ವಾಣಿಜ್ಯ ಜಾಹಿರಾತು
ಉಡುಪಿ: ಮಲ್ಪೆ ಸೈಂಟ್ ಮೇರಿಸ್ ಐಲ್ಯಾಂಡ್ ನಲ್ಲಿ ಪ್ರವಾಸಕ್ಕೆಂದು ಆಗಮಿಸಿದ್ದ ಕೇರಳ ಮೂಲದ ಮೂವರು ವಿದ್ಯಾರ್ಥಿಗಳು ಸಮುದ್ರ ಪಾಲಾಗಿದ್ದು, ಇಬ್ಬರ ಮೃತದೇಹ ಪತ್ತೆಯಾಗಿದೆ. ಇನ್ನೊಬ್ಬರ ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರಿದಿದೆ.
ಮೃತರನ್ನು ಕೇರಳ ರಾಜ್ಯದ ಕೊಟ್ಟಾಯಂ ನ ಮಂಗಳಂ ಇಂಜಿನಿಯರಿಂಗ್ ಕಾಲೇಜಿನ ಅಲೆನ್ ರೇಜಿ (22), ಅಮಲ್ ಸೀ ಅನಿಲ್( 22) ಮತ್ತು ಆ್ಯಂಟನಿ ಶೆಣೈ (21) ಎಂದು ಗುರುತಿಸಲಾಗಿದೆ.
ಕೊಟ್ಟಾಯಂ ನಿಂದ 42 ವಿದ್ಯಾರ್ಥಿಗಳು ಮತ್ತು ಇಬ್ಬರು ಪ್ರಾಧ್ಯಾಪಕರ ಜೊತೆ ಪ್ರವಾಸಕ್ಕೆ ಬಂದಿದ್ದು, ಸೈಂಟ್ ಮೇರಿಸ್ ಅಪಾಯಕಾರಿ ಸಮುದ್ರ ಭಾಗದಲ್ಲಿ ಈ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಆಟವಾಡಲು ಇಳಿದಾಗ, ಆಕಸ್ಮಿಕವಾಗಿ ಮುಳುಗಡೆಯಾಗಿದ್ದಾರೆ. ಇಬ್ಬರ ಮೃತದೇಹವನ್ನು ಮೇಲಕ್ಕೆತ್ತಿದ್ದು, ಇನ್ನೋರ್ವ ವಿದ್ಯಾರ್ಥಿಯ ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರಿದಿದೆ.
ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ವಾಣಿಜ್ಯ ಜಾಹಿರಾತು