ವಾಣಿಜ್ಯ ಜಾಹಿರಾತು
ಸುಳ್ಯ(ದಕ್ಷಿಣ ಕನ್ನಡ): ಮದುವೆಗೆ ತೆರಳುತ್ತಿದ್ದ ಇನ್ನೋವಾ ಕಾರು ಅಪಘಾತಕ್ಕೀಡಾದ ಪರಿಣಾಮ ತಾಯಿ ಹಾಗೂ ಮಗು ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸುಳ್ಯ ಸಮೀಪದ ಜಾಲ್ಸುರು – ಕಾಸರಗೋಡು ರಸ್ತೆಯಲ್ಲಿ ನಡೆದಿದೆ.
ಪರಪ್ಪು ನಿವಾಸಿ ಶಾನ್ ಎಂಬುವರ ಪತ್ನಿ ಶಾಹಿನಾ (28) ಮತ್ತು ಅವರ ಮೂರು ವರ್ಷದ ಮಗು ಶಾಜಾ ಮೃತ ದುರ್ದೈವಿಗಳು. ಕಾರಿನಲ್ಲಿದ್ದ ಉಳಿದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಕಾಸರಗೋಡು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಬಳಿಕ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ರನಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಯಿ ಮತ್ತು ಮಗುವಿನ ಮೃತದೇಹಗಳನ್ನು ಸುಳ್ಯ ಕೆವಿಜಿ ಆಸ್ಪತ್ರೆಗೆ ತರಲಾಗಿದೆ. ಘಟನೆಯು ಕೇರಳದ ಅದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಾಣಿಜ್ಯ ಜಾಹಿರಾತು