ತುಳು ಭಾಷೆಯಲ್ಲಿ ‘ಪುನರ್‌ಪುಳಿ’ ಎಂದು ಕರೆಯಲ್ಪಡುವ ಕೋಕಂ ಹಣ್ಣು ಉತ್ತಮವಾದ ಆರೋಗ್ಯ ವೃದ್ಧಿಸುವಲ್ಲಿ ಸಹಕಾರಿಯಾಗಿದೆ. ಕೋಕಂ ಹಣ್ಣು ಪೌಷ್ಟಿಕಾಂಶ ಮತ್ತು ಫೈಬರ್ ಅಂಶಗಳನ್ನು ಸಮೃದ್ಧವಾಗಿ ಹೊಂದಿದೆ. ಜೊತೆಗೆ ವಿಟಮಿನ್ ಎ, ವಿಟಮಿನ್ ಬಿ3, ವಿಟಮಿನ್ ಪೋಲಿಕ್ ಆಮ್ಲ, ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಸಿಯಂ ಸೇರಿದಂತೆ ಹಲವಾರು ಅಂಶಗಳನ್ನು ಹೊಂದಿದೆ.
ಕೋಕಂ ಕುರಿತಾದ ಕೆಲವು ಪ್ರಯೋಜನಗಳು ಇಲ್ಲಿವೆ.
1. ಇಮ್ಯುನಿಟಿ ಬೂಸ್ಟರ್
ಕೋಕಂ ಹಣ್ಣು ಅನೇಕ ಆಂಟಿ-ಬ್ಯಾಕ್ಟೀರಿಯಾ ಮತ್ತು ಆಂಟಿ-ವೈರಲ್ ಗುಣಲಕ್ಷಣಗಳನ್ನು ಹೊಂದಿದ್ದು, ಸೋಂಕುಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
2. ಸಮತೋಲನವಾದ ತೂಕ
ಕೋಕಂ ಹಣ್ಣು ಹಸಿವು ನಿವಾರಕವಾಗಿ ಕಾರ್ಯ ನಿರ್ವಹಿಸುವುದರ ಜೊತೆಗೆ ಹೆಚ್ಚಿನ ಫೈಬರ್ ಅಂಶವನ್ನು ಹೊಂದಿರುವುದರಿಂದ ತೂಕವನ್ನು ಸಮನಾಗಿ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
3. ಕರುಳಿನ ಆರೋಗ್ಯ
ಅಸಿಡಿಟಿ ಮತ್ತು ಅಜೀರ್ಣದಿಂದ ಬಳಲುತ್ತಿರುವ ರೋಗಿಗಳು ಕೋಕಂ ಪಾನೀಯವನ್ನು ಕುಡಿಯುವುದರಿಂದ ಕರುಳಿನ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
4. ಉತ್ತಮ ಹೃದಯಕ್ಕಾಗಿ
ಕೋಕಂ ಹಣ್ಣು ಯಾವುದೇ ರೀತಿಯ ಕೊಲೆಸ್ಟಾಲ್ ಅಂಶವನ್ನು ಹೊಂದದೆ ಉತ್ತಮ ರೋಗ ನಿರೋಧಕತೆಯನ್ನು ಹೊಂದಿದೆ. ನಮ್ಮ ದೇಹದ ರಕ್ತದೊತ್ತಡವನ್ನು ನಿಯಂತ್ರಿಸುವುದರ ಜೊತೆಗೆ ಹೃದಯಕ್ಕೆ ಬೇಕಾದ ಉತ್ತಮ ಅಂಶಗಳನ್ನು ಪೂರೈಸುತ್ತದೆ.
ಉತ್ತಮ ಆರೋಗ್ಯಕ್ಕಾಗಿ ಕೋಕಂ ಹಣ್ಣಿನ ಸೇವನೆ ಬಲು ಪ್ರಯೋಜನಕಾರಿ. ಈ ಹಣ್ಣಿನಿಂದ ತಯಾರಿಸುವ ಪಾನೀಯ, ಪದಾರ್ಥ, ಕಷಾಯವನ್ನು ನಾವು ಆಗಾಗ ಸೇವಿಸುತ್ತಿರಬೇಕು.