ವಾಣಿಜ್ಯ ಜಾಹಿರಾತು

ದೇಹದ ತೂಕ ಬಲು ಸುಲಭವಾಗಿ ಇಳಿಸಲು ಸಾಕಷ್ಟು ಹಣ್ಣು ಹಾಗೂ ತರಕಾರಿಗಳು ಸಹಾಯ ಮಾಡುತ್ತವೆ. ಅವುಗಳಲ್ಲಿ ಕಿತ್ತಳೆ ಹಾಗೂ ಸೌತೆಕಾಯಿ ಪಾತ್ರವೂ ಬಹಳ ಪ್ರಮುಖವಾದದ್ದು.

ಈ ಎರಡು ನೈಸರ್ಗಿಕ ಘಟಕಗಳಿಂದ ಸಿಗುವ ರಸವುಗಳಿಂದ ತೂಕವನ್ನು ಬಹಬೇಗ ಇಳಿಸಬಹುದು. ಈ ಹಣ್ಣುಗಳ ರಸಗಳ ಸಂಯೋಜನೆಯು ಶಕ್ತಿಯುತವಾದ ಶುದ್ಧೀಕರಣದ ಪೇಯಗಳಾಗಿ ಕಾರ್ಯನಿರ್ವಹಿಸುತ್ತವೆ. ಇವು ದೇಹದ ತೂಕ ನಷ್ಟಗೊಳಿಸುವುದರ ಜೊತೆಗೆ ಆರೋಗ್ಯದ ಸುಧಾರಣೆಗೂ ಸಹಾಯ ಮಾಡುತ್ತದೆ.

ಕ್ಯಾರೆಟ್ ಮತ್ತು ಸೌತೆಕಾಯಿ ಪಾನೀಯವನ್ನು ಮನೆಯಲ್ಲಿಯೇ ಹೇಗೆ ತಯಾರಿಸುವುದು? ಎನ್ನುವುದನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ.

2 ಕ್ಯಾರೆಟ್ ಮತ್ತು 1/2 ಸೌತೆಕಾಯನ್ನು ಚೆನ್ನಾಗಿ ತೊಳೆದುಕೊಂಡು, ಸಿಪ್ಪೆಯನ್ನು ತೆಗೆದು, ಬಳಿಕ ಸಣ್ಣದಾಗಿ ಹೆಚ್ಚಿಕೊಳ್ಳಿ.
ಅದಕ್ಕೆ 1ಕಿತ್ತಳೆ ಹಣ್ಣಿನ ರಸವನ್ನು ಸೇರಿಸಿ ಮಿಕ್ಸಿಗೆ ಹಾಕಿ. ಸ್ವಲ್ಪ ಉಪ್ಪು, ಸಕ್ಕರೆ ಮತ್ತು ಒಂದು ಗ್ಲಾಸ್ ನೀರನ್ನು ಸೇರಿಸಿ, ಮೃದುವಾದ ಪೇಸ್ಟ್‌ನಂತೆ ರುಬ್ಬಿಕೊಳ್ಳಿ.

ನಂತರ ಒಂದು ಗ್ಲಾಸ್‌ಗೆ ಸೋಸಿಕೊಳ್ಳಿ. ಸಿದ್ಧವಾದ ಪಾನೀಯವನ್ನು ಫ್ರಿಜ್‌ನಲ್ಲಿಟ್ಟು ತಣ್ಣಗಾಗಿಸಿಕೊಂಡು ಅಥವಾ ಹಾಗೆಯೇ ಸವಿಯಬಹುದು.
ಈ ಜ್ಯೂಸ್‌ನ್ನು ವಾರದಲ್ಲಿ ಮೂರು ಬಾರಿ ಕುಡಿಯುವುದರಿಂದ ನಿಮ್ಮ ಆರೋಗ್ಯ ಚೆನ್ನಾಗಿರುವುದರ ಜೊತೆಗೆ, ನಿಮ್ಮ ದೇಹದಲ್ಲಿ ಹೆಚ್ಚಾಗಿರುವ ಕೊಬ್ಬಿನಂಶವನ್ನು ತೆಗೆದು ಹಾಕುತ್ತದೆ.

ವಾಣಿಜ್ಯ ಜಾಹಿರಾತು

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.