ವಾಣಿಜ್ಯ ಜಾಹಿರಾತು
ವಿಟ್ಲ: ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ರಸ್ತೆ ಬದಿ ಇದ್ದ ಬೃಹತ್ ಬಂಡೆಗೆ ಗುದ್ದಿದ ಪರಿಣಾಮ ಬಸ್ ನಲ್ಲಿದ್ದ ಯುವತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿಟ್ಲ ಸಮೀಪದ ಕೆಲಿಂಜ ಎಂಬಲ್ಲಿ ಸಂಭವಿಸಿದೆ.
ವಿಟ್ಲದಿಂದ ಮಂಗಳೂರು ಕಡೆಗೆ ಚಲಿಸುತ್ತಿದ್ದ ಸೆಲಿನಾ ಹೆಸರಿನ ಖಾಸಗಿ ಬಸ್ ಅಪಘಾತಕ್ಕೀಡಾಗಿದೆ.
ಬಸ್ ಬಂಡೆಗೆ ಗುದ್ದಿದ್ದ ಪರಿಣಾಮ ಬಸ್ ನ ಮುಂಭಾಗದಲ್ಲಿ ಕುಳಿದಿದ್ದ ಯುವತಿ ಬಸ್ ನ ಮುಂಭಾಗದ ಗಾಜು ಒಡೆದು ಹೊರಕ್ಕೆ ಎಸೆಯಲ್ಪಟ್ಟಿದ್ದಾಳೆ. ಬಸ್ ನಿಂದ ಹೊರಗೆ ರಸ್ತೆಯ ಮೇಲೆ ಬಿದ್ದ ಯುವತಿಗೆ ಗಂಭೀರವಾಗಿ ಗಾಯಗಳಾಗಿದ್ದು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ನಲ್ಲಿದ್ದ ಕೆಲ ಪ್ರಯಾಣಿಕರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು, ಸ್ಥಳಕ್ಕೆ ವಿಟ್ಲ ಪೋಲೀಸರು ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ವಾಣಿಜ್ಯ ಜಾಹಿರಾತು