ವಾಣಿಜ್ಯ ಜಾಹಿರಾತು

ಮನೆಯಲ್ಲಿ ಬೇಕಾದಷ್ಟು ಬಾಳೆಹಣ್ಣಿದೆ. ಆದರೆ ಹಾಗೇ ತಿನ್ನಲು ಬೇಜಾರು. ಹೀಗಂದುಕೊಳ್ಳುವವರು ಈ ರೆಸಿಪಿ ನೋಡಿ. ಕೆಲವೇ ನಿಮಿಷಗಳಲ್ಲಿ ಥಟ್ಟಂತ ಈ ಬಾಳೆಹಣ್ಣಿನ ರಸಾಯನ ತಯಾರಿಸಬಹುದು. Tasty and healthy ಆಗಿರುವ ಬಾಳೆಹಣ್ಣಿನ ರಸಾಯನ ಬೇಸಿಗೆಯಲ್ಲಂತೂ ಆರೋಗ್ಯಕ್ಕೆ ಅತ್ಯುತ್ತಮ.

ಬೇಕಾಗುವ ಸಾಮಗ್ರಿಗಳು

ಹಣ್ಣಾದ ಬಾಳೆಹಣ್ಣು 10-15 (ಕದಳಿ ಬಾಳೆಹಣ್ಣಾದರೆ ಉತ್ತಮ)

100 ಗ್ರಾಂ ಬೆಲ್ಲ

1 ಹಸಿ ತೆಂಗಿನಕಾಯಿ

ಏಲಕ್ಕಿ ಪುಡಿ ಅರ್ಧ ಸ್ಪೂನ್

ಜೇನು 1 ಸ್ಪೂನ್

ತುಪ್ಪ 1 ಟೇಬಲ್ ಸ್ಪೂನ್

ಎಳ್ಳು ಅರ್ಧ ಟೇಬಲ್ ಸ್ಪೂನ್

ಸ್ಪಲ್ಪ ದ್ರಾಕ್ಷಿ, ಗೋಡಂಬಿ

ಮಾಡುವ ವಿಧಾನ:

ಒಂದು ಪಾತ್ರೆಯನ್ನು ತೆಗೆದುಕೊಂಡು ಬಾಳೆಹಣ್ಣಿನ ಸಿಪ್ಪೆ ತೆಗೆದು ರೌಂಡ್ ಶೇಪ್ ನಲ್ಲಿ ಸಣ್ಣಗೆ ಕತ್ತರಿಸಿಕೊಳ್ಳಿ. ನಂತರ ಇದೇ ಪಾತ್ರೆಗೆ ಪುಡಿ ಮಾಡಿದ ಬೆಲ್ಲವನ್ನು ಹಾಕಿ ಮಿಕ್ಸ್ ಮಾಡಿ ಇಡಿ. ಹೀಗೆ ಸ್ಪಲ್ಪ ಹೊತ್ತು ಇಡುವುದರಿಂದ ಬಾಳೆಹಣ್ಣು ಬೆಲ್ಲವನ್ನು ಹೀರಿಕೊಳ್ಳುತ್ತದೆ. ನಂತರ 1 ಹಸಿ ತೆಂಗಿನಕಾಯಿಯನ್ನು ತುರಿದು ಮಿಕ್ಸಿಯಲ್ಲಿ ರನ್ ಮಾಡಿ ದಪ್ಪ ಕಾಯಿ ಹಾಲನ್ನು ತೆಗೆದುಕೊಳ್ಳಿ. ಈ ಕಾಯಿಹಾಲನ್ನು ಬಾಳೆಹಣ್ಣಿಗೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

ನಂತರ 1 ಟೇಬಲ್ ಸ್ಪೂನ್ ಜೇನು, ಅರ್ಧ ಟೇಬಲ್ ಸ್ಪೂನ್ ಏಲಕ್ಕಿ ಹಾಕಿ ಚೆನ್ನಾಗಿ ಬೆರೆಸಿಕೊಳ್ಳಿ. ನಂತರ ಎಣ್ಣೆಯಲ್ಲಿ ಸ್ಪಲ್ಪ ಎಳ್ಳನ್ನು ಹಾಕಿ ಸಿಡಿಸಿ ಈ ಮಿಶ್ರಣಕ್ಕೆ ಸೇರಿಸಿ. ನೀವು ಡ್ರೈಫ್ರುಟ್ಸ್ ಇಷ್ಟಪಡುವವರಾದರೆ ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ ಸೇರಿಸಿಕೊಳ್ಳಿ. ಈಗ ಸವಿಯಾದ ಬಾಳೆಹಣ್ಣಿನ ರಸಾಯನ ಸವಿಯಲು ಸಿದ್ಧ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.