ಉತ್ತರಪ್ರದೇಶ: ಪ್ರೇಮಿಗಳಿಬ್ಬರನ್ನು ದೂರ ಮಾಡಿದ ಹುಡುಗಿಯ ಮನೆಯವರು ಆಕೆಗೆ ಬೇರೊಬ್ಬನ ಜೊತೆ ಮದುವೆ ಮಾಡಲು ಹೊರಟಿದ್ದರು. ಇನ್ನೇನು ವರ ವಧುವಿಗೆ ತಾಳಿ ಕಟ್ಟಲು ಬಾಕಿ, ಅಷ್ಟರಲ್ಲಿ ಭಗ್ನಪ್ರೇಮಿ ಮದುವೆ ಮಂಟಪಕ್ಕೆ ಬಂದು ವಧುವಿಗೆ ಅಂದರೆ ತನ್ನ ಪ್ರೇಯಸಿಗೆ ಸಿಂಧೂರ ತಿಲಕವನ್ನಿಟ್ಟ. ಇದು ಸಿನಿಮಾ ದೃಶ್ಯವಲ್ಲ. ಅಸಲಿಗೆ ಉತ್ತರಪ್ರದೇಶದ ಗೋರಖ್‍ಪುರದಲ್ಲಿ ನಡೆದ ಘಟನೆ.
ಯುವಕ ಹಾಗೂ ಯುವತಿ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರ ಪ್ರೀತಿಗೆ ಹುಡುಗಿಯ ಮನೆಯವರಿಂದ ವಿರೋಧ ವ್ಯಕ್ತವಾಗಿತ್ತು. ಯುವಕ ನೌಕರಿಗಾಗಿ ಬೇರೆ ನಗರಕ್ಕೆ ಹೋದ ಸಂದರ್ಭ ಯುವತಿಯನ್ನು ಬೇರೆಯವರಿಗೆ ಕೊಟ್ಟು ಮದುವೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಯುವತಿ ಬೇಡ ಎಂದರೂ ಕೇಳದೇ ಒತ್ತಾಯಪೂರ್ವಕವಾಗಿ ಮದುವೆ ಮಾಡಿಸಲು ಮುಂದಾಗಿದ್ದರು. ಈ ವಿಷಯವನ್ನು ಯುವತಿ ಯುವಕನಿಗೆ ತಿಳಿಸಿದ್ದಳು. ವಿಚಾರದ ತಿಳಿದ ಯುವಕ ಮುಖಕ್ಕೆ ಬಟ್ಟೆಯನ್ನು ಸುತ್ತಿಕೊಂಡು ಮದುವೆ ಮಂಟಪಕ್ಕೆ ಬಂದಿದ್ದ. ಇತ್ತ ವಧು, ವರರು ಇನ್ನೇನು ಹಾರ ಬದಲಾಯಿಸಿಕೊಳ್ಳಬೇಕು ಅನ್ನುವಷ್ಟರಲ್ಲಿ ಆತ ಯುವತಿಯ ಹಣೆಗೆ ಸಿಂಧೂರವನ್ನಿಟ್ಟಿದ್ದಾನೆ. ಅಲ್ಲಿದ್ದವರು ತಡೆಯಲು ಯತ್ನಿಸಿದರೂ ಅದು ಸಫಲವಾಗಲಿಲ್ಲ.
ಈ ಘಟನೆಯೆ ವಿಡಿಯೋ ಇದೀಗ ವೈರಲ್ ಆಗಿದೆ.