ಸುಳ್ಯ: ಗೊಣಿಚೀಲದಲ್ಲಿ ಕಟ್ಟಿ ಹಾಕಿರುವ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿರುವ ಘನಟೆ ಸುಳ್ಯ ಬೀರಮಂಗಿಲದಲ್ಲಿ ನಡೆದಿದೆ.
ಬಂಗಾಳಿ ಮೂಲದ ಇಮ್ರಾನ್ ಎಂಬುವವರ ಪತ್ನಿ ಮೃತ ಮಹಿಳೆ. ಸುಳ್ಯದ ಪ್ರತಿಷ್ಟಿತ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಇಮ್ರಾನ್ ಕಳೆದ 7 ತಿಂಗಳಿನಿಂದ ಬಾಡಿಗೆ ಮನೆ ಪಡೆದು ಪತ್ನಿಯೊಂದಿಗೆ ವಾಸವಾಗಿದ್ದ.
ಒಂದು ವಾರಗಳ ಕಾಲ ಹೋಟೆಲ್ ಕೆಲಸಕ್ಕೆ ರಜೆ ಹಾಕಿ ಬಂದಿದ್ದ ಇಮ್ರಾನ್ ಬಂದವನೆ ಪತ್ನಿಯೊಂದಿಗೆ ಜೋರು ಧ್ವನಿಯಲ್ಲಿ ಜಗಳವಾಡಲು ಶುರುಮಾಡಿದ್ದಾನೆ. ಸ್ವಲ್ಪ ಹೊತ್ತಿನ ಬಳಿಕ ಅಕ್ಕ ಪಕ್ಕದ ಮನೆಯವರಿಗೆ ಮಹಿಳೆ ಕಿರುಚಿದ ಶಬ್ದ ಕೇಳಿ ಬಂದಿದೆ.
ಅದಾಗಿ ಒಂದು ದಿವನ ಬಳಿಕ ಇಮ್ರಾಣ್ ಮನೆ ಖಾಲಿ ಮಾಡಿದ್ದಾನೆ. ಪಕ್ಕದ ಮನೆಯವರಿಗೆ ಹೋಟೇಲ್ ಕೆಲಸ ಬಿಟ್ಟಿದ್ದು ಊರಿಗೆ ಹೋಗುವುದಾಗಿ ಹೇಳಿದ್ದ ಇಮ್ರಾನ್ ತೆರಳುವಾಗ ಒಬ್ಬನೇ ಹೋಗಿದ್ದ ಇದರಿಂದ ಅನುಮಾನಗೊಂಡ ನೆರೆಮನೆಯವರು ಹೋಟೆಲ್ ಮಾಲಿಕರಿಗೆ ವಿಷಯ ತಿಳಿಸಿದ್ದಾರೆ.
ಇಮ್ರಾನ್ ನೆರೆಮನೆಯವರಿಗೆ ನೀಡಿದ ಹೇಳಿಕೆಯಿಂದ ಸಂಶಯಗೊಂಡ ಹೋಟೆಲ್ ಮಾಲಿಕರು ಪೋಲೀಸರಿಗೆ ವಿಷಯ ತಿಳಿಸಿದ್ದಾರೆ. ಪೋಲಿಸರು ಬಂದು ಮನೆಯ ಬೀಗ ಒಡೆದು ನೋಡಿದಾಗ ಮಹಿಳೆಯ ಶವ ಗೋಣಿಚೀಲದಲ್ಲಿ ಕಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಪೊಲೀಸರು ಇಮ್ರಾನ್ ಗೆ ಕರೆ ಮಾಡಿದ್ದು ಇಮ್ರಾನ್ ಯಾವುದೇ ಕರೆ ಸ್ವೀಕರಿಸಿಲ್ಲ. ಹೀಗಾಗಿ ಇಮ್ರಾನ್ ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿರಬಹುದು ಎನ್ನಲಾಗುತ್ತಿದೆ. ಸ್ಥಳಕ್ಕೆ ಡಿ ವೈ ಎಸ್ ಪಿ ವೀರಯ್ಯ ಹಿರೇಮಠ್ , ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ , ಸುಳ್ಯ ಎಸ್ ಐ ದಿಲೀಪ್ ಕುಮಾರ್ ಬೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.