ವಾಣಿಜ್ಯ ಜಾಹಿರಾತು

ಬೆಂಗಳೂರು : ಸ್ಯಾಂಡಲ್ ವುಡ್ ನ ಪ್ರತಿಭಾನ್ವಿತ ನಟ ರಕ್ಷಿತ್ ಶೆಟ್ಟಿ ಬಗ್ಗೆ ಕೆಲದಿನಗಳ ಹಿಂದೆ ಸುದ್ದಿವಾಹಿನಿಯೊಂದರಲ್ಲಿ ಪ್ರಸಾರವಾದ ಕಾರ್ಯಕ್ರಮ ಬಹಳಷ್ಟು ಟೀಕೆಗೆ ಗುರಿಯಾಗಿದ್ದು ನಿಮಗೆಲ್ಲಾ ಗೊತ್ತೇ ಇದೆ. ಈ ಬಗ್ಗೆ ಸ್ವತಃ ರಕ್ಷಿತ್ ಶೆಟ್ಟಿ ಕೂಡ ಪ್ರತಿಕ್ರಿಯಿಸಿ, ವಾಹಿನಿಯ ನಡೆಯನ್ನು ಖಂಡಿಸಿದ್ದಲ್ಲದೇ, ಇದಕ್ಕೆಲ್ಲಾ ಜು.11 ರಂದು ಉತ್ತರ ನೀಡುವೆ ಎಂದಿದ್ದರು. ರಕ್ಷಿತ್ ಶೆಟ್ಟಿಯವರ ಉತ್ತರಕ್ಕಾಗಿ ಕಾದುಕುಳಿತಿದ್ದವರಿಗೆ ಇದೀಗ ತನ್ನ ಹೊಸ ಚಿತ್ರದ ಟೀಸರ್ ರಿಲೀಸ್ ಮಾಡುವ ಮೂಲಕ ದೊಡ್ಡ ಸರ್ಪ್ರೈಸ್ ನೀಡಿದ್ದಾರೆ ಸಿಂಪಲ್ ಸ್ಟಾರ್. ರಕ್ಷಿತ್ ಶೆಟ್ಟಿ ಬರೆದು , ನಿರ್ದೇಶಿಸಿರುವ ‘ರಿಚರ್ಡ್ ಆಂಟನಿ’ ಎಂಬ ಟೈಟಲ್ ಹೊಂದಿರುವ ಚಿತ್ರದ ಜಬರ್ ದಸ್ತ್ ಟೀಸರ್ ನೋಡಿ ಅಭಿಮಾನಿಗಳಷ್ಟೇ ಅಲ್ಲ, ಎಲ್ಲರೂ ದಂಗಾಗಿದ್ದಾರೆ.

ರಕ್ಷಿತ್ ಶೆಟ್ಟಿ ಕನ್ನಡ ಚಿತ್ರರಂಗದ ಓರ್ವ ಪ್ರತಿಭಾನ್ವಿತ ನಟನಾಗಿಯಷ್ಟೇ ಗುರುತಿಸಿಕೊಂಡವರಲ್ಲ, ‘ಉಳಿದವರು ಕಂಡಂತೆ’ ಎಂಬ ವಿಭಿನ್ನಕಥಾಹಂದರದ ಸಿನಿಮಾವನ್ನು ನಿರ್ದೇಶಿಸುವ ಮೂಲಕ ತನ್ನ ಚೊಚ್ಚಲ ನಿರ್ದೇಶನದಲ್ಲಿಯೇ ಗೆದ್ದವರು. ಇದೀಗ ಉಳಿದವರು ಕಂಡಂತೆ ಸಿನಿಮಾದ ಮುಂದುವರಿದ ಭಾಗವೆಂಬಂತೆ ಕಾಣುತ್ತಿರುವ ‘ರಿಚರ್ಡ್ ಆಂಟನಿ’ ಚಿತ್ರವನ್ನೂ ತಾವೇ ನಿರ್ದೇಶಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ತನ್ನ ನಿರ್ದೇಶನದ ಕೈಚಳಕ ಏನು ಅನ್ನುವುದನ್ನು ತೋರಿಸಲು ಮುಂದಾಗಿದ್ದಾರೆ ರಕ್ಷಿತ್ ಶೆಟ್ಟಿ.

ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ‘ರಿಚರ್ಡ್ ಅಂಥೋನಿ’ ಎನ್ನುವ ಹೆಸರಿನ ಸಿನಿಮಾದ ಟೈಟಲ್ ಲಾಂಚ್ ಲಿಂಕ್ ಅನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ರಕ್ಷಿತ್ ‘ಮೊದಲು ನಮ್ಮ ಕೆಲಸ ಮಾತಾಡಲಿ .ಉಳಿದವೆಲ್ಲ ತದನಂತರ “ರಿಚರ್ಡ್ ಆಂಟನಿ” – ಮುಂದಿನ ಅಲೆ.. ನಿಮ್ಮ ಹೃದಯದ ದಡದಲ್ಲಿ ಜಾಗವಿರಿಸಿ.. ಸದಾ ನಿಮ್ಮ ಪ್ರೀತಿಯ ಆಶೀರ್ವಾದವಿರಲಿ ‘ ಎಂದು ಬರೆದುಕೊಂಡಿದ್ದಾರೆ. ಇದೇ ರಕ್ಷಿತ್ ಶೆಟ್ಟಿ ನೀಡಿರುವ ‘ತಕ್ಕ ಉತ್ತರ’ ಅಂತ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಅಂದ ಹಾಗೆ ‘ ರಿಚರ್ಡ್ ಅಂಥೋನಿ’ ಚಿತ್ರ ‘ಉಳಿದವರು ಕಂಡಂತೆ’ ಚಿತ್ರದ ಮುಂದುವರಿದ ಭಾಗವಿದ್ದಂತೆ ಗೋಚರಿಸುತ್ತಿದೆ.ಚಿತ್ರವನ್ನು ಸ್ವತಃ ರಕ್ಷಿತ್ ಶೆಟ್ಟಿ ನಿರ್ದೇಶಿಸಲಿದ್ದು,, ವಿಜಯ್ ಕಿರಗಂದೂರ್ ನಿರ್ಮಾಪಕರಾಗಿ , ಅಜನೀಶ್ ಲೋಕೇಶ್ ಸಂಗೀತ ಸಂಯೋಜನೆ ಮಾಡಲಿದ್ದಾರೆ.
‘ಉಳಿದವರು ಕಂಡಂತೆ’ ಚಿತ್ರದಲ್ಲಿ ರಿಚಿ ಎಂಬ ಪಾತ್ರದಲ್ಲಿ ಎಲ್ಲರ ಮನಗೆದ್ದಿದ್ದ ರಕ್ಷಿತ್ ಶೆಟ್ಟಿ, ಇದೀಗ ಮತ್ತೊಮ್ಮೆ ಕಮ್ ಬ್ಯಾಕ್ ಮಾಡಲಿದ್ದಾರೆ ಅನ್ನುವ ಸುದ್ದಿಯಿಂದ ಅಭಿಮಾನಿಗಳಂತೂ ಫುಲ್ ಖುಷಿಯಲ್ಲಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ರಿಚಿ ರೀ ಎಂಟ್ರಿ ಹೊಸ ಮೈಲಿಗಲ್ಲು ಸೃಷ್ಟಿಸುವುದರಲ್ಲಿ ಅನುಮಾನವಿಲ್ಲ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.ಟೈಟಲ್ ಲಾಂಚ್ ಆದ 5 ಗಂಟೆಯಲ್ಲೇ 1 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದು ದಾಪುಗಾಲಿಡುತ್ತಿದೆ ರಿಚರ್ಡ್ ಆಂಥೋನಿ.

Related Article

ನಾವು ಬೇರೆಯವರಿಗೆ ಮರ್ಯಾದೆ ಕೊಟ್ಟರೆ ಮಾತ್ರ ನಮಗೆ ಮರ್ಯಾದೆ ಸಿಗೋದು: ನಟ ರಕ್ಷಿತ್​ ಪರ ನಿರ್ಮಾಪಕ ಪುಷ್ಕರ್​ ಟ್ವೀಟ್

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.