ಮಂಗಳೂರು: ಸುರತ್ಕಲ್ ಸಮೀಪದ ಅತ್ಯಂತ ಪ್ರಸಿದ್ಧ ಶಿಬರೂರು ಕೊಡಮಣಿತ್ತಾಯ ದೈವಸ್ಥಾನದ ವರ್ಷಾವಧಿ ಉತ್ಸವವು ಶುಕ್ರವಾರ ಡಿ. 16 ರಿಂದ ಡಿ.23ರ ವರೆಗೂ ನಡೆಯಲಿದೆ.
ಡಿ.16ರಂದು ಸಂಜೆ 5 ಗಂಟೆಗೆ ನವಕ ಪ್ರಧಾನ ಕಲಶಾಭಿಷೇಕ, ಮಹಾಪೂಜೆ, ರಾತ್ರಿ 9 ಗಂಟೆಗೆ ಧ್ವಜಾರೋಹಣ ನೆರವೇರಲಿದೆ.
ಡಿ17ರಂದು ಬೆಳಗ್ಗೆ 7.30 ರಿಂದ 9 ಗಂಟೆಯ ವರೆಗೂ ತುಲಾಭಾರ ಸೇವೆ, ಬೆಳಗ್ಗೆ 10 ಗಂಟೆಗೆ ಉಳ್ಳಾಯ ದೈವದ ನೇಮೋತ್ಸವ, ಉರುಳು ಸೇವೆ, ಕಂಚೀಲು ಸೇವೆ ಹಾಗೂ ಮಧ್ಯಾಹ್ನ 1 ಗಂಟೆಗೆ ಮಹಾ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿದೆ. ಬಳಿಕ ರಾತ್ರಿ 11 ಗಂಟೆಗೆ ಕೊಡಮಣಿತ್ತಾಯ ದೈವದ ನೇಮೋತ್ಸವ ಹಾಗೂ ರಥೋತ್ಸವ ನಡೆಯಲಿದೆ.
ಡಿ18ರಂದು ರಾತ್ರಿ 9ರಿಂದ 12 ಗಂಟೆಯವರೆಗೂ ಶ್ರೀ ಕಾಂತೇರಿ ಧೂಮಾವತಿ ದೈವದ ನೇಮೋತ್ಸವ, 19ರಂದು ರಾತ್ರಿ 9ರಿಂದ 12ಗಂಟೆ ವರೆಗೆ ಶ್ರೀ ಸರಳ ಧೂಮಾವತಿ ದೈವದ ನೇಮೋತ್ಸವ, 20ರಂದು ರಾತ್ರಿ 9ರಿಂದ 12ಗಂಟೆ ವರೆಗೆ ಜಾರಂದಾಯ ದೈವದ ನೇಮೋತ್ಸವ, 21ರಂದು ರಾತ್ರಿ 9ರಿಂದ 12ಗಂಟೆ ವರೆಗೆ ಕೈಯ್ಯೂರ್ ಧೂಮಾವತಿ ದೈವದ ನೇಮೋತ್ಸವ, 22ರಂದು ರಾತ್ರಿ 9ರಿಂದ 12ಗಂಟೆ ವರೆಗೆ ಪಿಲಿ ಚಾಮುಂಡಿ ದೈವದ ನೇಮೋತ್ಸವ, 23ರಂದು ಬೆಳಗ್ಗೆ 9 ಗಂಟೆಗೆ ತುಲಾಭಾರ ಸೇವೆ, 10 ಗಂಟೆಗೆ ಧ್ವಜಾವರೋಹಣ ಹಾಗೂ ಮಧ್ಯಾಹ್ನ 2 ಗಂಟೆಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಇರಲಿದೆ.