ವಾಣಿಜ್ಯ ಜಾಹಿರಾತು

ಎಣ್ಣೆಯುಕ್ತ ಚರ್ಮ ಹೊಂದಿರುವರು ತಮ್ಮ ತ್ವಚೆಯ ಬಗ್ಗೆ ಎಷ್ಟು ಕಾಳಜಿ ವಹಿಸಿದರೂ ಸಾಕಾಗುವುದಿಲ್ಲ. ಮುಖದಲ್ಲಿ ಮೊಡವೆಗಳು ಉಂಟಾಗುತ್ತದೆ. ಅದರಿಂದಾಗುವ ಕಲೆ, ಬ್ಲಾಕ್ ಹೆಡ್ಸ್‌ಗಳು ನಿಮ್ಮನ್ನು ತಲೆನೋವಿಗೆ ಕಾರಣವಾಗುತ್ತದೆ. ಆದರೆ ಎಣ್ಣೆಯುಕ್ತ ತ್ವಚೆ ಹೊಂದಿರುವವರ ಮುಖದ ಸಮಸ್ಯೆಗಳಿಗೆಲ್ಲಾ ಪೇರಳೆ ಎಲೆ ಸಹಾಯ ಮಾಡುತ್ತದೆ.

ಇದುವರೆಗೆ ಪ್ರಯೋಜನವಿಲ್ಲ ಎಂದು ಎಸೆಯುತ್ತಿದ್ದ ಪೇರಳೆ ಎಲೆಯಲ್ಲಿ ನಿಮ್ಮ ತ್ವಚೆ ಸಮಸ್ಯೆಯನ್ನು ನಿವಾರಿಸುವ ಶಕ್ತಿ ಇದೆ. ಇದರಿಂದ ಮೊಡವೆಗಳು ಕಡಿಮೆಯಾಗುವುದಲ್ಲದೇ, ಹೊಳೆಯುವಂತೆಯೂ ಮಾಡುತ್ತದೆ.

ಪೇರಳೆ ಎಲೆಯಲ್ಲಿರುವ ಗುಣಗಳು

ನಮ್ಮಲ್ಲಿ ಹಲವರಿಗೆ ಪೇರಳೆ ಹಣ್ಣಿನ ಪ್ರಯೋಜನಗಳ ಬಗ್ಗೆ ತಿಳಿದಿದೆ. ಆದರೆ ಅದರ ಎಲೆಗಳು ಸಹ ಹಲವಾರು ಔಷಧೀಯ ಗುಣಗಳನ್ನು ಹೊಂದಿವೆ ಎಂಬುದು ತಿಳಿದಿರುವುದಿಲ್ಲ.
ತಾಜಾ ಪೇರಳೆ ಎಲೆಗಳು ಉತ್ಕರ್ಷಣ ನಿರೋಧಕಗಳು, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು, ಇದನ್ನು ನೈಸರ್ಗಿಕ ನೋವು ನಿವಾರಕ ಎಂದು ಪರಿಗಣಿಸಲಾಗುತ್ತದೆ.

ಮುಖದ ಎಣ್ಣೆ ಕಡಿಮೆ ಮಾಡಲು

ಪೇರಳೆ ಎಲೆಗಳಿಗೆ ನೀರನ್ನು ಬೆರೆಸಿ ಪೇಸ್ಟ್ ಮಾಡಿ. ಪೇಸ್ಟ್‌ನ್ನು 2 ಚಮಚ ತೆಗೆದುಕೊಂಡು ಅದಕ್ಕೆ 2 ಚಮಚ ತಾಜಾ ನಿಂಬೆ ರಸವನ್ನು ಸೇರಿಸಿ. ಈ ಮಿಶ್ರಣವನ್ನು ಮುಖದ ಮೇಲೆ ಹಚ್ಚಿ. ಅರ್ಧ ಘಂಟೆಯವರೆಗೆ ಬಿಡಿ. ತಂಪಾದ ನೀರಿನಿಂದ ಮುಖವನ್ನು ತೊಳೆಯಿರಿ. ಉಳಿದಿರುವ ಪೇಸ್ಟ್‌ನ್ನು (ನಿಂಬೆ ರಸ ಬೆರೆಸದೇ ಇರುವುದು) 2-3 ದಿನಗಳವರೆಗೆ ಬಳಸಬಹುದು. ಅದನ್ನು ಫ್ರಿಡ್ಜನಲ್ಲಿಟ್ಟು, ಪ್ರತಿದಿನ ಬಳಸಬಹುದು.

ಮೊಡವೆಗಳನ್ನು ಕಡಿಮೆ ಮಾಡಲು

ಪೇರಳೆ ಎಲೆಗಳನ್ನು ನೀರಿನೊಂದಿಗೆ ಬೆರೆಸಿ ದಪ್ಪ ಪೇಸ್ಟ್ ಮಾಡಿ. ಒಂದು ಚಮಚ ಈ ಪೇಸ್ಟನ್ನು ತೆಗೆದುಕೊಂಡು ಅದಕ್ಕೆ ಒಂದು ಚಿಟಿಕೆ ಅರಿಶಿನ ಮತ್ತು ಒಂದು ಚಮಚ ಅಲೋವೆರಾ ಜೆಲ್ ಸೇರಿಸಿ. ಈ ಮಿಶ್ರಣವನ್ನು ತ್ವಚೆಯ ಮೇಲೆ ಹಚ್ಚಿ. 20 ನಿಮಿಷಗಳ ಕಾಲ ಬಿಡಿ. ತಂಪಾದ ನೀರಿನಿಂದ ತೊಳೆಯಿರಿ.

ಕಿರಿಕಿರಿಯುಕ್ತ ಚರ್ಮದ ನಿವಾರಣೆಗಾಗಿ

10 ನಿಮಿಷಗಳ ಕಾಲ ಪೇರಳೆ ಎಲೆಗಳನ್ನು ನೀರಿನಲ್ಲಿ ಕುದಿಸಿ. ಸ್ಟವ್ ಆಫ್ ಮಾಡಿ ಮತ್ತು ಎಲೆಗಳನ್ನು ತೆಗೆದು, ನೀರನ್ನು ಸೋಸಿಕೊಳ್ಳಿ. ನೀರು ತಣ್ಣಗಾಗಲು ಬಿಡಿ. ಈಗ ಈ ತಣಿದ ನೀರನ್ನು ಸ್ಪ್ರೇ ಬಾಟಲಿಗೆ ಹಾಕಿ, ನಿಮ್ಮ ತ್ವಚೆಯ ಮೇಲೆ ಸಿಂಪಡಿಸಿ. ಸೊಳ್ಳೆ ಕಡಿತದಿಂದಾದ ಕಿರಿಕಿರಿ ಅಥವಾ ಉರಿಯೂತಕ್ಕೆ ಇದನ್ನು ಬಳಸಬಹುದು. ಈ ಎಲೆಯ ನೀರು ತ್ವಚೆಯ ಕಿರಿಕಿರಿಯನ್ನು ಶಮನಗೊಳಿಸುತ್ತದೆ.

ಆದ್ದರಿಂದ ಮುಂದಿನ ಬಾರಿ ನೀವು ಮನೆಗೆ ಪೇರಳೆಯನ್ನು ತಂದರೆ, ಅದರಲ್ಲಿ ಎಲೆಗಳಿದ್ದರೆ, ಆ ಎಲೆಗಳನ್ನು ಎಸೆಯಬೇಡಿ. ಅವುಗಳನ್ನು ಸಂಗ್ರಹಿಸಿ. ನಿಮ್ಮ ಚರ್ಮದ ಆರೈಕೆಗಾಗಿ ಬಳಸಿ. ಇವು ನಮ್ಮ ಚರ್ಮವನ್ನು ಆರೋಗ್ಯಕರವಾಗಿ ಮತ್ತು ಆರಾಮದಾಯಕವಾಗಿಡಲು ಪ್ರಕೃತಿ ನೀಡಿದ ಅದ್ಭುತ ಪರಿಹಾರಗಳಾಗಿವೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.