ವಾಣಿಜ್ಯ ಜಾಹಿರಾತು

ನಾವು ಚೆನ್ನಾಗಿ ಕಾಣಿಸಬೇಕು ಎಂದು ಯಾರಿಗೆ ಇಷ್ಟ ಇರಲ್ಲ ? ಎಲ್ಲಾರು ಸೌಂದರ್ಯಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುತ್ತಾರೆ. ಅದರಲ್ಲೂ ಹದಿಹರೆಯದ ಯುವಕ-ಯುವತಿಯರು ಒಂದು ಹೆಜ್ಜೆ ಮುಂದೆ.
ಸಂಜೆಯ ಹೊತ್ತಿಗೆ ಹಸಿವೆಯಾದಾಗ ಪಕೋಡಾ ಅಥವಾ ಖಾರದಕಡ್ಡಿ ಎಂದು ಕಡಲೆಹಿಟ್ಟಿಗೆ ಮೊರೆಹೋಗುವುದು ಸಾಮಾನ್ಯ. ಈ ಕಡಲೆಹಿಟ್ಟು ಅನೇಕ ರುಚಿಕರವಾದ ಪಾಕ ತಯಾರಿಕೆಯಲ್ಲಿ ಮಾತ್ರ ಬಳಸದೆ ಸೌಂದರ್ಯ ವೃದ್ಧಿಗಾಗಿಯೂ ಉಪಯೋಗಿಸುತ್ತಾರೆ.

ಚರ್ಮಕ್ಕಾಗಿ ಕಡಲೆಹಿಟ್ಟಿನ 11 ಪ್ರಯೋಜನಗಳು

1. ಟ್ಯಾನ್ ತೆಗೆಯುವಿಕೆ

4 ಚಮಚ ಕಡಲೆಹಿಟ್ಟಿಗೆ 1 ಚಮಚ ನಿಂಬೆರಸ, 1 ಚಮಚ ಮೊಸರು, 1 ಚಿಟಿಕೆ ಅರಶಿನ, 1 ಚಮಚ ರೋಸ್‌ವಾಟರ್ ನ್ನು ಸೇರಿಸಿ ಪೇಸ್ಟ್ ರೂಪದಲ್ಲಿ ಸಿದ್ಧಪಡಿಸಬೇಕು. ಈ ಪೇಸ್ಟ್ ಟ್ಯಾನ್ ಆದ ಮುಖ ಮತ್ತು ಕುತ್ತಿಗೆಯ ಭಾಗಗಳಿಗೆ ಹಚ್ಚಿ, ಒಣಗಲು ಬಿಡಬೇಕು. ಬಳಿಕ 20 ನಿಮಿಷಗಳ ನಂತರ ತಣ್ಣಗಿನ ನೀರಿನಲ್ಲಿ ಮುಖವನ್ನು ತೊಳೆಯಬೇಕು. ಇದನ್ನು ನಿಯಮಿತವಾಗಿ ಮಾಡುವುದರಿಂದ ಚರ್ಮದ ಕಂದುಬಣ್ಣವನ್ನು ತೆಗೆಯುವಲ್ಲಿ ಸಹಾಯಮಾಡುತ್ತದೆ.

2. ಚರ್ಮವನ್ನು ಹಗುರಗೊಳಿಸುತ್ತದೆ

4 ಚಮಚ ಕಡಲೆಹಿಟ್ಟಿಗೆ 1 ಚಮಚ ನಿಂಬೆರಸ, 1 ಚಮಚ ಹಸಿಹಾಲು ಪೇಸ್ಟ್ ರೂಪದಲ್ಲಿ ಸಿದ್ಧಪಡಿಸಬೇಕು. ಪೇಸ್ಟ್ ಮುಖಕ್ಕೆ ವೃತ್ತಾಕಾರದಲ್ಲಿ ಸ್ಕçಬ್ ಮಾಡಿ ಒಣಗಲು ಬಿಡಬೇಕು. ಬಳಿಕ 20 ನಿಮಿಷಗಳ ನಂತರ ತಣ್ಣಗಿನ ನೀರಿನಲ್ಲಿ ಮುಖವನ್ನು ತೊಳೆಯಬೇಕು.

3. ಎಣ್ಣೆ ಅಂಶವನ್ನು ಕಡಿಮೆ ಮಾಡಲು

ಕಡಲೆಹಿಟ್ಟು ಮತ್ತು ಮೊಸರು ಅಥವಾ ಹಸಿಹಾಲು ಮಿಶ್ರಣ ಮಾಡಿ ಪೇಸ್ಟ್ ಮಾಡಿಕೊಳ್ಳಬೇಕು. ಪೇಸ್ಟ್ ಮುಖಕ್ಕೆ ಹಚ್ಚಿ, ಒಣಗಲು ಬಿಡಬೇಕು. ಬಳಿಕ 20 ನಿಮಿಷಗಳ ನಂತರ ತಣ್ಣಗಿನ ನೀರಿನಲ್ಲಿ ಮುಖವನ್ನು ತೊಳೆಯಬೇಕು.

4.  ಮೊಡವೆ ಮತ್ತು ಕಲೆ

2 ಚಮಚ ಕಡಲೆಹಿಟ್ಟಿಗೆ 2 ಚಮಚ ಶ್ರೀಗಂಧದ ಪುಡಿ, 1 ಚಮಚ ಹಾಲು ಮತ್ತು 1 ಚಿಟಿಕೆ ಅರಶಿನದ ಪಡಿಯನ್ನು ಪೇಸ್ಟ್ ರೂಪದಲ್ಲಿ ಸಿದ್ಧಪಡಿಸಬೇಕು. ಪೇಸ್ಟ್ ಮುಖಕ್ಕೆ ಹಚ್ಚಬೇಕು. ಬಳಿಕ 20 ನಿಮಿಷಗಳ ನಂತರ ತಣ್ಣಗಿನ ನೀರಿನಲ್ಲಿ ಮುಖವನ್ನು ತೊಳೆಯಬೇಕು.

5. ಕಪ್ಪಾದ ಕುತ್ತಿಗೆ ಮತ್ತು ತೋಳುಗಳು

ಕಡಲೆಹಿಟ್ಟು, ಮೊಸರು, ನಿಂಬೆರಸ, ಚಿಟಿಕೆ ಅರಶಿನ ಪುಡಿಯ ಮಿಶ್ರಣವನ್ನು ತಯಾರಿಸಿ ಪೇಸ್ಟ್ ಮಾಡಿಕೊಳ್ಳಬೇಕು. ಪೇಸ್ಟ್ ಕುತ್ತಿಗೆ ಮತ್ತು ತೋಳುಗಳಿಗೆ ಹಚ್ಚಬೇಕು. ಬಳಿಕ 20 ನಿಮಿಷಗಳ ನಂತರ ತಣ್ಣಗಿನ ನೀರಿನಲ್ಲಿ ತೊಳೆಯಬೇಕು. ಇದನ್ನು ವಾರಕ್ಕೆ 3 ಬಾರಿಯಂತೆ ಮಾಡಬೇಕು.

6. ಮುಖದ ಕೂದಲನ್ನು ತೆಗೆಯಲು

ಸ್ವಲ್ಪ ಮೆಂತ್ಯ ಪುಡಿ ಮತ್ತು ಕಡಲೆಹಿಟ್ಟು ಮಿಶ್ರಣವನ್ನು ಸ್ವಲ್ಪ ನೀರಿನೋದಿಗೆ ಸೇರಿಸಿ ಪೇಸ್ಟ್ ಮಾಡಿಕೊಳ್ಳಬೇಕು. ಮುಖದಲ್ಲಿ ಅನಾವಶ್ಯಕ ಕೂದಲು ಇರುವ ಭಾಗಗಳಿಗೆ ಈ ಪೇಸ್ಟ್ ಹಚ್ಚಬೇಕು. ಮತ್ತು ತೊಳೆಯುವ ಸಮಯದಲ್ಲಿ ನಿಧಾನವಾಗಿ ಸ್ಕçಬ್ ಮಾಡಬೇಕು. ನಂತರ ತಣ್ಣಗಿನ ನೀರಿನಲ್ಲಿ ತೊಳೆಯಬೇಕು.

ನೀವು ಸುಂದರವಾಗಿ ಕಾಣಲು ಮತ್ತು ಸುಂದರ ತ್ವಚೆಯನ್ನು ಪಡೆಯಲು ಈ ವಿಧಾನಗಳನ್ನು ಪ್ರಯತ್ನಿಸಿ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.