ವಾಣಿಜ್ಯ ಜಾಹಿರಾತು

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಮುಖ್ಯ (ಟೈಟಲ್) ಪ್ರಾಯೋಜಕತ್ವವನ್ನು ಭಾರತ ಮೂಲದ ‘ಟಾಟಾ ಗ್ರೂಪ್’ ವಹಿಸಿಕೊಂಡಿದೆ.

ಮುಂಬರುವ ಆವೃತ್ತಿಯ ಐಪಿಎಲ್ ಪಂದ್ಯಾವಳಿಗೆ ಮುಖ್ಯ ಪ್ರಾಯೋಜಕರಾಗಿ ಟಾಟಾ ಗ್ರೂಪ್ ಆಯ್ಕೆಯಾಗಿದೆ ಎಂದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಚೇರ್ಮನ್ ಬ್ರಿಜೇಶ್ ಪಟೇಲ್ ದೃಢಪಡಿಸಿದ್ದಾರೆ.

ಈ ಹಿಂದೆ ಟೂರ್ನಿ ಪ್ರಾಯೋಜಕತ್ವ ಚೀನಾ ಮೂಲದ ಮೊಬೈಲ್ ಸಂಸ್ಥೆ ವಿವೋ ಹೆಸರಿನಲ್ಲಿತ್ತು. ಆದರೆ ಈ ಬಾರಿ ಟಾಟಾ ಗ್ರೂಪ್ ಶೀರ್ಷಿಕೆ ಪ್ರಾಯೋಜಕತ್ವ ಬಿಡ್ ಗೆದ್ದಿದೆ. ಇನ್ನು ವಿವೋ ಐಪಿಎಲ್ ಲೀಗ್‌ನೊಂದಿಗಿನ ತನ್ನ ಪ್ರಾಯೋಜಕತ್ವದ ಒಪ್ಪಂದದಲ್ಲಿ ಇನ್ನೂ ಎರಡು ವರ್ಷಗಳ ಅವಧಿ ಉಳಿದಿದ್ದು, ಇದರ ಪರಿಣಾಮವಾಗಿ, ಈ ಅವಧಿಯಲ್ಲಿ, ಟಾಟಾ ಮುಖ್ಯ ಪ್ರಾಯೋಜಕರಾಗಿ ಉಳಿಯುತ್ತದೆ ಎಂದು ಬ್ರಿಜೇಶ್ ಪಟೇಲ್ ಹೇಳಿದ್ದಾರೆ.

ವಿವೊ ಕಂಪೆನಿಯು 2018-2022ರ ತನಕ ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕುಗಳಿಗಾಗಿ 2,200 ಕೋಟಿ ರೂಪಾಯಿಗಳ ಒಪ್ಪಂದವನ್ನು ಮಾಡಿಕೊಂಡಿತ್ತು. ಆದರೆ 2020ರಲ್ಲಿ ಭಾರತ ಹಾಗೂ ಚೀನಾದ ಸೈನಿಕರ ನಡುವೆ ಗಲ್ವಾನ್ ಕಣಿವೆಯಲ್ಲಿ ಮಿಲಿಟರಿ ಸಂಘರ್ಷವಾದ ನಂತರ ವಿವೊ ಒಂದು ವರ್ಷದ ವಿರಾಮವನ್ನು ತೆಗೆದುಕೊಂಡಿತು. ಆಗ ಬ್ರ್ಯಾಂಡ್ ಡ್ರೀಮ್ 11 ಅನ್ನು ಶೀರ್ಷಿಕೆ ಪ್ರಾಯೋಜಕತ್ವ ವಹಿಸಿಕೊಂಡಿತ್ತು. ಆದರೆ ವಿವೋ 2021ರಲ್ಲಿ ಐಪಿಎಲ್ ಟೈಟಲ್ ಪ್ರಾಯೋಜಕರಾಗಿ ಮರಳಿತ್ತು.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here