ಮುಂಬೈ: ಮುಂಬೈ – ಮಂಗಳೂರು ಪ್ರಯಾಣದ ವೇಳೆ ಇಂಡಿಗೋ ಏರ್ ಲೈನ್ಸ್ ನ ವಿಮಾನದ ಫಸ್ಟ್ ಆಫೀಸರ್ ತುಳು ಭಾಷೆಯಲ್ಲಿ ಮಾಡಿರುವ ಅನೌನ್ಸ್ ಮೆಂಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮುಂಬೈನಿಂದ ಮಂಗಳೂರಿಗೆ ಪ್ರಯಾಣಕ್ಕೆ ಸಿದ್ದವಾಗಿದ್ದ ಇಂಡಿಗೋ ವಿಮಾನದಲ್ಲಿ ಪೈಲೆಟ್ ಪ್ರದೀಪ್ ಪದ್ಮಶಾಲಿ ಎಂಬುವವರು ಪ್ರಕಟಣೆಯನ್ನು ಬರೆದು ತುಳುವಿನಲ್ಲಿ ಓದಿ ಹೇಳಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೇಶದಲ್ಲಿನ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕ ಹಾಗೂ ಸಾರ್ವಜನಿಕ ಪ್ರಕಟಣೆಯನ್ನು ಮೊದಲು ಸ್ಥಳೀಯ ಭಾಷೆಯಲ್ಲಿ ಹೊರಡಿಸಿ ಆನಂತರ ಹಿಂದಿ ಹಾಗೂ ಇಂಗ್ಲಿಷ್‍ನಲ್ಲಿ ಮಾಡಬೇಕು ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಆದೇಶವಿದೆ. ಈ ಪ್ರಕಾರ ವಿಮಾನ ನಿಲ್ದಾಣಗಳಲ್ಲಿನ ಎಲ್ಲ ಮೌಕಿಕ ಪ್ರಕಟಣೆಗಳನ್ನು ಮೊದಲು ಸ್ಥಳೀಯ ಭಾಷೆಯಲ್ಲಿ ಅನೌನ್ಸ್ ಮೆಂಟ್ ಹೊರಡಿಸಬೇಕು.
ಅದರಂತೆ ಮುಂಬೈನಿಂದ ಮಂಗಳೂರಿಗೆ ಡಿ.24 ರಂದು ಪ್ರಯಾಣಕ್ಕೆ ಸಿದ್ದವಾದ ಇಂಡಿಗೋ ವಿಮಾನದಲ್ಲಿ ಪೈಲೆಟ್ ಪ್ರದೀಪ್ ಪದ್ಮಶಾಲಿ ತುಳುವಿನಲ್ಲಿ ಮಾಡಿರುವ ಅನೌನ್ಸ್ ಮೆಂಟ್ ಗೆ ತುಳುವರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.