ತೈವಾನ್‌ನಲ್ಲಿ ಭಾನುವಾರ ಮತ್ತೊಮ್ಮೆ ಭೂಕಂಪನದ ಅನುಭವವಾಗಿದೆ. ಕಳೆದ 24 ಗಂಟೆಗಳಲ್ಲಿ ಇದು ಎರಡನೇ ಭೂಕಂಪವಾಗಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.2 ರಷ್ಟಿದ್ದು, ಉಜಿಂಗ್ ಪ್ರಾಂತ್ಯಕ್ಕೆ ಅಪ್ಪಳಿಸಿದೆ. ಮೊನ್ನೆ ಶನಿವಾರವೂ ಇಲ್ಲಿ ಪ್ರಬಲ ಭೂಕಂಪನದ ಅನುಭವವಾಗಿತ್ತು. ಆಗ್ನೇಯ ತೈವಾನ್‌ನಲ್ಲಿ 6.9 ತೀವ್ರತೆಯ ಭೂಕಂಪ ಸಂಭವಿಸಿದೆ. ಇದರಿಂದ ಇಲ್ಲಿ ಕಟ್ಟಡವೊಂದು ಕುಸಿದು ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ಭೂಕಂಪದಿಂದಾಗಿ ಹಲವು ಮನೆಗಳಿಗೆ ಹಾನಿಯಾಗಿದೆ ಎಂದು ಹೇಳಲಾಗುತ್ತಿದೆ. ಇದಲ್ಲದೇ ಭೂಕಂಪನಕ್ಕೆ ಕೆಲ ರೈಲ್ವೇ ಬೋಗಿಗಳು ಪಲ್ಟಿಯಾಗಿರುವ ಘಟನೆಯೂ ಬೆಳಕಿಗೆ ಬಂದಿದೆ. ಬಂದಿರುವ ಮಾಹಿತಿ ಪ್ರಕಾರ ಕಳೆದ ಎರಡು ದಿನಗಳಿಂದ ಇಲ್ಲಿ ಭೂಕಂಪನದ ಆಘಾತಗಳು ನಿರಂತರವಾಗಿ ಸಂಭವಿಸುತ್ತಿವೆ. 7.2 ತೀವ್ರತೆಯ ಭೂಕಂಪವು ಯುಜಿಂಗ್‌ನಿಂದ 85 ಕಿಮೀ ಪೂರ್ವಕ್ಕೆ ಮಧ್ಯಾಹ್ನ 12:14 ಕ್ಕೆ ಅಪ್ಪಳಿಸಿದೆ.
ಭೂಕಂಪದ ತ್ರಿಜ್ಯವು ಸುಮಾರು 10 ಕಿ.ಮೀ. ಇದ್ದು, ಏತನ್ಮಧ್ಯೆ ತೈವಾನ್‌ನ ಅಗ್ನಿಶಾಮಕ ಇಲಾಖೆ ಪ್ರಕಾರ, ಯುಲಿಯಲ್ಲಿನ ಕಟ್ಟಡದಿಂದ ನಾಲ್ವರನ್ನು ರಕ್ಷಿಸಲಾಗಿದೆ. ತೈವಾನ್ ರೈಲ್ವೆ ಆಡಳಿತದ ಪ್ರಕಾರ, ಪೂರ್ವ ತೈವಾನ್‌ನ ಡೋಂಗ್ಲಿ ನಿಲ್ದಾಣದಲ್ಲಿ ರೈಲಿನ ಆರು ಬೋಗಿಗಳು ಹಳಿತಪ್ಪಿದವು. ಆದರೆ, ಯಾರಿಗೂ ಗಾಯಗಳಾಗಿಲ್ಲ ಎಂದು ಅಗ್ನಿಶಾಮಕ ದಳ ತಿಳಿಸಿದೆ. ಅದೇ ಸಮಯದಲ್ಲಿ, ಸುಮಾರು 600 ಜನರು ಸಿನಿಕ್ ಚೀಕ್ ಮತ್ತು ಲಿಯುಶಿಶಿ ಪರ್ವತ ಪ್ರದೇಶಗಳಲ್ಲಿ ಸಿಲುಕಿದ್ದಾರೆ. ಇಲ್ಲಿ ಅಗ್ನಿಶಾಮಕ ದಳದವರು ಮುಚ್ಚಿಹೋಗಿರುವ ರಸ್ತೆಗಳನ್ನು ತೆರವುಗೊಳಿಸಲು ಪ್ರಯತ್ನಿಸುತ್ತಿದ್ದಾರೆ.
ಅದೇ ಸಮಯದಲ್ಲಿ, ಆಗ್ನೇಯ ತೈವಾನ್‌ನಲ್ಲಿ ಶನಿವಾರ ಸಂಜೆ ಭೂಕಂಪದ ಅನುಭವವಾಯಿತ್ತು. ಆಗ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.4 ಆಗಿತ್ತು. ಭೂಕಂಪದಿಂದ ಇದುವರೆಗೆ ಯಾವುದೇ ಪ್ರಾಣ ಹಾನಿ ಅಥವಾ ಆಸ್ತಿ ಹಾನಿ ವರದಿಯಾಗಿಲ್ಲ. ಆದಾಗ್ಯೂ, ಯುಎಸ್ ಜಿಯೋಲಾಜಿಕಲ್ ಸರ್ವೆ ಈ ಭೂಕಂಪದ ತೀವ್ರತೆಯನ್ನು 6.6 ಎಂದು ದಾಖಲಿಸಿದೆ. ತೈಟುಂಗ್ ಕೌಂಟಿಯ ಗುವಾನ್‌ಶಾನ್ ಟೌನ್‌ಶಿಪ್ ಬಳಿ 10 ಕಿಲೋಮೀಟರ್ (6.2 ಮೈಲಿ) ಆಳದಲ್ಲಿ ಭೂಕಂಪನದ ಕೇಂದ್ರಬಿಂದುವಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ಹೇಳಿದೆ.