ವಾಣಿಜ್ಯ ಜಾಹಿರಾತು
ಸುಳ್ಯ: ಮನೆಯ ಮೇಲೆ ಬೃಹತ್ ಮರ ಬಿದ್ದ ಪರಿಣಾಮ ಮನೆಯಲ್ಲಿದ್ದವರು ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೇರ್ಪಡ ಪಲ್ಲತಡ್ಕದಲ್ಲಿ ತಡ ರಾತ್ರಿ ನಡೆದಿದೆ.
ಕೇರ್ಪಡ ಪಲ್ಲತಡ್ಕದ ಮೊಗೇರ್ಕಳ ಸೇವಾ ಸಮಿತಿ ಅಧ್ಯಕ್ಷ ರಮೇಶ್ ಅವರ ಮನೆಯ ಮೇಲೆ ನಿನ್ನೆ ರಾತ್ರಿ ಮರ ಬಿದ್ದಿದ್ದು ಮನೆಯಲ್ಲಿ ಮಲಗಿದ್ದವರಿಗೆ ಗಾಯಗಳಾಗಿವೆ,
ಮರ ಬಿದ್ದ ಪರಿಣಾಮ ಮನೆ ಮೇಲ್ಛಾವಣಿಯ ಹಂಚು ಮನೆಯಲ್ಲಿದ್ದವರ ತಲೆಗೆ ಬಿದ್ದು ಗಾಯಗಳಾಗಿದ್ದು ಕಾಣಿಯೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಮನೆಯ ಹಂಚುಗಳು ಪಕಾಸು., ರೀಪ್ ತುಂಡಾಗಿ ಅಪಾರ ನಷ್ಟ ಸಂಭವಿಸಿದೆ ಎನ್ನಲಾಗಿದೆ.
ವಾಣಿಜ್ಯ ಜಾಹಿರಾತು