ವಾಣಿಜ್ಯ ಜಾಹಿರಾತು
ಕಾರ್ಕಳ: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ವೃದ್ದೆಯೊಬ್ಬರು ಡ್ಯಾಂಗ್ ಬಿದ್ದು ಮೃತಪಟ್ಟ ಘಟನೆ ಪಳ್ಳಿ ಗ್ರಾಮದ ಕಲ್ಲಪ್ಪು ಸೇತುವೆ ಬಳಿ ನಡೆದಿದೆ.
ಗುಂಡ್ಯಡ್ಕ ಕೌಡೂರು ಗ್ರಾಮದ ನಿವಾಸಿ ಬಡ್ದು ಹಾಂಡ್ತಿ (73) ಮೃತ ವೃದ್ಧೆ.
ಮೃತ ವೃದ್ಧೆಗೆ ಸರಿಯಾಗಿ ಕಣ್ಣು ಕಾಣುತ್ತಿರಲಿಲ್ಲ. ಜೊತೆಗೆ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು. ಇದಕ್ಕಾಗಿ ಉಡುಪಿ ಖಾಸಗಿ ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಭಾನುವಾರ ಸಂಜೆ ಮನೆಯಿಂದ ಹೊರಹೋಗಿದ್ದ ವೃದ್ಧೆ ಎಷ್ಟು ಹೊತ್ತಾದರೂ ಮನೆಗೆ ಬಂದಿರಲಿಲ್ಲ. ಹೀಗಾಗಿ ವೃದ್ಧೆಯ ಕುಟುಂಬಸ್ಥರು ಸಾಕಷ್ಟು ಕಡೆ ಹುಡುಕಾಡಿದ್ದರು ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ ನಿನ್ನೆ ಬಡ್ಡು ಹಾಂಡ್ತಿ ಅವರ ಶವ ಪಳ್ಳಿ ಗ್ರಾಮದ ಕಲ್ಲಪ್ಪು ಸೇತುವೆ ಬಳಿ ಇರುವ ನೀರಿನ ಡ್ಯಾಂನಲ್ಲಿ ತೇಲುತ್ತಿರುವುದು ಕಂಡುಬಂದಿದೆ.
ಸೇತುವೆ ಬಳಿ ಇರುವ ನೀರಿನ ಡ್ಯಾಂಗೆ ಆಕಸ್ಮಿಕವಾಗಿ ಬಿದ್ದು ಅವರು ಮೃತಪಟ್ಟಿದ್ದು, ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಣಿಜ್ಯ ಜಾಹಿರಾತು