ವಾಣಿಜ್ಯ ಜಾಹಿರಾತು

ಆಫ್ರಿಕಾ ಖಂಡದ ಉತ್ತರ ಭಾಗದಲ್ಲಿ ಹರಡಿರುವ ಸಹಾರ ಮರುಭೂಮಿಯು ಪ್ರಪಂಚದ ಅತೀ ದೊಡ್ಡ ಉಷ್ಣ ಮರುಭೂಮಿಯಾಗಿದೆ. ಸುಮಾರು 90 ಲಕ್ಷ ಚದರ ಕಿ.ಮೀ ವಿಸ್ತೀರ್ಣ ಹೊಂದಿರುವ ಇದು ಎರಡೂವರೆ ದಶ ಲಕ್ಷ ವರ್ಷಗಳ ಹಿಂದೆ ನಿರ್ಮಾಣವಾಗಿದೆಯೆಂದು ಹೇಳಲಾಗುತ್ತದೆ. ಅರೇಬಿಕ್ ಭಾಷೆಯಲ್ಲಿ ಸಹಾರ ಎಂದರೆ ಒಣಭೂಮಿ ಎಂದರ್ಥ.

ಈ ಮರುಭೂಮಿಯು ಅಲ್ಜೀರಿಯಾ, ಚಾಡ್, ಈಜಿಪ್ಟ್, ಲಿಬಿಯಾ, ಮಾಲಿ, ಮೊರಾಕೊ, ಸೂಡಾನ್ ಸೇರಿದಂತೆ ಹಲವು ದೇಶಗಳಲ್ಲಿ ಹರಡಿಕೊಂಡಿದೆ. ಆಫ್ರಿಕಾ ಖಂಡದ ಶೇ.31 ರಷ್ಟು ಭಾಗವನ್ನು ಸಹಾರ ಮರುಭೂಮಿ ಆಕ್ರಮಿಸಿಕೊಂಡಿದೆ.

ಈ ಮರುಭೂಮಿಯು ಹಲವಾರು ಬುಡಕಟ್ಟು ಜನಾಂಗಗಳಿಗೆ ನೆಲೆಯಾಗಿದೆ. ಇಲ್ಲಿ ಅರೇಬಿಕ್ ಭಾಷೆಯನ್ನು ಹೆಚ್ಚಾಗಿ ಮಾತನಾಡುತ್ತಾರೆ. ಪ್ರಪಂಚದ ದೊಡ್ಡ ಮರುಭೂಮಿಗಳಲ್ಲಿ ಒಂದಾಗಿದ್ದರೂ ಕೂಡಾ ಇಲ್ಲಿ ದೊರೆತಿರುವ ವಿವಧ ಪ್ರಾಣಿಗಳ ಪಳೆಯುಳಿಕೆಗಳು, ಇದು ಒಂದು ಕಾಲದಲ್ಲಿ ಕಾಡುಗಳಿಂದ ಕೂಡಿದ್ದ ಪ್ರದೇಶವಾಗಿರಬೇಕೆನ್ನುವುದಕ್ಕೆ ಸಾಕ್ಷಿಯಾಗಿವೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.