ವಾಣಿಜ್ಯ ಜಾಹಿರಾತು

ಸಾಮಾನ್ಯವಾಗಿ ಕೆಮ್ಮು ಶುರುವಾದರೆ ಬೇಗನೇ‌ ಗುಣವಾಗುವ ಸಮಸ್ಯೆಯಲ್ಲ. ಇದರಿಂದ‌ ಎದೆನೋವು ಉಂಟಾಗಬಹುದು. ಕೆಲವೊಂದು ಬಾರಿ ಒಣ ಕೆಮ್ಮಿನಂತಹ ಲಕ್ಷಣಗಳು ಕಾಡಬಹುದು. ಇವುಗಳ ಪರಿಹಾರಕ್ಕೆ ಮನೆಯಲ್ಲೇ ಸುಲಭವಾಗಿ ಮನೆಮದ್ದುಗಳನ್ನು ತಯಾರಿಸಿಕೊಳ್ಳಬಹುದು.

ಜೇನುತುಪ್ಪ

ಜೇನುತುಪ್ಪ ಸೇವನೆಯು ಒಣ ಕೆಮ್ಮಿನ ಸಮಸ್ಯೆಗೆ ಮನೆಮದ್ದು. ಇದರಲ್ಲಿ ಔಷಧೀಯ ಗುಣಗಳಿದ್ದು ರೋಗನಿರೋಧಕ ಶಕ್ತಿಯನ್ನು ಹೊಂದಿದೆ. ಗಂಟಲಿನ ನೋವನ್ನು ನಿವಾರಿಸುವಲ್ಲಿ ಜೇನು ಸಹಕಾರಿಯಾಗಿದೆ. ದಿನಕ್ಕೆರಡು ಬಾರಿಯಂತೆ ಎರಡು ಚಮಚ ಜೇನುತುಪ್ಪವನ್ನು ಹರ್ಬಲ್ ಟೀ ಅಥವಾ ಲಿಂಬೆರಸದಲ್ಲಿ ಬೆರೆಸಿ ತಿಂದರೆ‌ ಕೆಮ್ಮು ಗುಣವಾಗಬಹುದು.

ಉಪ್ಪುನೀರು

ಉಗುರು ಬೆಚ್ಚಗಿನ ನೀರಿನಲ್ಲಿ ಉಪ್ಪು ಹಾಕಿ ಮುಕ್ಕಳಿಸಿದರೆ ಈ ಸಮಸ್ಯೆಯಿಂದ‌ ಪಾರಾಗಬಹುದು. ದಿನಕ್ಕೆರಡು ಬಾರಿ ಗಾರ್ಗ್ಲಿಂಗ್ ಮಾಡುವುದರಿಂದ ಶ್ವಾಸಕೋಶದಲ್ಲಿ ಸಂಗ್ರಹವಾಗಿರುವ ಲೋಳೆಯೂ ಕಡಿಮೆಯಾಗುತ್ತದೆ.

ಕರಿಮೆಣಸು/ಶುಂಠಿ

ಶುಂಠಿ ಮತ್ತು ಕರಿಮೆಣಸು ಹಾಕಿದ ಚಹಾ‌‌ ಕುಡಿಯುವುದರಿಂದ ಕೆಮ್ಮಿನ ಸಮಸ್ಯೆ ಶಮನಮಾಡುತ್ತದೆ. ಶುಂಠಿಯಲ್ಲಿ ಔಷಧೀಯ ಗುಣಗಳು ಹೆಚ್ಚಾಗಿರುವುದರಿಂದ ಆರೋಗ್ಯಕ್ಕೆ‌ ಉತ್ತಮ.
ಕರಿಮೆಣಸಿನ ಪುಡಿಯನ್ನು ಜೇನುತುಪ್ಪದೊಂದಿಗೆ‌ ಸೇರಿಸಿ ದಿನಕ್ಕೆ‌ ಮೂರು ಬಾರಿಯಾದರೂ ಸೇವಿಸಬೇಕು. ಇದರಿಂದ‌ ಕೆಮ್ಮಿನ ಸಮಸ್ಯೆಯಿಂದ‌ ದೂರವಿರಬಹುದು.

ನೀಲಗಿರಿ ಎಣ್ಣೆ

ನೀಲಗಿರಿ ಎಣ್ಣೆಯನ್ನು ತೆಂಗಿನ ಎಣ್ಣೆಯಲ್ಲಿ ಬೆರೆಸಿ ಬಳಿಕ ಮಸಾಜ್‌ ಮಾಡಿ. ಜತೆಗೆ ಬಿಸಿನೀರಿನಲ್ಲಿ ನೀಲಗಿರಿ ಎಣ್ಣೆಯ ಹನಿ ಸೇರಿ ಹಬೆ‌ ತೆಗೆದುಕೊಳ್ಳುವುದರಿಂದ ಎದೆಯನ್ನು ಹಗುರಗೊಳಿಸುತ್ತದೆ. ಮತ್ತು ಕೆಮ್ಮಿನ ಸಮಸ್ಯೆಯನ್ನು ದೂರಗೊಳಿಸುತ್ತದೆ.

ಪುದೀನಾ ಚಹಾ

ಪುದೀನಾ ಎಲೆಯನ್ನು ಚಹಾಕ್ಕೆ‌ ಹಾಕಿ ಎರಡರಿಂದ‌ ಮೂರು ಬಾರಿ ಕುಡಿಯುವುದರಿಂದ ಗಂಟಲಿನ ಕಿರಿಕಿರಿ ಮತ್ತು ನೋವನ್ನು ನಿವಾರಿಸಲು ಸಹಕಾರಿಯಾಗಿದೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.