ವಾಣಿಜ್ಯ ಜಾಹಿರಾತು

ಮೂಡುಬಿದಿರೆ : ಕಳೆದೆರಡು ದಿನಗಳ ಹಿಂದೆ ಮಹಾವೀರ ಕಾಲೇಜು ಬಳಿಯ ಕೀರ್ತಿನಗರದಲ್ಲಿ ಪತ್ತೆಯಾಗಿರುವ ಗೋವಿನ ರುಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರು ಯಾವುದೇ ಧರ್ಮಕ್ಕೆ ಸೇರಿದವರಾಗಿದ್ದರೂ ಅವರನ್ನು ಕೂಡಲೆ ಪೊಲೀಸ್ ತನಿಖೆ ನಡೆಸಿ ಬಂಧಿಸುವಂತೆ ವಿಹಿಂಪ ಬಜರಂಗದಳ ಮೂಡುಬಿದಿರೆ ಪ್ರಖಂಡ ಆಗ್ರಹಿಸಿದೆ.

ಅಕ್ರಮ ಗೋ ಸಾಗಾಟ ಅದೊಂದು ವ್ಯಾಪಾರವಾಗಿದೆ. ಇತ್ತೀಚಿನ ದಿನಗಳಲ್ಲಿ ಕೆಲ ಹಿಂದೂಗಳು ಕೂಡಾ ಹಣದಾಸೆಗಾಗಿ ಒಂದು ಕೋಮಿನವರ ಜತೆ ಸೇರಿಕೊಂಡು ಸಹಕಾರ ನೀಡುವ ಮೂಲಕ ಬಲಿಯಾಗುತ್ತಿದ್ದಾರೆ. ಗೋ ಮತ್ತು ಹಿಂದುತ್ವ ರಕ್ಷಣೆ ವಿಚಾರದಲ್ಲಿ ವಿ.ಹಿಂ.ಪ ಸಹಿತ ಯಾವುದೇ ಹಿಂದೂ ಸಂಘಟನೆಗಳು ರಾಜಿ ಮಾಡಿಕೊಡುವುದಿಲ್ಲ. ವಿಶ್ವ ಹಿಂದೂ ಪರಿಷತ್‌ನ ಆಶಯಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ. ಕೇವಲ ಬಜರಂಗದಳ, ವಿಹಿಂಪ ಮಾತ್ರ ಇದನ್ನು ತಡೆಯುವುದಲ್ಲ ಬದಲಾಗಿ ಸಾರ್ವಜನಿಕರು ಕೂಡಾ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಮೂಡುಬಿದಿರೆಯ ವಿಹಿಂಪ ಕಾರ್ಯಧ್ಯಕ್ಷ ಕೆ ಶ್ಯಾಮ ಹೆಗ್ಡೆ ಹೇಳಿದರು.

ಧರ್ಮದ ನೆಲೆಯಲ್ಲಿ ನಾವು ಹೋರಾಟ ಮಾಡುತ್ತೇವೆ ಇದರಲ್ಲಿ ನಮ್ಮ ಅಥವಾ ಯಾವುದೇ ಸರಕಾರವಿದ್ದರೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಕಾರ್ಯದರ್ಶಿ ಸುಚೇತನ್ ಜೈನ್ ಹೇಳಿದರು. ಬಜರಂಗದಳ ಸಂಯೋಜಕ ಅಭಿಲಾಷ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.