ವಾಣಿಜ್ಯ ಜಾಹಿರಾತು

ನವದೆಹಲಿ: ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ತನ್ನ ವೃತ್ತಿ ಬದುಕಿಗೆ ವಿದಾಯ ನೀಡುವುದಾಗಿ ತಿಳಿಸಿದ್ದಾರೆ. ಆಸ್ಟ್ರೇಲಿಯಾ ಓಪನ್ ನಲ್ಲಿ ಆಡುತ್ತಿರುವ ಸಾನಿಯಾ ಮಿರ್ಜಾ ಅವರು ಇದು ನನ್ನ ಕೊನೆಯ ಸೀಸನ್ ಎಂದು ಘೋಷಿಸಿದ್ದಾರೆ.

ಸಾನಿಯಾ ಮಿರ್ಜಾ ಮತ್ತು ಜತೆಗಾರ್ತಿ ಉಕ್ರೇನ್‌ನ ನಾಡಿಯಾ ಕಿಚೆನೋಕ್ ಜೋಡಿ 4-6,6-7 (5)ಮನೇರ ಸೆಟ್ ಹಣಾಹಣಿಯಲ್ಲಿ ಸ್ಲೋವೆನಿಯಾದ ಟ್ಯಾಮರಾ ಜಿಡಾನ್ಸೆಕ್ ಮತ್ತು ಕಾಜಾ ಜುವಾನ್ ಜೋಡಿ ವಿರುದ್ಧ ಸೋತ ನಂತರ ಈ ನಿರ್ಧಾರ ಪ್ರಕಟಿಸಿದ್ದಾರೆ.

ಮಾಧ್ಯಮಕ್ಕೆ ಈ ಬಗ್ಗೆ ಮಾತನಾಡಿದ ಅವರು. ಇದು ನನ್ನ ಕೊನೆಯ ಆವೃತ್ತಿ ಎಂದು ನಿರ್ಧರಿಸಿದ್ದೇನೆ. ನಾನು ಈ ಆವೃತ್ತಿಯನ್ನು ಹೇಗೆ ಕೊನೆಗೊಳಿಸುತ್ತೇನೆ ಎಂಬುದು ಗೊತ್ತಿಲ್ಲ. ನನ್ನ ದೇಹ ನನಗೆ ಸಹಕರಿಸುತ್ತಿಲ್ಲ. ದಿನದಿಂದ ದಿನಕ್ಕೆ ದೇಹವು ಕ್ಷೀಣಿಸುತ್ತಿದೆ. ನನ್ನ ಮೊಣಕಾಲಿನ ನೋವು ಜಾಸ್ತಿಯಾಗುತ್ತಿದೆ. ಇದರಿಂದ ಚೇತರಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದೇನೆ. ಹೀಗಾಗಿ ಇಲ್ಲಿಗೆ ನನ್ನ ವೃತ್ತಿ ಬದುಕು ಅಂತ್ಯಗೊಳಿಸುವುದು ಉತ್ತಮ ಎಂಬ ಯೋಚನೆ ಬಂದಿದೆ ಎಂದು ಹೇಳಿದ್ದಾರೆ.

‘ನಿವೃತ್ತಿ ಘೋಷಿಸಲು ಕಾರಣಗಳು ಅನೇಕ ಇವೆ. ಇನ್ನು ಮುಂದೆ ನಾನು ಆಡುವುದಿಲ್ಲ ಎಂದು ಏಕಾಏಕಿ ಹೇಳುತ್ತಿಲ್ಲ. ಚೇತರಿಸಿಕೊಳ್ಳಲು ತುಂಬಾ ಸಮಯ ಹಿಡಿಯುತ್ತದೆ. ಮಗನಿಗೆ ಈಗ ಕೇವಲ ಮೂರು ವರ್ಷ. ಆತನೊಂದಿಗೆ ಬಹಳ ದೂರ ಪ್ರಯಾಣ ಮಾಡುವುದರ ಮೂಲಕ ಸಮಸ್ಯೆಗಳನ್ನು ತೊಂದೊಡ್ಡುತ್ತಿದ್ದೇನೆಯೋ ಎಂಬ ಆತಂಕ ಕಾಡುತ್ತಿದೆ’ ಎಂದು ಅವರು ಹೇಳಿದರು.

2003 ರಿಂದ ವೃತ್ತಿಪರ ಟೆನಿಸ್ ಆಡುತ್ತಿರುವ ಸಾನಿಯಾ ಮಿರ್ಜಾ, ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ನಂ.೧ ಸ್ಥಾನ ಅಲಂಕರಿಸಿದ್ದರು. ತಮ್ಮ ಟೆನಿಸ್ ವೃತ್ತಿ ಬದುಕಿನಲ್ಲಿ ೬ ಗ್ರ್ಯಾನ್ ಸ್ಲಾಮ್ ಕಿರೀಟ ಗೆದ್ದು ಸಾಧನೆ ಮಾಡಿದ್ದಾರೆ. 2007 ರಲ್ಲಿ ವಿಶ್ವದ 27ನೇ ಶ್ರೇಯಾಂಕ ಪಡೆಯುವ ಮೂಲಕ ಭಾರತದ ಮಹಿಳಾ ಟೆನಿಸ್‌ನಲ್ಲಿ ಆಡುವ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದರು. ಪ್ರಸ್ತುತ ವಿಶ್ವ ರ‍್ಯಾಕಿಂಗ್‌ನಲ್ಲಿ 68ನೇ ಸ್ಥಾನದಲ್ಲಿದ್ದಾರೆ.

2018ರಲ್ಲಿ ಮಗುವಿಗೆ ಜನ್ಮ ನೀಡಿದ ನಂತರ ಅವರು ಕೆಲ ಕಾಲ ಆಟದಿಂದ ದೂರ ಉಳಿದಿದ್ದರು. ನಂತರ ಉಕ್ರೇನಿನ ನಾಡಿಯಾ ಕಿಚೆನೊಕ್ ಅವರೊಂದಿಗೆ ಹೋಬರ್ಟ್ ಇಂಟರ್ ನ್ಯಾಷನಲ್ ನಲ್ಲಿ ಮಹಿಳಾ ಡಬಲ್ಸ್ ಪ್ರಶಸ್ತಿ ಗೆದ್ದಿದ್ದರು.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.