್ವಾನ್ ನೈರ್ನ್ ಚಿನ್ನ ಗೆದ್ದರೆ, ದಕ್ಷಿಣ ಆಫ್ರಿಕಾದ ಜೊವಾನ್ ವ್ಯಾನ್ ವುರೆನ್ ಕಂಚಿನ ಪದಕವನ್ನು ಪಡೆದರು.

ಮುರಳಿ ಅವರಿಗೆ ಚಿನ್ನ ಗೆಲ್ಲುವ ಅವಕಾಶ ಇತ್ತು. ಯಾಕೆಂದರೆ ಚಿನ್ನ ಗೆದ್ದ
ನಾಯರ್ನ್ ಹಾಗೂ ಮುರಳಿ ಅವರ ಜಿಗಿತ ಅಂತರ ಟ್ಟೈ ಆಗಿತ್ತು. ಅಂದರೆ ಇಬ್ಬರೂ 8.08 ಮೀಟರ್‌ ಜಿಗಿದಿದ್ದರು. ಆದರೆ ನಿಯಮಗಳ ಪ್ರಕಾರ, ಇಬ್ಬರು ಜಿಗಿತಗಾರರ ಅಂತರ ಟೈ ಆದಲ್ಲಿ, ಎರಡನೇ ಅತ್ಯುತ್ತಮ ಪ್ರಯತ್ನದ ಆಧಾರದಲ್ಲಿ ಮೊದಲ ವಿಜೇತರನ್ನು ಆಯ್ಕೆ ಮಾಡಲಾಗುತ್ತೆ. ಹಾಗಾಗಿ ನೈರ್ನ್ಸ್ ಚಿನ್ನದ ಪದಕ ಪಡೇದರು. ಅವರ ಎರಡನೇ ಅತ್ಯುತ್ತಮ ಜಿಗಿತ 7.98 ಮೀಟರ್‌ ಆಘಿದ್ದರೆ, ಶ್ರೀಶಂಕರ್ ಅವರದ್ದು 7.84 ಮೀ ಆಗಿತ್ತು. ಹೀಗಾಗಿ ಮುರಳೀ ಬೆಳ್ಳಿಗೆ ತೃಪ್ತಿಪಟ್ಟುಕೊಳ್ಳುವಂತಾಯಿತು.

ಸ್ಪರ್ಧೆಯಲ್ಲಿದ್ದ ಭಾರತದ ಮತ್ತೊಬ್ಬ ಆಟಗಾರ ಮುಹಮ್ಮದ್ ಅನೀಸ್ ಯಾಹಿಯಾ 7.97ಮೀ ಜಿಗಿತದೊಂದಿಗೆ ಐದನೇ ಸ್ಥಾನ ಪಡೆದರು.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.