ವಾಣಿಜ್ಯ ಜಾಹಿರಾತು

ಚಳಿ ಹಾಗೂ ಮಳೆಯಿಂದಾಗಿ ಅನೇಕರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾನಾ ಬಗೆಯ ವಿಧಾನಗಳಿಗೆ ಮೊರೆಹೋಗುತ್ತಾರೆ. ಕೆಲವರು ಚಳಿಗಾಲಕ್ಕೆ ಮನೆಯಲ್ಲಿಯೇ ಸಿಗುವ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿಕೊಂಡು, ಚಳಿಗಾಲದಲ್ಲಿ ತಮ್ಮ ಆರೋಗ್ಯ ರಕ್ಷಣೆಗೆ ಮುಂದಾಗುತ್ತಾರೆ. ಇನ್ನು ಕೆಲವರು ಡ್ರೈ ಫ್ರೂಟ್ಸ್ ಸೇವನೆ ಮೂಲಕ ಆರೋಗ್ಯದ ಕಾಳಜಿ ವಹಿಸುತ್ತಾರೆ. ಈ ಡೈಫ್ರೂಟ್ಸ್ ಗಳಲ್ಲಿ ಬಾದಾಮಿ ಸೇವನೆ ಬಹಳ ಪ್ರಯೋಜನಕಾರಿ.

ಅದರಲ್ಲೂ ಬಾದಾಮಿಯನ್ನು ರಾತ್ರಿ ನೆನಿಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಗೆ ಸೇವಿಸುತ್ತಾರೆ. ಈ ರೀತಿ ಬಾದಾಮಿ ತಿನ್ನುವುದರಿಂದ ಆರೋಗ್ಯದ ರಕ್ಷಣೆ ಮಾಡುವುದರ ಜೊತೆಗೆ ದೈಹಿಕ ಸದೃಢತೆಯನ್ನು ಬಲಪಡಿಸುತ್ತವೆ. ನಾರಿನಾಂಶ ಹೊಂದಿರುವ ಬಾದಾಮಿಯು ಜೀರ್ಣಾಂಗ ಕ್ರಿಯೆಯನ್ನು ಸುಲಭವಾಗಿಸುತ್ತದೆ. ಅಜೀರ್ಣತೆ, ಹೊಟ್ಟೆ ಉಬ್ಬರ, ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸುವ ಶಕ್ತಿ ಬಾದಾಮಿಗಿದೆ. ಅಲ್ಲದೇ ಬಾದಾಮಿ ಬೀಜಗಳಲ್ಲಿ ಕಾರ್ಬೋಹೈಡ್ರೇಟ್ ಅಂಶ, ಗ್ಲೂಕೋಸ್ ಅಂಶಗಳು ಸೇರಿದಂತೆ ಪ್ರೋಟೀನ್ ಅಂಡಗಳೂ ಅಡಕವಾಗಿದೆ. ಇವುಗಳ ಕಾರಣದಿಂದ ಕೇವಲ ಹೊಟ್ಟೆಯ ಭಾಗ ಮಾತ್ರವಲ್ಲದೆ ಕರುಳಿನ ಆರೋಗ್ಯ ಕೂಡ ಸುಧಾರಣೆ ಕಾಣುತ್ತದೆ.

ಬಾದಾಮಿ ಸೇವನೆಯಿಂದಾಗುವ ಪ್ರಯೋಜನಗಳು;

1) ರೋಗನಿರೋಧಕ ಶಕ್ತಿ ವೃದ್ಧಿ :

ಬಾದಾಮಿ ಸೇವನೆ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸಹಾಯಕವಾಗಿದೆ.. ಬಾದಾಮಿಯಲ್ಲಿ ಪ್ರೋಟೀನ್,ಮೆಗ್ನೇಷಿಯಂ, ನಾರು ಒಮೆಗಾ-3, ಒಮೆಗಾ-6, ಕೊಬ್ಬಿನ ಆಮ್ಲಗಳು, ವಿಟಮಿನ್ ಇ, ಪೊಟ್ಯಾಶಿಯಂ, ಕ್ಯಾಲ್ಸಿಯಂ ಅಂಶಗಳು ಅಧಿಕವಾಗಿವೆ..

2) ಆಯಾಸ ನಿವಾರಣೆ :

ಬಾದಾಮಿಯನ್ನು ಪ್ರತಿನಿತ್ಯ ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಬೇಕಾದ ವಿಟಮಿನ್ ಗಳು ಹೇರಳವಾಗಿ ಸಿಗಲಿದೆ. ಅದರಲ್ಲೂ ಬಾದಾಮಿಯಲ್ಲಿರುವ ಮೆಗ್ನೀಷಿಯಂ ಆಯಾಸದಿಂದ ಮುಕ್ತಿಗೊಳಿಸಿ ದೇಹಕ್ಕೆ ಬೇಕಾದ ಶಕ್ತಿಯನ್ನು ನೀಡುತ್ತದೆ.

3) ಮೂಳೆಗಳನ್ನು ಬಲಪಡಿಸಲು ಸಹಾಯಕಾರಿ

ಬಾದಾಮಿಯಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಹೀಗಾಗಿ ಬಾದಾಮಿ ತಿನ್ನುವುದು ನಿಮ್ಮ ಮೂಳೆಗಳನ್ನು ಬಲಪಡಿಸುತ್ತದೆ. ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಸೇವಿಸಬಹುದಾದ ಆಹಾರ ಇದಾಗಿರುವುದರಿಂದ ಮೂಳೆ ಸಂರಕ್ಷಣೆಗೆ ಸಹಕಾರಿಯಾಗಿದೆ.

4)ಉತ್ತಮ ಐಕ್ಯೂಗಾಗಿ:

ಬಾದಾಮಿಯಲ್ಲಿ ಕಂಡುಬರುವ ಪ್ರೋಟೀನ್ ಮೆದುಳಿನ ಕೋಶಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಬಾದಾಮಿಯು ವಿಟಮಿನ್ ಇ ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳನ್ನು ಹೊಂದಿದ್ದು ಮೆದುಳನ್ನು ಆರೋಗ್ಯವಾಗಿರಿಸುತ್ತದೆ. ಮೆಗ್ನೀಸಿಯಮ್ನಲ್ಲಿ ಸಮೃದ್ಧವಾಗಿರುವ ಬಾದಾಮಿ ಒಟ್ಟಾರೆ ನರಗಳ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ನರಮಂಡಲವನ್ನು ಆರೋಗ್ಯಕರವಾಗಿರಿಸುತ್ತದೆ.

5) ಜ್ಞಾಪಕಶಕ್ತಿಯನ್ನು ವರ್ಧಿಸುತ್ತದೆ:

ಬಾದಾಮಿ ಜ್ಞಾಪಕ ಶಕ್ತಿಯ ಧಾರಣವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಬಾದಾಮಿಯಲ್ಲಿ ವಿಟಮಿನ್ ಇ ಅಂಶ ಇರುವುದರಿಂದ ನಮ್ಮ ಗಮನವನ್ನು ಸುಧಾರಿಸುತ್ತದೆ ಮತ್ತು ದೀರ್ಘಕಾಲದವರೆಗೆ ಸ್ಮರಣೆ ಮಾಡಿಕೊಳ್ಳಲು ಸಹಕಾರಿಯಾಗಿದೆ.

6)ತೂಕ ಇಳಿಕೆ :

ತೂಕ ಇಳಿಕೆ ಮಾಡಬೇಕು ಎಂದು ಡಯಟ್ ಮಾಡುತ್ತಿರುವವರು ಪ್ರತಿನಿತ್ಯ ನೆನೆಸಿದ ಬಾದಾಮಿಯನ್ನು ತಿನ್ನುವುದರಿಂದ ಗಣನೀಯ ಪ್ರಮಾಣದಲ್ಲಿ ತೂಕ ಇಳಿಸಿಕೊಳ್ಳಬಹುದು. ದೇಹದಲ್ಲಿನ ಕೊಬ್ಬನ್ನು ಬಾದಾಮಿ ಕರಗಿಸುವುದರ ಜೊತೆಗೆ ರಕ್ತದೊತ್ತಡ ಸಕ್ಕರೆ ಕಾಯಿಲೆಯಂತಹ ಸಮಸ್ಯೆಗಳನ್ನು ಇಂದಲೂ ಮುಕ್ತಿ ನೀಡಲು ಬಾದಾಮಿ ಸಹಕಾರಿ.

7) ಹೃದಯ ಸಂಬಂಧಿ ರೋಗಗಳಿಂದ ರಕ್ಷಣೆ :

ನಮ್ಮ ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಣೆ ಮಾಡುವುದರ ಜೊತೆಗೆ ನಮ್ಮ ದೇಹದಲ್ಲಿನ ಉತ್ಕರ್ಷಣ ನಿರೋಧಕ ಶಕ್ತಿ ಬಾದಾಮಿ ಸೇವನೆ ಸಹಕಾರಿಯಾಗಿದೆ. ಕೊಲೆಸ್ಟ್ರಾಲ್ ನಿಯಂತ್ರಣ ಮಾಡುವುದರ ಜೊತೆಗೆ ಹೃದಯದ ಆರೋಗ್ಯ ಸಮಸ್ಥಿತಿಯಲ್ಲಿ ಇರಲು ಬಾದಾಮಿ ಸೇವನೆ ಸಹಾಯಕ.

8)ಹೊಸ ಜೀವಕೋಶಗಳ ಉತ್ಪತ್ತಿ:

ಬಾದಾಮಿ ಸೇವನೆ ಮಾಡುವುದರಿಂದ ಹೊಸ ಜೀವಕೋಶಗಳ ಉತ್ಪತ್ತಿಯಾಗಲಿದೆ. ಜೊತೆಗೆ ಬಾದಾಮಿಯಲ್ಲಿ ವಿಟಮಿನ್ ಇ ಇರುವುದರಿಂದ ಚರ್ಮ ಹಾಗೂ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು..

9)ಕ್ಯಾನ್ಸರ್ ಬರದಂತೆ ತಡೆ :

ಬಾದಾಮಿಯಲ್ಲಿನ ಪ್ಲವೊನೈಡ್ಗಳು ಕ್ಯಾನ್ಸರ್ ಬರದಂತೆ ತಡೆಗಟ್ಟುತ್ತದೆ. ಜೊತೆಗೆ ಬಾದಾಮಿ ಪಚನಕ್ರಿಯೆಯನ್ನ ಸರಾಗವಾಗಿಸಲು ಮತ್ತು ದೇಹದಲ್ಲಿನ ಕಲ್ಮಶಗಳನ್ನು ನಿವಾರಣೆ ಮಾಡಲು ಬಾದಾಮಿ ಸಹಕಾರಿಯಾಗಿದೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.